ಬಂಡಾಯದ ಪ್ರಶ್ನೆಯೇ ಇಲ್ಲ, ರಾಜಕೀಯ ವೈರಾಗ್ಯದ ಮಾತನ್ನೂ ನಾನು ಆಡಿಲ್ಲ: Renukacharya

By Kannadaprabha News  |  First Published Jan 16, 2022, 2:45 AM IST

ಯಾವುದೇ ಕಾರಣಕ್ಕೂ ಬಂಡಾಯದ ಪ್ರಶ್ನೆಯೇ ಇಲ್ಲ. ಸಚಿವ ಸ್ಥಾನದ ವಿಚಾರವಾಗಿ ನಾನು ರಾಜಕೀಯ ವೈರಾಗ್ಯದ ಮಾತುಗಳನ್ನೂ ಆಡುತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.


ದಾವಣಗೆರೆ (ಜ. 16): ಯಾವುದೇ ಕಾರಣಕ್ಕೂ ಬಂಡಾಯದ ಪ್ರಶ್ನೆಯೇ ಇಲ್ಲ. ಸಚಿವ ಸ್ಥಾನದ ವಿಚಾರವಾಗಿ ನಾನು ರಾಜಕೀಯ ವೈರಾಗ್ಯದ ಮಾತುಗಳನ್ನೂ ಆಡುತ್ತಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (M.P.Renukacharya) ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ರೆಸಾರ್ಟ್‌ ರಾಜಕೀಯ ಮಾಡಿ, ತಪ್ಪು ಮಾಡಿದ್ದೇನೆ. ಅಂತಹ ತಪ್ಪನ್ನು ಮುಂದೆ ಮತ್ತೆ ಎಂದಿಗೂ ಮಾಡುವುದೂ ಇಲ್ಲ. ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ನೀಡುವಂತೆ ಕೇಳಿದ್ದೇನೆ ಎಂದರು. ಮೂರು ಅವಧಿಯಲ್ಲಿ ಸಚಿವರಾದವರೇ ಮತ್ತೆ ಮತ್ತೆ ಸಚಿವರಾಗಿದ್ದಾರೆ. ಅಂತಹವರು ರಾಜೀನಾಮೆ ಕೊಟ್ಟು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿ. ಸಂಪುಟದಲ್ಲಿ ಹೊಸ ಮುಖಗಳಿಗೆ, ಹೊಸಬರಿಗೆ ಅವಕಾಶ ಮಾಡಿಕೊಡಲಿ. ರಾಜ್ಯದ ಅಭಿವೃದ್ಧಿ, ಕ್ಷೇತ್ರಗಳ ಅಭಿವೃದ್ಧಿಗೆ ಈ ಮೂಲಕ ಸಹಕರಿಸಲಿ ಎಂದು ಅವರು ಹೇಳಿದರು.

Tap to resize

Latest Videos

ಹೊಸಬರಿಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರಿಗೂ ಮನವಿ ಮಾಡಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಅಭಿವೃದ್ಧಿ ಕೆಲಸ, ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ, ಕ್ಷೇತ್ರಗಳ ಅಭಿವೃದ್ಧಿಗೆ ಜನರು ನನಗೆ ಸಚಿವ ಸ್ಥಾನ ನೀಡಲೆಂದು ಒತ್ತಾಯಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನನಗೂ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಅವರು ತಿಳಿಸಿದರು.

