ರಾಜ್ಯೋತ್ಸವ ದಿನದಂದೇ ಬೆಳಗಾವಿಯಲ್ಲಿ ಕರಾಳ ದಿನ, ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು

By Suvarna NewsFirst Published Nov 1, 2021, 11:29 AM IST
Highlights

*  ಕಲಬುರಗಿಯಲ್ಲಿ ಮತ್ತೆ ಮೊಳಗಿದ ಪ್ರತ್ಯೇಕ ರಾಜ್ಯದ ಕೂಗು
*  ನಾವು ಬೆಳಗಾವಿಯವರು, ಬೆಳಗಾವಿ ಮಹಾರಾಷ್ಟ್ರದ್ದು 
*  ಪುಂಡರ ಪ್ರತಿಭಟನೆಗೆ ಮಹಾರಾಷ್ಟ್ರ ಸಚಿವರ ಬೆಂಬಲ 
 

ಬೆಳಗಾವಿ(ನ.01): ನಾಡಿನಾದ್ಯಂತ 66ನೇ ಕನ್ನಡ ರಾಜ್ಯೋತ್ಸವವನ್ನ(Kannada Rajyotsava)  ಸಂಭ್ರಮದಿಂದ ಆಚರಿಸಲಾಗುತ್ತಿದೆ.  ಆದರೆ, ಬೆಳಗಾವಿಯಲ್ಲಿ ಕರಾಳ ದಿನಾಚರಣೆಯನ್ನ(Black Day) ಆಚರಿಸಲು ಎಂಇಎಸ್ ಸಿದ್ಧತೆ ನಡೆಸುವ ಮೂಲಕ ಮತ್ತೆ ತನ್ನ ಪುಂಡಾಟ ಮೆರೆಯಲು ಸಜ್ಜಾಗಿದೆ.

ಬೆಳಗಾವಿ(Belagavi) ನಗರದ ಮರಾಠಾ ಭವನದಲ್ಲಿ ಪ್ರತಿಭಟನೆ ನಡೆಸಲು ಎಂಇಎಸ್(MES) ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿಭಟನಾ(Protest) ಸಭೆಗೆ ಎಂಇಎಸ್ ಸಿದ್ಧತೆ ಮಾಡಿಕೊಂಡಿದೆ.  ಎಲ್ಲರೂ ಸಭೆಗೆ ಹಾಜರಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಎಂಇಎಸ್ ಪೋಸ್ಟ್ ಮಾಡಿದೆ. 

ಬೆಳಗಾವಿ ಪಾಲಿಕೆಯಲ್ಲಿನ ಕನ್ನಡ ಧ್ವಜ ತೆಗೆಯಬೇಕಂತೆ: ಎಂಇಎಸ್ ಪುಂಡರ ಆಗ್ರಹ

ಪುಂಡರ ಪ್ರತಿಭಟನೆಗೆ ಮಹಾರಾಷ್ಟ್ರ ಸಚಿವರ ಬೆಂಬಲ 

ಮಹಾರಾಷ್ಟ್ರ(Maharashtra) ರಾಜ್ಯದ ನಕಾಶೆಯಲ್ಲಿ(Map)n ಕರ್ನಾಟಕದ(Karnataka) ಗಡಿ ಭಾಗ ಸೇರಿಸಿ ಪೋಸ್ಟ್ ಮಾಡಲಾಗಿದೆ. ಮತ್ತೊಂದೆಡೆ ನಾಡದ್ರೋಹಿ ಎಂಇಎಸ್‌ಗೆ ಮಹಾರಾಷ್ಟ್ರ ಸರ್ಕಾರ(Government of Maharashtra) ಕೂಡ ಬೆಂಬಲ(Support) ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ. ಇಂದು ಕೈಗೆ ಕಪ್ಪು ಪಟ್ಟಿ ಕಟ್ಟಿ ಎಂಇಎಸ್ ಪ್ರತಿಭಟನೆಗೆ ಮಹಾರಾಷ್ಟ್ರ ಸಚಿವರು ಬೆಂಬಲ ಸೂಚಿಸಿದ್ದಾರೆ. ಕೈಗೆ ಕಪ್ಪು ಪಟ್ಟಿ ಕಟ್ಟಿ ಸಭೆ, ಸಮಾರಂಭಗಳಿಗೆ ಹಾಜರಾಗಲು ಮಹಾರಾಷ್ಟ್ರ ಸಚಿವರ ನಿರ್ಧಾರ ಮಾಡಿದ್ದಾರೆ. ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಏಕನಾಥ ಶಿಂಧೆ(Eknath Shindhe) ಭರವಸೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣ(Social Media) ಎಂಇಎಸ್ ಯುವ ಸಮಿತಿ ಫೇಸ್‌ಬುಕ್(Facebook) ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಪದೇ ಪದೇ ಉದ್ಧಟತನ ಮೆರೆಯುತ್ತಿರುವ ನಾಡದ್ರೋಹಿ ಎಂಇಎಸ್ ಸಂಘಟನೆಯನ್ನ ನಿಷೇಧಿಸುವಂತೆ ಕನ್ನಡಪರ ಸಂಘಟನೆಗಳು(Kannada Organizations) ಆಗ್ರಹಿಸಿವೆ. ಕರ್ನಾಟಕ ರಾಜ್ಯೋತ್ಸವ ದಿನವೇ ಎಂಇಎಸ್ ಮತ್ತೆ ಪುಂಡಾಟ ಮರೆದಿದೆ. ಎಂಇಎಸ್ ಮುಖಂಡ ಶುಭಂ ಶೆಳ್ಕೆ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ನಕ್ಷೆ(Controversial Map) ಫೋಸ್ಟ್ ಮಾಡುವ ಮೂಲಲ ಕನ್ನಡಿಗರನ್ನ(Kannadigas) ಕೆರಳಿಸಿದ್ದಾರೆ. ಸಂಯುಕ್ತ ಮಹಾರಾಷ್ಟ್ರ ಪರಿಕಲ್ಪನೆಯ ನಕ್ಷೆಯನ್ನ ಪೋಸ್ಟ್ ಹಾಕಲಾಗಿದ್ದು, ನಕ್ಷೆಯಲ್ಲಿ  ಬೆಳಗಾವಿ, ಕಾರವಾರ(Karwar), ಹಳ್ಯಾಳ ನಿಪ್ಪಾಣಿ(Nippani), ಬೀದರ್(Bidar), ಭಾಲ್ಕಿ(Bhalki) ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಫೋಟೋ ಪೋಸ್ಟ್ ಮಾಡಲಾಗಿದೆ. 

