Congress Padayatre: ಸರ್ಕಾರ ಅನುಮತಿ ನೀಡಿದ ತಕ್ಷಣ ಮೇಕೆದಾಟು ಪಾದಯಾತ್ರೆ: ಡಿಕೆಶಿ

Kannadaprabha News   | Asianet News
Published : Jan 16, 2022, 03:15 AM IST
Congress Padayatre: ಸರ್ಕಾರ ಅನುಮತಿ ನೀಡಿದ ತಕ್ಷಣ ಮೇಕೆದಾಟು ಪಾದಯಾತ್ರೆ: ಡಿಕೆಶಿ

ಸಾರಾಂಶ

ಮೇಕೆದಾಟು ಯೋಜನೆಗೆ ಯಾರಾದರೂ ವಿರೋಧಿಸಲಿ, ಏನಾದರೂ ಮಾಡಿಕೊಳ್ಳಲಿ. ಕೋವಿಡ್‌ ಪರಿಸ್ಥಿತಿ ಸುಧಾರಿಸಿದ ಬಳಿಕ ಸರ್ಕಾರ ಹತ್ತು ಅಥವಾ ನೂರು ಜನರಿಗೆ ಅನುಮತಿಸಿದರೂ ತಕ್ಷಣ ಪಾದಯಾತ್ರೆ ಪುನಾರಂಭಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು (ಜ. 16): ಮೇಕೆದಾಟು (Mekedatu Padayatra) ಯೋಜನೆಗೆ ಯಾರಾದರೂ ವಿರೋಧಿಸಲಿ, ಏನಾದರೂ ಮಾಡಿಕೊಳ್ಳಲಿ. ಕೋವಿಡ್‌ (Covid19) ಪರಿಸ್ಥಿತಿ ಸುಧಾರಿಸಿದ ಬಳಿಕ ಸರ್ಕಾರ ಹತ್ತು ಅಥವಾ ನೂರು ಜನರಿಗೆ ಅನುಮತಿಸಿದರೂ ತಕ್ಷಣ ಪಾದಯಾತ್ರೆ ಪುನಾರಂಭಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಹೋರಾಟ ವ್ಯಕ್ತಿಗತ ಚಿಂತನೆಯದ್ದಲ್ಲ. ಜನರ ಬಯಕೆ, ಬದುಕಿಗೆ ಸಂಬಂಧಿಸಿದ್ದು. ಈ ಯೋಜನೆ ಜಾರಿಗೆ ಸಂಕಲ್ಪ ತೊಟ್ಟಾಗಿದೆ ಎಂದರು.

ಈಗಲೂ ಬಿಜೆಪಿ ಕಿರುಕುಳ: ಸರ್ಕಾರದ ಹಲವು ಕಿರುಕುಳದ ನಡುವೆಯೂ ಜನರ ಹಿತದೃಷ್ಟಿಯಿಂದ ನಾವು ಮೇಕೆದಾಟು ಪಾದಯಾತ್ರೆ ನಡೆಸಿದೆವು. ಈಗ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿದರೂ ಕಿರುಕುಳ ನಿಂತಿಲ್ಲ. ಬಿಜೆಪಿಯವರು (BJP) ಮೇಕೆದಾಟು ಯೋಜನೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ತಮ್ಮ ಮೇಲೆ ಮಾತ್ರ ಏನೇನು ಪ್ರಯೋಗ ಮಾಡಬಹುದೋ ಎಲ್ಲವನ್ನೂ ಮಾಡುತ್ತಿದ್ದಾರೆ. ಪಾದಯಾತ್ರೆಯ ವೇಳೆ ಹಲವು ಕಿರುಕುಳ ನೀಡಿದರು. ಜನರ ಹಿತಾಸಕ್ತಿಗಾಗಿ ಎಲ್ಲ ಕಿರುಕುಳ ಸಹಿಸಿಕೊಂಡು ಪಾದಯಾತ್ರೆ ನಡೆಸಿದೆವು. 

Congress Padayatra ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕೈ ನಾಯಕರಿಗೆ ಬಿಗ್ ಶಾಕ್!

