ಮೈಕೊರೆಯುವ ಚಳಿಗೆ ತತ್ತರಿಸಿದ ಜನತೆ: ಬೀದರ್‌ನಲ್ಲಿ ಕನಿಷ್ಠ ತಾಪಮಾನ ದಾಖಲು

By Kannadaprabha NewsFirst Published Dec 22, 2020, 10:45 AM IST
Highlights

ರಾಜ್ಯದಲ್ಲಿ ಈ ವರ್ಷದ ಅತ್ಯಂತ ಕನಿಷ್ಠ ತಾಪಮಾನ| ವಿಜಯಪುರದಲ್ಲಿ 10 ಡಿಗ್ರಿ ಸೆಲ್ಸಿಯಸ್‌, ಧಾರವಾಡ 11.8, ದಾವಣಗೆರೆ 12.3, ಹಾಸನ 12.4 ಹಾಗೂ ಶಿವಮೊಗ್ಗದಲ್ಲಿ 13.8 ಡಿ.ಸೆ. ಕನಿಷ್ಠ ತಾಪಮಾನ ದಾಖಲು|ಅಧಿಕ ಚಳಿ, ಮಧ್ಯಾಹ್ನ ಒಣ ಹವೆ|  

ಬೆಂಗಳೂರು(ಡಿ.22): ರಾಜ್ಯದಲ್ಲಿ ಚಳಿಯ ಪ್ರಮಾಣ ದಿನೇ ದಿನೆ ಹೆಚ್ಚುತ್ತಿದ್ದು, ಬೀದರ್‌ ಜಿಲ್ಲೆಯಲ್ಲಿ ಸೋಮವಾರ ಅತ್ಯಂತ ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದು ರಾಜ್ಯದಲ್ಲಿ ಈ ವರ್ಷ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಿದೆ.

ಮಹಾರಾಷ್ಟ್ರದಿಂದ ಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲಿ ಚಳಿ ಹೆಚ್ಚಾಗಿದೆ. ಬೀದರ್‌ನಲ್ಲಿ ಸೋಮವಾರ ಗರಿಷ್ಠ 26.4 ಹಾಗೂ ಕನಿಷ್ಠ 6.0 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಮೂರು ವರ್ಷದ ಬಳಿಕ ಅತಿ ಹೆಚ್ಚು ಚಳಿ ಬೀದರ್‌ನಲ್ಲಿ ದಾಖಲಾಗಿದೆ. ಈ ಚಳಿ ಕನಿಷ್ಠ ವಾಡಿಕೆ ಚಳಿಗಿಂತ ಶೇ.9.5ರಷ್ಟು ಅಧಿಕವಾಗಿದೆ.

ಕನಿಷ್ಠ ತಾಪಮಾನ ದಾಖಲು: ಇನ್ನೂ ಹೆಚ್ಚಾಗಲಿದೆ ಮೈಕೊರೆಯುವ ಚಳಿ

ಕಳೆದ ಮೂರು ವರ್ಷದ ಹಿಂದೆ 6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಬೀದರ್‌ನಲ್ಲೇ ದಾಖಲಾಗಿತ್ತು. ಇದೀಗ ಮತ್ತೆ ಎರಡನೇ ಬಾರಿ ಅಷ್ಟೇ ಪ್ರಮಾಣದಲ್ಲಿ ಚಳಿ ಕಂಡುಬಂದಿದೆ. ಇನ್ನು 2020ರ ನವೆಂಬರ್‌ 10ರಂದು ಬೀದರ್‌ನಲ್ಲಿ 7.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಒಳನಾಡಿನಲ್ಲೇ ಹೆಚ್ಚು ಚಳಿ ದಾಖಲಾಗುತ್ತಿದ್ದು, ಬೀದರ್‌ ಬಿಟ್ಟರೆ ವಿಜಯಪುರದಲ್ಲಿ 10 ಡಿಗ್ರಿ ಸೆಲ್ಸಿಯಸ್‌, ಧಾರವಾಡ 11.8, ದಾವಣಗೆರೆ 12.3, ಹಾಸನ 12.4 ಹಾಗೂ ಶಿವಮೊಗ್ಗದಲ್ಲಿ 13.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ. ಹೀಗಾಗಿ ಬೆಳಗ್ಗೆ ಅಧಿಕ ಚಳಿ, ಮಧ್ಯಾಹ್ನ ಒಣ ಹವೆ ಕಂಡುಬರುತ್ತಿದೆ. ಇನ್ನು ರಾಜ್ಯದ ಗರಿಷ್ಠ ತಾಪಮಾನ ಹೊನ್ನಾವರದಲ್ಲಿ 34.2 ಡಿ.ಸೆ. ದಾಖಲಾಗಿದ್ದು, ಉತ್ತರ ಒಳನಾಡಿನ ಬೆಳಗಾವಿ 34.2, ದಕ್ಷಿಣ ಒಳನಾಡಿನ ಆಗುಂಬೆಯಲ್ಲಿ 30.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.
 

click me!