* ಮೈಸೂರಿನಲ್ಲಿ ಕೊನೆ ಕ್ಷಣದಲ್ಲಿ ಮುರಿದುಬಿದ್ದ ಮದುವೆ
* ತಾಳಿ ಕಟ್ಟುವ ಸಂದರ್ಭದಲ್ಲಿ ಹೈಡ್ರಾಮಾ ಮಾಡಿದ ವಧು
* ಮದುವೆ ಮಂಟಪದಲ್ಲಿ ಕುಸಿದು ಬಿದ್ದಂತೆ ವಧು ನಾಟಕ
ಮೈಸೂರು, ಮೇ22): ತಾಳಿ ಕಟ್ಟುವ ಶುಭ ಘಳಿಗೆಗೆ ಸನ್ನಿಹಿತವಾಗಿತ್ತು. ಎಲ್ಲರೂ ಅಕ್ಷತೆ ಹಿಡಿದುಕೊಂಡು ಶುಭ ಹಾರೈಕೆಯ ಕ್ಷಣಕ್ಕಾಗಿ ಕಾದು ನಿಂತಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುಮಗಳು ಏಕಾಏಕಿ ಕುಸಿದು ಬಿದ್ದಂತೆ ನಟಿಸಿ, ನಂತರ ತಾನು ಪ್ರೀತಿಸಿದವನನ್ನೇ ಮದುವೆಯಾಗುವುದಾಗಿ ಹೈಡ್ರಾಮ ಮಾಡಿದ್ದಾಳೆ. ಕೊನೆಗೆ ಮದುವೆ ಮುರಿದುಬಿದ್ದಿದೆ. ಈ ಘಟನೆ ಇಂದು(ಭಾನುವಾರ) ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಮೈಸೂರಿನ ಸುಣ್ಣದಕೇರಿ ಸಿಂಚನಾಗೆ ಹೆಚ್.ಡಿ.ಕೋಟೆ ತಾಲೂಕಿನ ಗ್ರಾಮವೊಂದರ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಎರಡು ಕುಟುಂಬಗಳು ಸಂಭ್ರಮದಿಂದ ತಯಾರಿ ಮಾಡಿಕೊಂಡಿದ್ದರು. ಅದರಂತೆ ಇಂದು(ಭಾನುವಾರ) ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ವಿವಾಹ ಸಂಭ್ರಮ ನಡೆದಿತ್ತು. ಮದುವೆ ಶಾಸ್ತ್ರಗಳು ಮುಗಿದು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುಮಗಳು ಕುಸಿದು ಬಿದ್ದಂತೆ ನಟಿಸಿದ್ದಾಳೆ. ನಂತರ ತಾನು ಪ್ರೀತಿಸಿದವನನ್ನೇ ಮದುವೆಯಾಗುವುದಾಗಿ ಹೈಡ್ರಾಮ ಮಾಡಿದ್ದಾಳೆ. ಇದರಿಂದಾಗಿ ಮದುವೆ ಮನೆಯಲ್ಲಿ ಗೊಂದಲಗಳು ಆರಂಭವಾಗಿ, ಕೊನೆ ಕ್ಷಣದಲ್ಲಿ ಮದುವೆ ಬಿದ್ದಿದೆ.
ಕಾರಿನಲ್ಲೇ ಪ್ರೇಮಿಗಳ ಆತ್ಮಹತ್ಯೆ ಪ್ರಕಣಕ್ಕೆ ಟ್ವಿಸ್ಟ್, ಸಾವಿಗೆ ಕಾರಣ ಬಯಲು
ಪಕ್ಕದ್ಮನೆ ಯುವಕನ ಮೇಲೆ ಲವ್
ಇನ್ನು ಸಿಂಚನಾ ಸುಣ್ಣದಕೇರಿಯ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಆಕೆಯ ಪ್ರಿಯಕರ ಈ ಹಿಂದೆ ವರನಿಗೆ ಮೆಸೇಜ್ ಮಾಡಿ ಸಿಂಚನಾಳನ್ನು ಮದುವೆಯಾಗಬೇಡ ಎಂದಿದ್ದ. ಈ ಬಗ್ಗೆ ವರ ಸಿಂಚನಾಳನ್ನು ವಿಚಾರಿಸಿದಾಗ, ಮೆಸೇಜ್‌ಗೂ ನನಗೂ ಸಂಬಂಧವಿಲ್ಲ ಎಂದು ಉತ್ತರಿಸಿದ್ದಳು. ಆದರೆ, ಇಂದು ಮಾಂಗಲ್ಯಸರ ಕಟ್ಟುವಾಗ ತಾನು ಮದುವೆಯಾಗುವುದಿಲ್ಲವೆಂದು ಹೈಡ್ರಾಮ ಮಾಡಿದ್ದು, ಕೆ.ಆರ್.ಪೊಲೀಸ್ ಠಾಣೆ ಪೊಲೀಸರು ವಧುವನ್ನು ಠಾಣೆಗೆ ಕರೆದೊಯ್ದಿದ್ದಾರೆ.
ವರನ ಪೋಷಕರು ಈ ಮದುವೆಗಾಗಿ 5 ಲಕ್ಷ ರೂ. ಹಣ ಖರ್ಚು ಮಾಡಿದ್ದರು. ವಧುವಿಗೆ ಚಿನ್ನ ಹಾಗೂ ರೇಷ್ಮೆ ಸೀರೆ ಸಹ ಕೊಡಿಸಿದ್ದರು. ಇದೀಗ ಮದುವೆ ಮರಿದುಬಿದ್ದಿದ್ದರಿಂದ ವರನ ಪೋಷಕರು ವಧುವಿಗೆ ಪೋಷಕರು ಛೀಮಾರಿ ಹಾಕಿದ್ದಾರೆ.