ವೈದ್ಯ ವಿದ್ಯಾರ್ಥಿಗಳ ಫೆಲೋಶಿಪ್‌ ಹೆಚ್ಚಳ

By Kannadaprabha NewsFirst Published May 20, 2020, 9:32 AM IST
Highlights

ವೈದ್ಯ ವಿದ್ಯಾರ್ಥಿಗಳ ಫೆಲೋಶಿಪ್‌ ಹೆಚ್ಚಳ |  5 ವರ್ಷದ ಬಳಿಕ ಶಿಷ್ಯವೇತನ ಪರಿಷ್ಕರಣೆ, ಬಂಪರ್‌ ಕೊಡುಗೆ | ಕೊರೋನಾ ವಾರಿಯ​ರ್‍ಸ್ ಜತೆ ಕೈಜೋಡಿಸಿರುವ ವ್ಯಿರ್ಥಿಗಳು

ಬೆಂಗಳೂರು (ಮೇ. 20):  ಕೊರೋನಾ ಸೋಂಕಿನ ವಿರುದ್ಧ ಕೊರೋನಾ ವಾರಿಯರ್ಸ್‌ಗಳಾದ ವೈದ್ಯರೊಂದಿಗೆ ಕೈ ಜೋಡಿಸಿರುವ ಸ್ನಾತಕೋತ್ತರ, ಇಂಟರ್ನಿ (ಗೃಹ ವೈದ್ಯರು) ವಿದ್ಯಾರ್ಥಿಗಳು, ಫೆಲೋಶಿಪ್‌ ವಿದ್ಯಾರ್ಥಿಗಳು, ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸರ್ಕಾರವು ಬಂಪರ್‌ ಕೊಡುಗೆ ನೀಡಿದ್ದು, ಐದು ವರ್ಷಗಳ ಬಳಿಕ ಮಾಸಿಕ ಶಿಷ್ಯ ವೇತನವನ್ನು ಪರಿಷ್ಕರಿಸಲಾಗಿದೆ.

ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಇಂಟರ್ನಿ, ಸ್ನಾತಕೋತ್ತರ, ಸೂಪರ್‌ ಸ್ಪೆಷಾಲಿಟಿಯಲ್ಲಿ ವ್ಯಾಸಂಗ ಮಾಡುತ್ತಿರುವವರು, ಫೆಲೋಶಿಪ್‌ ವಿದ್ಯಾರ್ಥಿಗಳಿಗೆ ಮತ್ತು ಸಿನಿಯರ್‌ ರೆಸಿಡೆಂಟ್‌ ವೈದ್ಯರ ಮಾಸಿಕ ಶಿಷ್ಯ ವೇತನ ಹೆಚ್ಚಳ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

ಮಲೆನಾಡಿನ ನಿದ್ದೆಗೆಡಿಸಿದ ವೈದ್ಯರ ಟ್ರಾವೆಲ್‌ ಹಿಸ್ಟರಿ..!

ಸೋಮವಾರ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ವೈದ್ಯ ವಿದ್ಯಾರ್ಥಿಗಳು, ಸೀನಿಯರ್‌ ರೆಸಿಡೆಂಟ್ಸ್‌ ವೈದ್ಯರ ಶಿಷ್ಯ ವೇತನ ಹೆಚ್ಚಳ ಮಾಡಿಲ್ಲ ಎಂಬ ಬೇಡಿಕೆ ಇತ್ತು. ಅದನ್ನು ಪರಿಶೀಲನೆ ಹೆಚ್ಚಳ ಮಾಡಲಾಗಿದೆ.

ಇಂಟರ್ನಿ (ಗೃಹ ವೈದ್ಯರು) ಶಿಷ್ಯ ವೇತನವು 20 ಸಾವಿರ ಇದ್ದು, ಇದೀಗ 30 ಸಾವಿರ ರು.ಗೆ ಹೆಚ್ಚಿಸಲಾಗಿದೆ. ಪ್ರಥಮ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ 30 ಸಾವಿರ ರು.ನಿಂದ 45 ಸಾವಿರ ರು.ಗೆ, ಎರಡನೇ ವರ್ಷದ ವಿದ್ಯಾರ್ಥಿಗಳಿಗೆ 35 ಸಾವಿರ ರು.ನಿಂದ 50 ಸಾವಿರ ರು.ಗೆ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ 40 ಸಾವಿರ ರು.ನಿಂದ 55 ಸಾವಿರ ರು.ಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಸೂಪರ್‌ ಸ್ಪೆಷಾಲಿಟಿ ವೈದ್ಯಕೀಯ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ 40 ಸಾವಿ ರು.ನಿಂದ 55 ಸಾವಿರ ರು.ಗೆ, ಎರಡನೇ ವರ್ಷದ ವಿದ್ಯಾರ್ಥಿಗಳಿಗೆ 45 ಸಾವಿರ ರು.ನಿಂದ 60 ಸಾವಿರ ರು.ಗೆ, ಮೂರನೇ ವರ್ಷದ ವಿದ್ಯಾರ್ಥಿಗಳಿಗೆ 50 ಸಾವಿರ ರು.ನಿಂದ 65 ಸಾವಿರ ರು.ಗೆ ಹೆಚ್ಚಳ ಮಾಡಲಾಗಿದೆ.

