
ಬೆಂಗಳೂರು(ಜ.13): ಕಾಂಗ್ರೆಸ್(Congress) ಪಕ್ಷದ ಸೋಮಾರಿತನದಿಂದ ಮೇಕೆದಾಟು ಯೋಜನೆ ವಿಳಂಬವಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಹಿರಿಯ ಸಾಹಿತಿ ದೊಡ್ಡರಂಗೇಗೌಡ (Doddarangegowda) ಆಪಾದಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರಕಾರಗಳು ಬೇಕಂತಲೇ ತಡ ಮಾಡಿದ್ದರಿಂದ ಮೇಕೆದಾಟು ಯೋಜನೆಯನ್ನು(Mekedatu Project) ಮುಂದೂಡುತ್ತ ಬರಲಾಗಿದೆ. ಕಾಂಗ್ರೆಸ್ ಸರಕಾರ(Congres Government) ಐದು ವರ್ಷಗಳ ಕಾಲ ಸೋಮಾರಿತನ ಮತ್ತು ವಿಳಂಬ ಧೋರಣೆ ಅನುಸರಿಸುತ್ತ ಬಂತು. ಈಗ ಕೋವಿಡ್(Covid19) ಆತಂಕದ ಹಿನ್ನೆಲೆಯಲ್ಲಿ ಜನಸಂದಣಿ ಸೇರಬಾರದೆಂಬ ನಿಯಮವಿದ್ದರೂ ಯಾವ ಪುರುಷಾರ್ಥಕ್ಕೆ ಈ ಪಾದಯಾತ್ರೆ(Padayatra) ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
News Hour:ರಾಮನಗರ ಜಿಲ್ಲಾಡಳಿತಕ್ಕೆ ಫುಲ್ ಪವರ್, ಹಿಂದೆ ಸರಿಯಲ್ಲ ಅಂದ್ರು ಡಿಕೆ ಬ್ರದರ್!
ಜನರ ಗುಂಪುಗೂಡುವಿಕೆಯಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಮುಖಂಡರು ಬುದ್ಧಿ ಇದ್ದೂ ಹೀಗ್ಯಾಕೆ ವರ್ತಿಸುತ್ತಿದ್ದಾರೆ? ಅವರು ಒಂದು ನಿಮಿಷ ತಾಳ್ಮೆಯಿಂದ ಯೋಚಿಸಬಾರದಿತ್ತೇ? ಸೆರೆಮನೆಯಿಂದ ಬಿಡುಗಡೆ ಆಗಿ ಬಂದಾಗ ವಿಜಯಯಾತ್ರೆ ಮಾಡುವ ಈ ಮುಖಂಡರು ಅದೇನು ಸಾಧಿಸಿದರು ಎಂದು ಆರ್ಥ ಆಗುತ್ತಿಲ್ಲ ಎಂದರು.
ಚೆನ್ನೈ ಹಸಿರು ಪೀಠದ ತಡೆಯಾಜ್ಞೆ ತೆರವುಗೊಳಿಸುವಲ್ಲಿ ರಾಜ್ಯದ(Karnataka) ಬಿಜೆಪಿ ಸರ್ಕಾರ(BJP Government) ಯಶಸ್ವಿಯಾಗಿದೆ. ಇದು ಬಿಜೆಪಿಯ ದಿಟ್ಟಕ್ರಮ. ರಾಜ್ಯ ಸರ್ಕಾರದ ಯೋಜನಾ ಪರಿವಿಡಿಯ ಪರಿಶೀಲನೆಯೂ ನಡೆಯುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ವಿಚಾರಣಾ ಅರ್ಜಿ ಬಾಕಿ ಇರುವಾಗ ಪಾದಯಾತ್ರೆ ಎಷ್ಟುಸರಿ? ಸಂವಿಧಾನ ಓದಿರುವ ಸಿದ್ದರಾಮಯ್ಯ(Siddaramaiah) ಮತ್ತು ಡಿ.ಕೆ.ಶಿವಕುಮಾರ್(DK Shivakumar) ಅವರಿಗೆ ತಮ್ಮ ಬೆನ್ನು ಕಾಣುತ್ತಿಲ್ಲ. ನೀವು ಮಾಡುತ್ತಿರುವ ಕೆಲಸ ಸರಿಯೇ ಎಂದು ಪ್ರಶ್ನಿಸಿದರು.
