ಗಡಿಭಾಗ ಬೆಳಗಾವಿಯಲ್ಲಿ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಬಂದಿರುವ ಎಂಇಎಸ್ ಈಗ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸುವ ಮೂಲಕ ಮತ್ತೆ ತನ್ನ ಉದ್ಧಟತನ ಮೆರೆದಿದೆ.
ಬೆಳಗಾವಿ (ಜೂ.28): ಗಡಿಭಾಗ ಬೆಳಗಾವಿಯಲ್ಲಿ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಲೇ ಬಂದಿರುವ ಎಂಇಎಸ್ ಈಗ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸುವ ಮೂಲಕ ಮತ್ತೆ ತನ್ನ ಉದ್ಧಟತನ ಮೆರೆದಿದೆ. ಇದೆ ವೇಳೆ ಮರಾಠ ಏಕೀಕರಣ ಸಮಿತಿಯ ಪ್ರತಿಭಟನೆಯನ್ನು ಖಂಡಿಸಿ ಪ್ರತಿಭಟಿಸಲು ಮುಂದಾದ ನಾನಾ ಕನ್ನಡಪರ ಸಂಘಟನೆಗಳ ಮುಖಂಡರನ್ನು ಸೋಮವಾರ ಪೊಲೀಸರು ಬಂಧಿಸಿದರು. ಈ ಮೂಲಕ ಗಡಿಭಾಗದ ಬೆಳಗಾವಿಯಲ್ಲಿ ಇದುವರೆಗೆ ಶಾಂತವಾಗಿದ್ದ ಕನ್ನಡ ಮತ್ತು ಮರಾಠಿಗರ ನಡುವೆ ಮತ್ತೆ ದ್ವೇಷದ ವಾತಾವರಣ ಸೃಷ್ಟಿಸುವಂತೆ ಮಾಡಿದ್ದಾರೆ ಎಂಇಎಸ್ ಪುಂಡರು.
ಎಂಇಎಸ್ ಉದ್ಧಟತನ: ಸರ್ಕಾರಿ ದಾಖಲಾತಿ ಪತ್ರವನ್ನು ಮರಾಠಿಯಲ್ಲಿ ನೀಡಬೇಕು ಎಂದು ಆಗ್ರಹಿಸಿ ನಗರದ ಸದಾರ್ಸ್ ಮೈದಾನದಿಂದ ರಾರಯಲಿ ನಡೆಸಿದ ಎಂಇಎಸ್ ನಾಯಕರು ಹಾಗೂ ಕಾರ್ಯಕರ್ತರು, ರಾಜ್ಯ ಸರ್ಕಾರವನ್ನು ನಾಲಾಯಕ್ ಸರ್ಕಾರ ಎಂದು ಘೋಷಣೆ ಕೂಗಿ ಉದ್ದಟತನ ಮೆರೆದಿದ್ದಾರೆ.
ಶವವಿಟ್ಟು ಪ್ರೊಟೆಸ್ಟ್: ಡಿಸಿ ಮನವೊಲಿಕೆ ಬಳಿಕ ಆಗಮಿಸಿದ ರೈತ ಮುಖಂಡರಿಂದ ಹೈಡ್ರಾಮಾ
ಬೆಳಗಾವಿಯಲ್ಲಿ ಮರಾಠಿಗರ ಸಂಖ್ಯೆ ಅಧಿಕವಾಗಿರುವಾಗ ಕರ್ನಾಟಕ ಸರ್ಕಾರ ಸ್ಥಳೀಯ ಭಾಷೆಗೆ ಆದ್ಯತೆ ಕೊಡುವ ಅಗತ್ಯ ಇದೆ. ಆದ್ದರಿಂದ ಸರ್ಕಾರದ ದಾಖಲಾತಿಯ ಕಾಗದ ಪತ್ರಗಳನ್ನು ಮರಾಠಿ ಭಾಷೆಯಲ್ಲಿ ನೀಡಬೇಕು. ನಗರದ ಪ್ರಮುಖ ವೃತ್ತಗಳಲ್ಲಿ ಮರಾಠಿ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕು ಎಂದು ಆಗ್ರಹಿಸಿದರು. ಮಾತ್ರವಲ್ಲದೆ ಕರ್ನಾಟಕ ಸರ್ಕಾರವನ್ನು ನಾಲಾಯಕ್ ಸರ್ಕಾರ ಎಂದು ಹೀಗಳೆದರು. ಕೂಡಲೇ ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರ ರೂಪ ಪಡೆಯುತ್ತದೆ ಎಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕನ್ನಡಿಗರ ಆಕ್ರೋಶ: ಸರ್ಕಾರಿ ಕಾಗದ ಪತ್ರಗಳನ್ನು ಮರಾಠಿ ಭಾಷೆಯಲ್ಲಿಯೇ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ ಎಂಇಎಸ್ ಪ್ರತಿಭಟನಾ ರಾರಯಲಿ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಎಂಇಎಸ್ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿ ರಾಣಿ ಚನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಕನ್ನಡಪರ ಸಂಘಟನೆ ಆಕ್ರೋಶ: ಸರ್ಕಾರಿ ದಾಖಲಾತಿ ಪತ್ರವನ್ನು ಮರಾಠಿಯಲ್ಲಿ ನೀಡಬೇಕು ಎಂದು ಆಗ್ರಹಿಸಿ ನಗರದ ಸದಾರ್ಸ್ ಮೈದಾನದಿಂದ ರಾರಯಲಿ ನಡೆಸಿದ ಎಂಇಎಸ್ ನಾಯಕರು ಹಾಗೂ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುವ ಮೂಲಕ ಪುಂಡಾಟಿಕೆ ಮೆರೆದರು. ಇದೆ ವೇಳೆ ಎಂಇಎಸ್ ನಾಯಕ ಬೇಡಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದ ಘಟನೆ ಸೋಮವಾರ ನಡೆಯಿತು.
7 ಭ್ರೂಣಗಳ ಪತ್ತೆ ಕೇಸ್‌ಗೆ ಟ್ವಿಸ್ಟ್: ಹೆರಿಗೆ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಸೀಜ್
ಎಂಇಎಸ್ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿ ರಾಣಿ ಚನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಬೆಳಗಾವಿಯಲ್ಲಿ ಮರಾಠಿಗರ ಸಂಖ್ಯೆ ಅಧಿಕವಾಗಿರುವಾಗ ಕರ್ನಾಟಕ ಸರ್ಕಾರ ಸ್ಥಳೀಯ ಭಾಷೆಗೆ ಆದ್ಯತೆ ಕೊಡುವ ಅಗತ್ಯ ಇದೆ. ಆದ್ದರಿಂದ ಸರ್ಕಾರದ ದಾಖಲಾತಿಯ ಕಾಗದ ಪತ್ರಗಳನ್ನು ಮರಾಠಿ ಭಾಷೆಯಲ್ಲಿ ನೀಡಬೇಕು. ನಗರದ ಪ್ರಮುಖ ವೃತ್ತಗಳಲ್ಲಿ ಮರಾಠಿ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕು ಎಂದು ಆಗ್ರಹಿಸಿ ಎಂಇಎಸ್ ನಾಯಕರು ಪ್ರತಿಭಟನೆ ನಡೆಸಿದರು.