ಲಾಕ್‌ಡೌನ್‌ 4.0: ಹಾವೇರಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ರೂಪಿಸಿ, ಸಚಿವ ಬೊಮ್ಮಾಯಿ

ಕಡ್ಡಾಯ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ 45 ಸಾವಿರ ರು.ನಿಂದ 60 ಸಾವಿರ ರು.ಗೆ ಮತ್ತು ಫೆಲೋಶಿಪ್‌ ವಿದ್ಯಾರ್ಥಿಗಳಿಗೆ 30 ಸಾವಿರ ರು.ನಿಂದ 60 ಸಾವಿರ ರು.ಗೆ ಹೆಚ್ಚಳ ಮಾಡಲಾಗಿದೆ. ಒಟ್ಟು 6 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹೆಚ್ಚಳ ಮಾಡಲಾಗಿದ್ದು, ಇದರಿಂದ ಸರ್ಕಾರಕ್ಕೆ 256 ಕೋಟಿ ರು. ವಾರ್ಷಿಕ ಹೊರೆ ಬೀಳಲಿದೆ ಎಂದು ಮಾಹಿತಿ ನೀಡಿದರು.

ಕಳೆದ ತಿಂಗಳು 2.5 ಸಾವಿರ ವೈದ್ಯಕೀಯ ಬೋಧಕ ಸಿಬ್ಬಂದಿಗೆ ಏಳನೇ ವೇತನ ಆಯೋಗ ಅನ್ವಯವಾಗಿರಲಿಲ್ಲ. ಆರ್ಥಿಕ ಸಂಕಷ್ಟಇದ್ದರೂ ವೈದ್ಯರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ವೇತನ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದ ವಾರ್ಷಿಕ 137 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ ಎಂದರು.

ಡೆಂಟಲ್‌ ಕ್ಲಿನಿಕ್‌ಗೆ ಅಸ್ತು:

ಇದೇ ವೇಳೆ ಡೆಂಟಲ್‌ ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಕುರಿತು ಡೆಂಟಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ಸಂಸ್ಥೆ ಮಾರ್ಗಸೂಚಿ ಪ್ರಕಟಿಸಿದೆ ಎಂದು ಸಚಿವ ಸುಧಾಕರ್‌ ತಿಳಿಸಿದರು.

ಕೆಂಪು, ಹಸಿರು ವಲಯಗಳಿಗೆ ಅರ್ಥವಿಲ್ಲ

ಬೆಂಗಳೂರು: ಕೊರೋನಾ ತಡೆಗೆ ಮುಂದಿನ ದಿನದಲ್ಲಿ ಮತ್ತಷ್ಟುಕಠಿಣ ನಿಯಮಾವಳಿ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ರಾಜ್ಯದಲ್ಲಿ ಕೊರೋನಾ ಹತೋಟಿಯಲ್ಲಿದೆ. ಆದರೆ, ಜನತೆ ಅವರ ಆರೋಗ್ಯದ ಬಗ್ಗೆ ಅವರೇ ಹೆಚ್ಚು ಕಾಳಜಿ ವಹಿಸಬೇಕು. ಈಗ ಕಂಟೈನ್ಮೆಂಟ್‌ ವಲಯ ಮಾತ್ರ ಇದ್ದು, ಕೆಂಪು, ಆರೆಂಜ್‌, ಹಸಿರು ವಲಯಗಳ ವರ್ಗೀಕರಣ ಕೈಬಿಡಲಾಗಿದೆ. ಹೊಸ ಮಾರ್ಗಸೂಚಿಗಳು ಜಾರಿಯಾಗಿದೆ. ಹೀಗಾಗಿ ಕೆಂಪು, ಆರೆಂಜ್‌, ಹಸಿರು ವಲಯಗಳಿಗೆ ಅರ್ಥ ಇಲ್ಲ ಎಂದು ಹೇಳಿದರು.

click me!