ನಮ್ಮ ಸರ್ಕಾರದ ಅವಧಿಯಲ್ಲಿ ಕಮಿಷನ್ ಆರೋಪ ಮಾಡಿದವರೇ ಇದೀಗ ನಿಮ್ಮ ಮೇಲೂ ಆರೋಪ ಮಾಡಿದ್ದಾರಲ್ಲ. ಹಿಂದೆ ನೀವು ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂದು ಸುಳ್ಳನ್ನೇ ಪ್ರಚಾರ ಮಾಡಿ ಮತ ತಗೊಂಡ್ರಲ್ಲ ಈಗೇನು ಹೇಳ್ತೀರಾ? ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಬಾಗಲಕೋಟೆ (ಫೆ.9): ನಮ್ಮ ಸರ್ಕಾರದ ಅವಧಿಯಲ್ಲಿ ಕಮಿಷನ್ ಆರೋಪ ಮಾಡಿದವರೇ ಇದೀಗ ನಿಮ್ಮ ಮೇಲೂ ಆರೋಪ ಮಾಡಿದ್ದಾರಲ್ಲ. ಹಿಂದೆ ನೀವು ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂದು ಸುಳ್ಳನ್ನೇ ಪ್ರಚಾರ ಮಾಡಿ ಮತ ತಗೊಂಡ್ರಲ್ಲ ಈಗೇನು ಹೇಳ್ತೀರಾ? ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಕಮಿಷನ್ ಆರೋಪ ವಿಚಾರ ಸಂಬಂಧ ಮಾತನಾಡಿದ ಸಚಿವರು, ಕೆಂಪಣ್ಣ ನಮ್ಮಮೇಲೆ ಆರೋಪ ಮಾಡಿದ್ದಾಗ ಕಾಂಗ್ರೆಸ್ ಒಪ್ಪಿದೆ ಈಗ ನಿಮ್ಮ ಸರ್ಕಾರದ ವಿರುದ್ಧ ಅದೇ ಕೆಂಪಣ್ಣ ಆರೋಪ ಮಾಡಿದ್ದಾರೆ ನೀವು ಒಪ್ಪಬೇಕಾಗುತ್ತೆ. ನಿಮ್ಮ ಸರ್ಕಾರದಲ್ಲಿ ಅಧಿಕಾರಿಗಳೇ ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಏನು ಹೇಳ್ತೀರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದಲ್ಲೂ 40% ಕಮಿಷನ್: ಕೆಂಪಣ್ಣ ಗಂಭೀರ ಆರೋಪ
ಕಾಂಗ್ರೆಸ್ ಸರ್ಕಾರದಲ್ಲಿ ಇಂತವು ಬಹಳಷ್ಟು ನಡೆದಿವೆ, ನಡೆಯುತ್ತಿವೆ. ಇದೊಂದೇ ದಂಧೆ ಅಲ್ಲ, ವರ್ಗಾವಣೆ ದಂಧೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳು ಕಳೆದಿದೆ. ಇಡೀ ರಾಜ್ಯದಲ್ಲಿ ಒಂದೇ ಒಂದು ಟೇಪ್ ಕಟ್ ಆಗಿಲ್ಲ. ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಆದರೆ ಈಗ ಕುಣಿಯೋಕೆ ಆಗದೆ ನೆಲ ಡೊಂಕು ಅನ್ನೋಕೆ ಶುರು ಮಾಡಿದ್ದಾರೆ. ಹೀಗಾಗಿ ತೆರಿಗೆ ತಾರತಮ್ಯ ಅಂತಾ ಕೇಂದ್ರದ ಮೇಲೆ ಗೂಬೆ ಕೂರಿಸೋಕೆ ಮುಂದಾಗಿದ್ದಾರೆ. ಆದರೆ ಕರ್ನಾಟಕದ ಒಂದೇ ಒಂದು ರೂಪಾಯಿ ಬಾಕಿ ಉಳಿಸಿಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಇವರು ಯಾವ ರೂಪದಲ್ಲಿ ಬರಬೇಕು ಅಂತಿದ್ದಾರಲ್ಲ? ಇದು ಯಾವ ಲೆಕ್ಕ? ಶೆಟ್ಟರ್ ಲೆಕ್ಕನಾ? ಗಾಂಧಿ ಲೆಕ್ಕನಾ? ತಪ್ಪು ಹೇಳುವುದು, ಜನರ ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದಕ್ಕೆ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು.
ಕೆಂಪಣ್ಣ ಆರೋಪ ಬಗ್ಗೆ ಆಯೋಗ ಸ್ವಯಂ ತನಿಖೆ ಮಾಡಲಿ: ರಾಜ್ಯ ಬಿಜೆಪಿ ಒತ್ತಾಯ