Karnataka BJP ಯತ್ನಾಳ್‌ ಹೇಳಿಕೆಗೆ ಜೈ ಎಂದ ರೇಣುಕಾಚಾರ್ಯ, ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಬಿಜೆಪಿ (BJP) ನನಗೆ ತಾಯಿ ಸಮಾನ. ಪಕ್ಷಕ್ಕಾಗಿ ನಾನು, ನಮ್ಮ ಪೂರ್ವಿಕರು ಹಮಾಲಿ ಕೆಲಸ ಮಾಡಿದ್ದೇವೆ. ನಾನು ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲ. ಈ ವಿಚಾರವನ್ನು ಈಗಾಗಲೇ ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj bommai) ಹೊರತುಪಡಿಸಿ, ಎಲ್ಲಾ ಸಚಿವರೂ ಬದಲಾವಣೆಯಾಗಲಿದ್ದಾರೆ. ಗುಜರಾತ್‌ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟದಲ್ಲೂ ಮಹತ್ತರ ಬದಲಾವಣೆ ಆಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡ ಕಾಂಗ್ರೆಸ್ಸಿನ ನಾಯಕರದ್ದು ಜನರ ಮೇಲಿನ ಕಾಳಜಿಯಿಂದ ಕೈಗೊಂಡ ಪಾದಯಾತ್ರೆ ಆಗಿರಲಿಲ್ಲ. ಕಾಂಗ್ರೆಸ್ಸಿನ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಪಾದಯಾತ್ರೆ ಮಾಡಿದ್ದಾರೆ. ಈ ಮೂಲಕ 2023ರಲ್ಲಿ ಮತ್ತೆ ತಾವು ಅಧಿಕಾರಕ್ಕೆ ಬರುತ್ತೇವೆಂಬ ಭ್ರಮೆಯಲ್ಲಿ ಮೇಕೆದಾಟು ವಿಚಾರ ಮುಂದಿಟ್ಟುಕೊಂಡು ಪಾದಯಾತ್ರೆ ಕೈಗೊಂಡು, ಅರ್ಧಕ್ಕೆ ಕೈಬಿಟ್ಟಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ವಿಪಕ್ಷ ಸ್ಥಾನಕ್ಕೆ ಸೀಮಿತವಾಗಲಿದೆ ಎಂದು ಅವರು ಹೇಳಿದರು.

Covid 19 Spike: ಪವಾಡಪುರುಷ ಸೇವಾಲಾಲ್ ಜಯಂತಿ ಉತ್ಸವ ರದ್ದು: ರೇಣುಕಾಚಾರ್ಯ!

ಕಾಂಗ್ರೆಸ್‌ ರಾಜ್ಯದ ಜನರ ಕ್ಷಮೆ ಕೇಳಲಿ: ಹೊನ್ನಾಳಿ ಕ್ಷೇತ್ರದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಾಡಿನ ಜನತೆ ಕ್ಷಮೆ ಕೇಳಿದ್ದೇನೆ. ಅದೇ ರೀತಿ ಕಾಂಗ್ರೆಸ್ಸಿನವರೂ (Congress) ರಾಜ್ಯದ ಜನತೆ ಕ್ಷಮೆ ಕೇಳಲಿ. ಅದನ್ನು ಬಿಟ್ಟು, ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ನನ್ನ ಮೇಲೆ ಕೇಸ್‌ ಹಾಕಿ ಅಂತಾನೂ ನಾನೇ ಹೇಳಿದ್ದೇನೆ. ನಾನು ಯಾವುದೇ ಅಧಿಕಾರಿಗಳ ಮೇಲೂ ಒತ್ತಡ ತಂದಿಲ್ಲ. ಕಾಂಗ್ರೆಸ್ಸಿನವರ ಪಾದಯಾತ್ರೆ (Padayatre) ಮೇಲೆ ಪ್ರಕರಣ ದಾಖಲಿಸಿ ಅಂದವರೇ ನನ್ನ ಮೇಲೂ ಕೇಸ್‌ ಹಾಕುವಂತೆ ಹೇಳುವ ಮೂಲಕ ದುರಂಹಕಾರ ಪ್ರದರ್ಶಿಸುತ್ತಿದ್ದಾರೆ. ನಾನು ಈ ನೆಲದ ಕಾನೂನನ್ನು ಗೌರವಿಸುತ್ತೇನೆ.

click me!