ಬೆಂಗಳೂರು: 17 ದಿನದಲ್ಲಿ 50 ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ

By Kannadaprabha NewsFirst Published Aug 27, 2020, 7:42 AM IST
Highlights

ಎಚ್ಚರ ವಹಿಸಿದ್ದರೂ ತಾಯಿಯಿಂದಲೇ ಮಕ್ಕಳಿಗೆ ಸೋಂಕು| ಗರ್ಭಿಣಿಯರಿಗೆ ಕೋವಿಡ್‌ ಸೋಂಕು ತಗುಲಿದರೂ, ಜನಿಸುವ ಮಕ್ಕಳಿಗೆ ಸೋಂಕು ಹರಡುವುದಿಲ್ಲ| ಸೋಂಕಿತ ತಾಯಿ ಮಗುವಿಗೆ ಹಾಲುಣಿಸುವಾಗ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು| 

ಬೆಂಗಳೂರು(ಆ.27): ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದ ಶಿವಾಜಿನಗರದ ಎಚ್‌ಎಸ್‌ಐಎಸ್‌ ಘೋಷ ಆಸ್ಪತ್ರೆಯಲ್ಲಿ ಕಳೆದ ಹದಿನೇಳು ದಿನಗಳಲ್ಲಿ 50 ಕೋವಿಡ್‌ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ಮೈಲಿಗಲ್ಲು ಸಾಧಿಸಲಾಗಿದೆ ಎಂದು ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಎಚ್‌ಎಸ್‌ಐಎಸ್‌ ಘೋಷ ಆಸ್ಪತ್ರೆಯನ್ನು ಆ.10ರಂದು ಕೋವಿಡ್‌ ಆಸ್ಪತ್ರೆಯಾಗಿ ವಿಶೇಷವಾಗಿ ಕೊರೋನಾ ಸೋಂಕಿತ ಗರ್ಭಿಣಿಯರ ಹೆರಿಗಾಗಿಯೇ ಪರಿವರ್ತಿಸಲಾಗಿತ್ತು. ಕಾರ್ಯಾರಂಭಿಸಿದ ಹದಿನೇಳು ದಿನಗಳಲ್ಲೇ ಒಟ್ಟು 50 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿ ಮೈಲಿಗಲ್ಲು ಸಾಧಿಸಿರುವ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗೆ ಅವರು ಅಭಿನಂದಿಸಿದ್ದಾರೆ.

'ವದಂತಿಗಳಿಗೆ ಕಿವಿಕೊಡಬೇಡಿ, ಮಾಸ್ಕ್‌ ಧರಿಸುವುದು ಕಡ್ಡಾಯ'

ವಾಣಿವಿಲಾಸದಲ್ಲಿ 17 ಮಕ್ಕಳಿಗೆ ಸೋಂಕು: 16 ಗುಣಮುಖ

ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಇದುವರೆಗೆ ಕೋವಿಡ್‌ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 17 ನವಜಾತ ಶಿಶುಗಳ ಪೈಕಿ 16 ಶಿಶುಗಳು ಚೇತರಿಸಿಕೊಂಡಿದ್ದರೆ ಒಂದು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಆಸ್ಪತ್ರೆಯಲ್ಲಿ ಈವರೆಗೂ 275ಕ್ಕೂ ಹೆಚ್ಚು ಕೋವಿಡ್‌ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. 14 ಶಿಶುಗಳಿಗೆ ಕೋವಿಡ್‌ ಸೋಂಕು ತಗುಲಿತ್ತು. ಉಳಿದಂತೆ ಹೊರಗಿನಿಂದ ಸೋಂಕಿಗೆ ಒಳಗಾದ ಮೂರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದವು. ಅವುಗಳಲ್ಲಿ 16 ಶಿಶುಗಳು ಗುಣುಮುಖವಾಗಿದೆ. ಕೇವಲ ಒಂದು ಶಿಶು ಮಾತ್ರ ಚಿಕಿತ್ಸೆ ಪಡೆಯುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಗರ್ಭಿಣಿಯರಿಗೆ ಕೋವಿಡ್‌ ಸೋಂಕು ತಗುಲಿದರೂ, ಜನಿಸುವ ಮಕ್ಕಳಿಗೆ ಸೋಂಕು ಹರಡುವುದಿಲ್ಲ. ಆದರೆ, ಸೋಂಕಿತ ತಾಯಿ ಮಗುವಿಗೆ ಹಾಲುಣಿಸುವಾಗ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆದರೆ ಎಷ್ಟೇ ಎಚ್ಚರ ವಹಿಸಿದರೂ ಮಕ್ಕಳು ತಾಯಿಯಿಂದಲೇ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಸಹನಾ ತಿಳಿಸಿದ್ದಾರೆ. 

ಸೆಪ್ಟಂಬರ್‌ ಅಂತ್ಯದೊಳಗೆ ರಾಜ್ಯದಲ್ಲಿ ಕೊರೋನಾ ಸೋಂಕಿರ ಸಂಖ್ಯೆ 6 ಲಕ್ಷಕ್ಕೆ?

"

click me!