* ವಿದೇಶಕ್ಕೆ ಹೋಗುವ ಮುನ್ನ ಸಿಎಂ ಮಹತ್ವದ ಆದೇಶ
* ಸಚಿವರ ನೇತೃತ್ವದಲ್ಲಿ ಎಂಟು ಕಾರ್ಯಪಡೆಗಳ ರಚನೆ
* ಭಾರೀ ಮಳೆ ಹಿನ್ನೆಲೆ ಟಾಸ್ಕ್ ಫೋರ್ಸ್ ರಚನೆ
ಬೆಂಗಳೂರು, (ಮೇ.22): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವೋಸ್ ಪ್ರವಾಸ ಕೈಗೊಂಡಿದ್ದಾರೆ. ಹೋಗುವ ಮೊದಲು ಬೆಂಗಳೂರಿಗೆ ಅಷ್ಟ ದಿಕ್ಪಾಲಕರ ನೇಮಕ ಮಾಡಿದ್ದಾರೆ.
ಭಾರೀ ಮಳೆ ಹಿನ್ನೆಲೆ ಸಿಎಂ ಬೊಮ್ಮಾಯಿ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ವಲಯವಾರು ವಿಂಗಡಣೆ ಮಾಡಿ ಆಯಾ ವಲಯಕ್ಕೆ ಸಚಿವರ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚಿಸಿ ಆದೇಶ ಹೊರಡಿಸಿದ್ದಾರೆ.
ಮಳೆ ಅನಾಹುತ, ಸಮಸ್ಯೆ ಎದುರಿಸಲು ಸಚಿವರ ನೇಮಕ ಮಾಡಲಾಗಿದ್ದು, ಬೊಮ್ಮಾಯಿ 8 ವಲಯಗಳಿಗೆ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ದಕ್ಷಿಣ ವಲಯಕ್ಕೆ ಕಂದಾಯ ಸಚಿವ ಆರ್.ಅಶೋಕ್, ಪೂರ್ವ ವಲಯಕ್ಕೆ ಡಾ. ಅಶ್ವತ್ಥ್ ನಾರಾಯಣ, ಪಶ್ಚಿಮ ವಲಯಕ್ಕೆ ವಸತಿ ಸಚಿವ ವಿ.ಸೋಮಣ್ಣ, ಆರ್. ಆರ್ ನಗರ ವಲಯಕ್ಕೆ S.T ಸೋಮಶೇಖರ್, ಮಹದೇವಪುರ ವಲಯಕ್ಕೆ ಬೈರತಿ ಬಸವರಾಜ್, ಬೊಮ್ಮನಹಳ್ಳಿ ವಲಯಕ್ಕೆ ಕೆ. ಗೋಪಾಲಯ್ಯ, ಯಲಹಂಕ, ದಾಸರಹಳ್ಳಿ ವಲಯಕ್ಕೆ ಮುನಿರತ್ನ ನೇಮಕ ಮಾಡಿದ್ದಾರೆ.
ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳ ರಚನೆ ಮಾಡಲಾಗಿದ್ದು, ಟಾಸ್ಕ್ ಫೋರ್ಸ್‌ನಲ್ಲಿ ಶಾಸಕರು, ಸಂಸದರಿರುತ್ತಾರೆ. ಇದರಲ್ಲಿ ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ,ವಲಯಗಳ ಜಂಟಿ ಆಯುಕ್ತರು ಸಂಚಾಲಕರಾಗಿ ಕಾರ್ಯ ನಿರ್ವಹಣೆ ಯಾಗಲಿದೆ.
√ Shri : South Zone
√ Shri. : East Zone
√ Shri. : West Zone
√ Shri. : RR Nagar
√ Shri. : Mahadevapura
√ Shri. : Bommanahalli
√ Shri. : Yalahanka and Dasarahalli
2/2
ಸೂಕ್ತ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಸೂಚನೆ
ಕಳೆದ ವಾರದಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕರುನಾಡು ತತ್ತರಿಸಿದ್ದು, ಬೆಳೆದಿದ್ದ ಬೆಳೆಗಳು ಹಾನಿಗೀಡಾಗುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈ ನಡುವೆ ಜನ-ಜೀವನದ ಮೇಲೂ ಭಾರೀ ಪರಿಣಾಮ ಬೀರಿದೆ.