ಈಗಲೂ ಕಿರುಕುಳ ನಿಂತಿಲ್ಲ. ಈಗ ನನ್ನ ಮಗಳು ಹೇಳುತ್ತಿದ್ದಾಳೆ- ನಮ್ಮ ಶಾಲೆಗೆ ಹೋಗಿದ್ದಕ್ಕೂ ನೋಟಿಸ್‌ ಕೊಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು. ಇವರ ಕಿರುಕುಳಕ್ಕೆ ಕೊನೆ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಪಾದಯಾತ್ರೆ ಸಂಬಂಧ ನಮ್ಮ ಮೇಲೆ ಎಫ್‌ಐಆರ್‌ಗಳನ್ನು ಹಾಕುವುದಾದರೆ ಒಟ್ಟಿಗೆ ಹಾಕಬಹುದಿತ್ತು. ದಿನಾ ಒಂದೊಂದು ಕೇಸು ಯಾಕೆ ಹಾಕಿದ್ದಾರೆ? ನಮ್ಮನ್ನು ಜೈಲಿಗೆ ಕಳುಹಿಸಿ ಖುಷಿ ಪಡಬಹುದು. ಪಡಲಿ ಬಿಡಿ. ಬಿಜೆಪಿ ಕಾರ್ಯಕ್ರಮಗಳಲ್ಲಿ ಕೇವಲ 30 ಜನರು ಮಾತ್ರ ಇದ್ದರಾ? ಅವರಾರ‍ಯರ ಮೇಲೂ ಒಂದೂ ದೂರು ದಾಖಲಿಸಿಲ್ಲವೇಕೆ? 

ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಭಾಗವಹಿಸಿದ್ದ ರಾಮನಗರದ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಇತ್ತಾ? ವಿಧಾನಸೌಧದಲ್ಲಿ ಸಾವಿರಾರು ಜನ ಸೇರಿಸಿ ನಡೆಸಿದ ವಿಧಾನ ಪರಿಷತ್‌ನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಕೋವಿಡ್‌ ನಿಯಮ ಪಾಲಿಸಲಾಯಿತಾ? ರಾಜ್ಯ ಪೊಲೀಸ್‌ ಮಹಾನಿರ್ದೇಶಕ, ಪೊಲೀಸ್‌ ಆಯುಕ್ತರಿಗೆ ತಮ್ಮ ಬಟ್ಟೆ, ವೃತ್ತಿಗೆ ಗೌರವ ಇರಬೇಕೆಂದರೆ ಯಾರು ಅಲ್ಲಿಗೆ ಬಂದಿದ್ದರು ಹಾಗೂ ಆಯೋಜನೆ ಮಾಡಿದ್ದರೋ ಅವರ ಮೇಲೆ ಪ್ರಕರಣ ದಾಖಲಿಸಿ’ ಎಂದು ಸವಾಲು ಹಾಕಿದರು.

ಬಿಜೆಪಿಯವರಿಗೆ ನಾನೇ ಸ್ಫೂರ್ತಿ: ‘ನಿಮ್ಮನ್ನೇ ಏಕೆ ಟಾರ್ಗೆಟ್‌ ಮಾಡಲಾಗುತ್ತದೆ?’ ಎಂಬ ಪ್ರಶ್ನೆಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್‌, ‘ನನ್ನ ಹೆಸರೇ ಬಿಜೆಪಿಯವರಿಗೆ ಉಸಿರು, ಸ್ಫೂರ್ತಿ. ನನ್ನ ಹೆಸರು ನೆನಪಿಸಿಕೊಂಡರಷ್ಟೇ ಅವರಿಗೆ ಶಕ್ತಿ ಬರುತ್ತದೆ. ನಾನೇ ಅವರಿಗೆ ಸ್ಫೂರ್ತಿ, ಜೀವ’ ಎಂದರು.

Mekedatu Politics: ಕಾಂಗ್ರೆಸಿಗರು ನಗಾರಿ ಬಾರಿಸದಿದ್ರೆ ಸುಪ್ರಿಂ ತೀರ್ಪು ನೀಡಲ್ಲ: ದೇವೇಗೌಡ

ಎಚ್‌ಡಿಕೆ ಬಳಿ ಹೊರರಾಜ್ಯದವರು ಕೆಲಸಕ್ಕಿಲ್ವಾ?: ‘ಮೇಕೆದಾಟು ಪಾದಯಾತ್ರೆಗೆ ಬಾವುಟ ಕಟ್ಟಲು ತಮಿಳುನಾಡಿನ ಜನರನ್ನು ಕರೆತಂದಿದ್ದರು’ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರ ಟೀಕೆಗೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್‌ ಅವರು, ‘ಕುಮಾರಸ್ವಾಮಿ ಹೊರ ರಾಜ್ಯದ ಯಾರನ್ನೂ ಕೆಲಸಕ್ಕೆ ಇಟ್ಟುಕೊಂಡಿಲ್ಲವಾ? ನಾವು ಭಾರತದಲ್ಲಿ ಬದುಕುತ್ತಿದ್ದೇವೆ. ತಮಿಳರು ನಮ್ಮ ಸಹೋದರರು. ಅವರು ಕರ್ನಾಟಕಕ್ಕೆ ಬಂದು ಕೆಲಸ ಮಾಡಬಾರದಾ? ಬಾಯಿ ಚಪಲಕ್ಕೆ ಅವರು ಮಾತನಾಡುತ್ತಾರೆ. ಮಾತನಾಡಲಿ ಬಿಡಿ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