ಅಯೋಧ್ಯೆಯಲ್ಲಿ ಇಡಲಾಗಿದ್ದ ರಾಮನ ವಿಗ್ರಹವನ್ನು ನೋಡಿದರೆ ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸ್ತು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ತುಮಕೂರು (ಜ.17): ನಾವು ನಮ್ಮೂರಿನ ಶ್ರೀರಾಮ ದೇವಸ್ಥಾನಕ್ಕೆ ಹೋದರೆ ಅಲ್ಲೊಂದು ವೈಬ್ರೇಷನ್ ಉಂಟಾಗುತ್ತದೆ. ಆದರೆ, ಅಯೋಧ್ಯೆಯಲ್ಲಿ ಇಡಲಾಗಿದ್ದ ರಾಮನ ವಿಗ್ರಹವನ್ನು ನೋಡಿದರೆ ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸ್ತು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವದಲ್ಲಿ ಮಾತನಾಡಿದ್ದ ಅವರು, ನಾನು ಬಾಬ್ರಿ ಮಸೀದಿ ಬೀಳಿಸಿದ್ದಾಗ ಹೋಗಿದ್ದೆನು. ಆಗ ಒಂದು ಟೆಂಟ್ ಲ್ಲಿ ಎರಡು ಗೊಂಬೆ ಇಟ್ಟು ಇದೇ ಶ್ರೀರಾಮ ಅಂತಾ ಹೇಳುತ್ತಿದ್ದರು. ನಾವು ನಮ್ಮೂರಿನ ರಾಮನ ದೇವಸ್ಥಾನಕ್ಕೆ ಹೋದ್ರೆ ಅಲ್ಲೊಂಥರಾ ವೈಬ್ರೇಶ್ರನ್ ಭಕ್ತಿ ಬರುತ್ತದೆ. ಅಲ್ಲಿ ಅವತ್ತು ನನಗೇನು ಅನಿಸ್ಲಿಲ್ಲಾ. ಟೂರಿಂಗ್ ಟಾಕೀಸ್ ಅಲ್ಲಿ ಗೊಂಬೆ ಇಟ್ಟಿದ್ದಾರೆ ಅನಿಸ್ತು. ಇವತ್ತು ಅಲ್ಲಿ ಏನ್ ಮಾಡವ್ರೆ ಗೊತ್ತಿಲ್ಲಾ, ನೋಡೋಣ ಮುಂದೆ ಅಲ್ಲಿಗೆ ಹೋಗಿ. ಜನರ ಭಾವನೆಗಳನ್ನ, ಕೇಳ್ತಾರೆ ಅಂತಾ ಕೆಟ್ಟದಾರಿಗೆ ತೆಗೆದುಕೊಂಡು ಹೋಗಬಾರದು ಎಂದು ಹೇಳಿದರು.
undefined
ಶ್ರೀರಾಮನಿಗೆ ಮತ್ತೊಂದು ಕಾನೂನು ವಿಘ್ನ, ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಾ?
ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸ್ತಿದ್ದಾರಲ್ಲಾ, ಇನ್ನೊಂದು 5-6 ತಿಂಗಳು ಕಳೀಲಿ, ಏನೇನ್ ಬರುತ್ತೆ, ಹೋಗುತ್ತೆ ಗೊತ್ತಾಗುತ್ತದೆ. ಶ್ರೀರಾಮ, ಎಲ್ಲಾ ಜನರನ್ನ ಕೂಡ ಆಶಿರ್ವದಿಸೋನು. ಅದಕ್ಕಾಗಿ ರಾಮರಾಜ್ಯದ ಕಲ್ಪನೆ ಬಂದಂತದ್ದು. ಈಗ ಅದು ಬಿಜೆಪಿ ಶ್ರೀರಾಮನೋ, ಮೋದಿ ಶ್ರೀರಾಮನೋ ನೋಡೋಣ, ಅದೇನಾಗುತ್ತೋ. ನಮ್ಮೂರಲ್ಲಿ ನೂರಾರು ವರ್ಷಗಳ ಇತಿಹಾಸ, ಪಾವಿತ್ರತೆ ಇರೋ ದೇವಸ್ಥಾನ ಇದೆ. ಅದು ಬಿಟ್ಟು ಎಲೆಕ್ಷನ್ ಗೋಸ್ಕರ ಶ್ರೀರಾಮನ ದೇವಸ್ಥಾನ ಕಟ್ಟಿಸಿ ಜನರನ್ನ ಮೋಸ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಕಳೆದ ಲೋಕಸಭೆ ಎಲೆಕ್ಷನ್ ನಲ್ಲಿ ದೇವೇಗೌಡರು ನಮ್ಮ ಮನೆ ಪಕ್ಕದಲ್ಲಿ ಹೋದ್ರು, ಸುಮ್ನೆ ನಮ್ಮ ಮನೆಗೆ ಬಂದಿದ್ರೆ ಗೆದ್ದು ಬಿಡುತ್ತಿದ್ದರು. ಅವರು ನಮ್ಮ ಮನೆಗೆ ಬಾರದೇ ನಮಗೆ ಅನುಕೂಲ ಮಾಡಿಕೊಟ್ಟರು. ಒಂದು ವೇಳೆ ಅವರನ್ನ ಗೆಲ್ಲಿಸಿದ್ದರೆ ಮಾರನೇ ದಿನ ಬಂದು ಇವರೆಲ್ಲಾ ನಮ್ಮ ವಿರುದ್ಧ ಮಾಡಿದ್ರು ಅಂತ ಹೇಳುತ್ತಿದ್ದರು. ಆದರೆ, ಮಾಜಿ ಶಾಸಕ ನಿಂಗಪ್ಪ ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಆದರೆ ನಿಂಗಪ್ಪನೇ ನನ್ನ ವಿರುದ್ಧ ಮಾಡಿದ್ರು ಅಂತ ದೇವೇಗೌಡರೇ ಹೇಳಿದ್ದರಂತೆ. ನಿಂಗಪ್ಪ ನಮ್ಮ ಮನೆಗೆ ಬಂದು ಹೇಳಿದ್ರು. ನಿನಗೆ ಲೇಟಾಗಿ ಸರ್ಟಿಫೀಕೇಟ್ ಕೊಟ್ಟಿದ್ದಾರೆ. ನಾವೇನಾದ್ರೂ ಆಗಿದ್ರೆ ಬೇಗ ಸರ್ಟಿಫೀಕೇಟ್ ಕೊಡೋರು. ಅದ್ಯಾಕೆ ತಲೆಕೇಡಿಸಿಕೊಳ್ತೀಯಾ ಹೋಗು ಅಂತ ಹೇಳಿದೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ, ನಮಗೂ ಸರ್ಟಿಫೀಕೇಟ್ ಇರೋದು. ಅವರನ್ನ ಸೋಲಿಸಿದ್ದಕ್ಕೆ ಜನ ನಮ್ಮನ್ನು ಗುರುತಿಸುತ್ತಾರೆ ಎಂದರು.
ಸಿಎಂ ಸಿದ್ದರಾಮಯ್ಯ ನಿದ್ದೆಯಿಂದ ಈಗ ಎದ್ದಿದ್ದಾರೆ, ಮೋದಿ ಟೀಕಿಸಿ ಮತ್ತೆ ಮಲಗುತ್ತಾರೆ: ಮಾಜಿ ಸಿಎಂ ಬೊಮ್ಮಾಯಿ
ಸಂಸದ ಅನಂತಕುಮಾರ್ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಸಿದ್ದರಾಮಯ್ಯನ್ನ ಬಗ್ಗೆ ಅವನ್ಯಾವನೋ ದುರಹಂಕಾರಿನೋ, ಮನುಷ್ಯನೋ, ಮೃಗನೋ ಗೊತ್ತಿಲ್ಲಾ. ಮಗನೇ ಅಂತಾ ಕರೀತನಲ್ಲಾ.. ಇದನ್ನ ಯಾರಾದ್ರೂ ಸಹಿಸೋಕೆ ಆಗುತ್ತಾ ಹೇಳಿ. ರಾಜ್ಯದಲ್ಲಿ ಇರೋ ಎಲ್ಲಾ ಸಾತ್ವಿಕ ಜನರು ಅದನ್ನ ಖಂಡನೆ ಮಾಡುವಂತದ್ದು ನಮ್ಮ ಕರ್ತವ್ಯ. ಎಲ್ಲಾ ಕಡೆ ಟೀಕೆ ಮಾಡಿದ್ದಾರೆ, ನಾವು ಮೆರವಣಿಗೆ ಮಾಡಿ ಸುಟ್ಟು, ಕೆರದಲ್ಲಿ ಹೊಡೆದು ಎಲ್ಲಾ ಮಾಡಬಹುದು. ಆದರೆ 6 ಸರಿ ಲೋಕಸಭಾ ಸದಸ್ಯನಾಗಿ ಜನರ ಭಾವನೆ ಕೆರಳಿಸೋದು, ಜನರ ಮನಸಸಿಗೆ ಬೇಸರ ಮೂಡಿಸೋದು ಎಂದರು.