ಮಾನ್ಸೂನ್ ಮುನ್ನವೇ ಸುರಿದಿರುವ ಮಳೆಯಿಂದಾದ ಆಗು-ಹೋಗುಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶನಿವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಿಂದ ವೀಡಿಯೋ ಕಾನ್ಪೆರೆನ್ಸ್ ಮೂಲಕ ಸಭೆ ನಡೆಸಿದ ಮುಖ್ಯಮಂತ್ರಿಗಳು, ರಾಜ್ಯದ ಮಳೆಯ ಪರಿಸ್ಥಿತಿ ಕುರಿತು ಅವಲೋಕಿಸಲಾಗಿದ್ದು, ಹಾನಿಗೀಡಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.
ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ, ಮಳೆಯಿಂದ ಆಗಿರುವ ಹಾನಿ, ಹಾನಿಗೆ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೇ ಬೇರೆ ರಾಜ್ಯಗಳಲ್ಲಿ ಸುರಿಯುತ್ತಿರುವ ಮಳೆ, ಮುಂದಿನ ಮುಂಗಾರು ಮಳೆಗೆ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಾಲೋಚಿಸಿದ ಮುಖ್ಯಮಂತ್ರಿ ಶೀಘ್ರದಲ್ಲೇ ಸಿದ್ಧತೆ ಕೈಗೊಳ್ಳಬೇಕೆಂದು ಸೂಚಿಸಿದರ.
ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ. ಸೋಮಣ್ಣ, ಇಂಧನ ಸಚಿವ ಸುನಿಲ್ ಕುಮಾರ್ ಭಾಗಿಯಾಗಿದ್ದರು.
ಮಳೆಯಿಂದ 3,453 ಮನೆಗಳಿಗೆ ಹಾನಿ
ಇತ್ತೀಚಿಗಷ್ಟೇ ಸಿಲಿಕಾನ್ ಸಿಟಿಯಲ್ಲಿ ಬಿದ್ದ ಭಾರಿ ಮಳೆಯಿಂದ 3,453 ಮನೆಗಳಿಗೆ ಹಾನಿಯಾಗಿದೆ ಎಂದು ಪಾಲಿಕೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಬಿ.ಶರತ್ ಹೇಳಿದ್ದಾರೆ.
ಪೂರ್ವ 714, ದಕ್ಷಿಣ 652, ಆರ್.ಆರ್.ನಗರ 530, ಪಶ್ಚಿಮ 494, ಮಹದೇವಪುರ 461, ದಾಸರಹಳ್ಳಿ 247, ಯಲಹಂಕ 208 ಮತ್ತು ಬೊಮ್ಮನಹಳ್ಳಿ ವಲಯ 147 ಸೇರಿ ಒಟ್ಟು 3,453 ಮನೆಗಳಿಗೆ ಹಾನಿಯಾಗಿರುವುದು ಸರ್ವೇಯಲ್ಲಿ ದೃಢಪಟ್ಟಿದೆ.
ಹಾಗಾಗಿ, ವಿವರಗಳಲ್ಲಿ ಸಂಗ್ರಹಿಸಿ ಪ್ರತಿ ಸಂತ್ರಸ್ತರಿಗೆ ತಲಾ 25 ಸಾವಿರ ರೂ.ಪರಿಹಾರ ನೀಡುವ ಕಾರ್ಯ ಈಗಾಗಲೇ ಶುರುವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದ್ದಾರೆ.
ಕಡಿಮೆ ಅವಧಿಯಲ್ಲಿ ಬಿದ್ದಿರುವ ಭಾರಿ ಮಳೆಯಿಂದ ನಗರದಲ್ಲಿ ಸಮಸ್ಯೆ ಆಗುತ್ತಿರುವುದು ನಿಜ. ಸಿಲಿಕಾನ್ ಸಿಟಿಯಲ್ಲಿ 984 ಕಿ.ಮೀ.ರಾಜಕಾಲುವೆಗಳಿವೆ. ರಾಜಕಾಲುವೆಯಲ್ಲಿ ಹೂಳು ತೆಗೆಯಲು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಜಲಮಂಡಳಿಯವರು ರಾಜಕಾಲುವೆಯಲ್ಲಿ ಪೈಪ್ ಅಳವಡಿಕೆಗೆ ಕಾಮಗಾರಿ ಅಗೆದಿರುವ ಹಿನ್ನೆಲೆಯಲ್ಲಿ ಸಮಸ್ಯೆಯಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ಹರಿಯುತ್ತಿರುವ ನೀರನ್ನು ಬೇರೆ ಕಡೆಗೆ ಹರಿಯುವಂತೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.