ಬೆಳಗಾವಿ: ಕನ್ನಡ ನೆಲದಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್‌ ಪುಂಡರು

ನಾವು ಬೆಳಗಾವಿಯವರು, ಬೆಳಗಾವಿ ಮಹಾರಾಷ್ಟ್ರದ್ದು:  

ನವೆಂಬರ್ 1 ಕರಾಳ ದಿನ ಎಂದು ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಮುಖಂಡ ಪೋಸ್ಟ್ ಮಾಡಿದ್ದಾನೆ. ನಾವು ಬೆಳಗಾವಿಯವರು, ಬೆಳಗಾವಿ ಮಹಾರಾಷ್ಟ್ರದ್ದು ಎಂದು ಘೋಷವಾಕ್ಯ ಹಾಕಿದ್ದಾರೆ ಎಂಇಎಸ್‌ ಪುಂಡರು. ಇಂತಹ ವಿವಾದಾತ್ಮಕ ಪೋಸ್ಟ್ ಹಾಕಿದರೂ ಕೂಡ ಬೆಳಗಾವಿ ಪೊಲೀಸ್(Police) ಕಮೀಷನರ್ ಕಣ್ಮುಚ್ಚಿ ಕುಳಿತಿದ್ದಾರೆ. ಪ್ರತಿಭಟನಾ ಸಭೆ ಹೆಸರಿನಲ್ಲಿ ಅನುಮತಿ ಪಡೆದು ಪುಂಡರಿಂದ ಕರಾಳ ದಿನ ಅಚರಿಸಲು ಮುಂದಾಗಿದ್ದಾರೆ. 
ಸಾಮಾಜಿಕ ಜಾಲತಾಣದಲ್ಲಿ ಗಡಿ ವಿವಾದದ(Border Dispute) ಕಿಚ್ಚು ಹೊತ್ತಿಸುತ್ತಿದ್ದಾರೆ ಪುಂಡರು. ಹೀಗಾಗಿ ನಾಡದ್ರೋಹಿಗಳ ವಿರುದ್ಧ ಸಿಇಎನ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು(Complaint) ದಾಖಲಿಸಿಕೊಳ್ಳಬೇಕು ಅಂತ ಕನ್ನಡಿಗರ ಒತ್ತಾಯಿಸಿದ್ದಾರೆ. 

ಕಲಬುರಗಿಯಲ್ಲಿ ಮತ್ತೆ ಮೊಳಗಿದ ಪ್ರತ್ಯೇಕ ರಾಜ್ಯದ ಕೂಗು

ಬೆಳಗಾವಿಯಲ್ಲಿ ನಾಡದ್ರೋಹಿಗಳ ಪುಂಡಾಟ ಮೆರೆಯುತ್ತಿದ್ದರೆ ಇತ್ತ ಕಲಬುರಗಿಯಲ್ಲಿ(Kalaburagi) ಕನ್ನಡ ರಾಜ್ಯೋತ್ಸವ ದಿನದಂದೇ ಮತ್ತೊಮ್ಮೆ ಪ್ರತ್ಯೇಕ ರಾಜ್ಯದ(Seperate State) ಕೂಗು ಕೇಳಿ ಬಂದಿದೆ. ಕರ್ನಾಟಕ ರಾಜ್ಯೋತ್ಸವ ದಿಬದಂದೇ ಕಲಬುರಗಿ ನಗರದ ಸರ್ದಾರ ಪಟೇಲ್ ಪ್ರತಿಮೆ ಬಳಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿಯಿಂದ ಪ್ರತಿಭಟನೆ ಪ್ರತಿಭಟನೆ ನಡೆಸಿದ್ದಾರೆ. ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲು ಹೋರಾಟಗಾರರು ಯತ್ನ ನಡೆಸಿದ್ದಾರೆ. ತೆಲಂಗಾಣ(Telangana) ಮಾದರಿಯಲ್ಲಿ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಹೋರಾಟಗಾರರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
 

click me!