ಕಳಕಳಿ ಇಲ್ಲದ ಹೋರಾಟಕ್ಕೆ ಇಲ್ಲ ಮಾನ್ಯತೆ: ನಟಿ ಶ್ರುತಿ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ(Mekedatu Padayatra) ಜನರನ್ನು ಬಲಿ ಪಡೆಯುವಂಥದ್ದು ಎಂದು ಪಕ್ಷದ ಮುಖಂಡರೂ ಆಗಿರುವ ನಟಿ ಶ್ರುತಿ(Shruti) ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಕಳಕಳಿ ಇಲ್ಲದ ಹೋರಾಟಕ್ಕೆ ಮಾನ್ಯತೆಯೂ ಇಲ್ಲ. ಬೆಲೆಯೂ ಇರುವುದಿಲ್ಲ. ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ. ಯಾರಿಗೂ ಲಾಕ್‌ಡೌನ್(Lockdown) ಬೇಕಾಗಿಲ್ಲ. ಅದನ್ನು ತಡೆಯಬೇಕಾದ ನಾಯಕರು ಈ ರೀತಿ ಮಾಡುತ್ತಿರುವುದಕ್ಕೆ ಅವರ ಬಗ್ಗೆ ವಿಷಾದವಿದೆ. ಮೇಕೆದಾಟು ಯೋಜನೆ ಪ್ರತಿಯೊಬ್ಬ ಕನ್ನಡಿಗನ ಹೋರಾಟ ಆಗಬೇಕು. ಜಾಥಾ ಹೆಸರಿನಲ್ಲಿ ದಾರಿ ತಪ್ಪಿಸುವ ಪ್ರವೃತ್ತಿ ಸಲ್ಲದು ಎಂದರು.
Mekedatu Padayatra: ಪಾದಯಾತ್ರೆ ನಿರ್ಬಂಧಕ್ಕೆ ಸರ್ಕಾರದ ಅಧಿಕೃತ ಆದೇಶ, ರಾಮನಗರದಲ್ಲಿ ಬಂದೋಬಸ್ತ್!
ಬೆಂಗ್ಳೂರಿಗೆ ಪಾದಯಾತ್ರೆ ಬಿಡಬೇಡಿ: ಬಿಜೆಪಿ
ಬೆಂಗಳೂರು ನಗರದಲ್ಲಿ ಕೋವಿಡ್(Covid19) ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಪಾದಯಾತ್ರೆ(Congress Padayatra) ಬೆಂಗಳೂರಿಗೆ(Bengaluru) ಬಾರದಂತೆ ಸರ್ಕಾರ ತಡೆಯಬೇಕು. ಒಂದು ವೇಳೆ ಅಗತ್ಯ ಬಿದ್ದರೆ ಕಾಂಗ್ರೆಸ್ಸಿಗರನ್ನು ಬಂಧಿಸುವ ಕೆಲಸ ಮಾಡಬೇಕು ಎಂದು ನಗರದ ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ. ಬುಧವಾರ ಬಿಜೆಪಿ(BJP) ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕರಾದ ಅರವಿಂದ್ ಲಿಂಬಾವಳಿ, ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ ಹಾಗೂ ಉದಯ ಗರುಡಾಚಾರ್ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಅರವಿಂದ್ ಲಿಂಬಾವಳಿ ಮಾತನಾಡಿ, ಬೆಂಗಳೂರಲ್ಲಿ ಒಮಿಕ್ರೋನ್(Omicron) ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಂಗಳವಾರ ಒಂದೇ ದಿನ 15 ಸಾವಿರ ಪ್ರಕರಣಗಳು ವರದಿಯಾಗಿವೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮೇಕೆದಾಟು(Mekedatu) ಜಾರಿ ವಿಚಾರದಲ್ಲಿ ಸರ್ಕಾರವು ಗರಿಷ್ಠ ಪ್ರಯತ್ನ ಮಾಡುತ್ತಿದೆ. ಇಂತಹ ಸಮಯದಲ್ಲಿ ಸಾವಿರಾರು ಜನ ಕಟ್ಟಿಕೊಂಡು ಬೆಂಗಳೂರಿಗೆ ನುಗ್ಗುವ ಕೆಲಸ ಮಾಡಬಾರದು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಯಾರೂ ಸಹ ಮೇಕೆದಾಟು ವಿರೋಧಿಗಳಲ್ಲ. ಮೇಕೆದಾಟುವಿಗಿಂತ ಪ್ರಸ್ತುತ ಕೋವಿಡ್ ತಡೆಯುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