ಚಂಡಮಾರುತ ಎಫೆಕ್ಟ್‌: 3 ದಿನ ಹಲವು ರೈಲು ಸಂಚಾರ ರದ್ದು

By Kannadaprabha NewsFirst Published Dec 5, 2023, 9:18 AM IST
Highlights

ಸೋಮವಾರ ತಮಿಳುನಾಡು, ಆಂಧಪ್ರದೇಶ ಬಿಹಾರಕ್ಕೆ ಹೋಗಿ ಬರುವ ಹದಿನಾರು ರೈಲುಗಳು ರದ್ದಾಯಿತು. ಪರಿಣಾಮ ಇಲ್ಲಿನ ಕೆಎಸ್‌ಆರ್, ಸರ್‌ ಎಂ.ವಿಶ್ವೇ ಶ್ವರಯ್ಯ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಪರದಾಡಿದರು. ವಿಪರೀತ ಮಳೆ ಕಾರಣದಿಂದ ಮುಂದಿನ ಮೂರು ದಿನಗಳವರೆಗೆ ಹಲವು ರೈಲುಗಳ ಸಂಚಾರ ರದ್ದುಪಡಿಸಿರುವುದಾಗಿ ನೈಋತ್ಯ ರೈಲ್ವೇ ತಿಳಿಸಿದೆ.

ಬೆಂಗಳೂರು(ಡಿ.05):  ಮೈಚಾಂಗ್‌ ಚಂಡಮಾರುತದ ಪರಿಣಾಮ ಸುರಿಯುತ್ತಿರುವ ಭಾರಿ ಮಳೆ ಕಾರಣದಿಂದ ಗುರುವಾರದವರೆಗೆ ಬೆಂಗಳೂರಿನಿಂದ ವಿವಿಧ ರಾಜ್ಯಗಳಿಗೆ ತೆರಳುವ 25ಕ್ಕೂ ಹೆಚ್ಚಿನ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ರದ್ದುಗೊಳಿಸಿದೆ. ಸೋಮವಾರ ತಮಿಳುನಾಡು, ಆಂಧಪ್ರದೇಶ ಬಿಹಾರಕ್ಕೆ ಹೋಗಿ ಬರುವ ಹದಿನಾರು ರೈಲುಗಳು ರದ್ದಾಯಿತು. ಪರಿಣಾಮ ಇಲ್ಲಿನ ಕೆಎಸ್‌ಆರ್, ಸರ್‌ ಎಂ.ವಿಶ್ವೇ ಶ್ವರಯ್ಯ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಪರದಾಡಿದರು. ವಿಪರೀತ ಮಳೆ ಕಾರಣದಿಂದ ಮುಂದಿನ ಮೂರು ದಿನಗಳವರೆಗೆ ಹಲವು ರೈಲುಗಳ ಸಂಚಾರ ರದ್ದುಪಡಿಸಿರುವುದಾಗಿ ನೈಋತ್ಯ ರೈಲ್ವೇ ತಿಳಿಸಿದೆ.

ಚಂಡಮಾರುತ ಪರಿಣಾಮ ರೈಲ್ವೇ ಟ್ರ್ಯಾಕ್‌ನಲ್ಲಿ ಉಂಟಾಗಬಹುದಾದ ಅಪಾಯ, ಭೂಕುಸಿತ ಸೇರಿ ಸಂಚಾರಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ ಹಾಗೂ, ಝಾರ್ಕಂಡ, ಓಡಿಶಾ, ಅಸ್ಸಾಂ, ದಕ್ಷಿಣ ದೆಹಲಿ ಓಖಲಾಗೆ ಹೋಗಿಬರುವ ರೈಲುಗಳು ರದ್ದಾಗಿವೆ.

ಪ್ರಾಯೋಗಿಕವಾಗಿ ಸಂಚರಿಸಿದ ಬೆಳಗಾವಿ-ಬೆಂಗಳೂರು ವಂದೇ ಭಾರತ ರೈಲು..!

ಸೋಮವಾರ ತಮಿಳುನಾಡಿಗೆ ತೆರಳುವ ಎಲ್ಲಾ ರೈಲುಗಳ ಸೇವೆ ರದ್ದಾಯಿತು. ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್‌–ಮೈಸೂರು (12007/12008) ಹಾಗೂ ಡಾ.ಎಂಜಿಆರ್‌ ಚೆನ್ನೈ- ಕೆಎಸ್‌ಆರ್‌ ಬೆಂಗಳೂರು ಸೇರಿ ಚೆನ್ನೈಗೆ ಹೋಗಿಬರುವ ಎಲ್ಲಾ ರೈಲುಗಳು ರದ್ದಾದವು.

ಅಲ್ಲದೆ, ಬಿಹಾರದ ದಾನಪುರಕ್ಕೆ ತೆರಳುವ ಕೆಎಸ್‌ಆರ್‌ ಬೆಂಗಳೂರು-ದಾನ್‌ಪುರ ( 06509) ರೈಲು, ಸರ್‌.ಎಂ.ವಿಶ್ವೇಶ್ವರಯ್ಯ-ದಾನ್‌ಪುರ ರೈಲು (12295), ಅಸ್ಸಾಂನ ಎಸ್‌ಎಂವಿಟಿ-ಗುವಾಹಟಿ (12510) ಹೋಗಿಲ್ಲ. ಒಡಿಶಾದ ಎಸ್‌ಎಂವಿಟಿ-ಭುವನೇಶ್ವರ (12846), ಹೌರಾ-ಎಎಸ್‌ಎಂವಿಟಿ ( 12863 ಹಾಗೂ 22863), ಬಿಹಾರದ ಮುಝಫರಾಪುರ-ಎಸ್‌ಎಂವಿಟಿ (15228), ಎಸ್‌ಎಂವಿಟಿ-ಕಾಕಿನಾಡ (17210), ಎಸ್‌ಎಂವಿಟಿ-ನಾಗೆರಕೊಯ್ಲ ( 17235 ) ರೈಲು ರದ್ದಾಯಿತು.

ಜನರಲ್‌ ಬೋಗಿ, ಸ್ಲೀಪರ್ ಕೋಚ್‌ ಸಂಖ್ಯೆ ಕಡಿತಗೊಳಿಸಿದ್ದೇ ರೈಲುಗಳಲ್ಲಿ ಜನದಟ್ಟಣೆಗೆ ಕಾರಣ? ರೈಲ್ವೆ ಸಚಿವರ ಸ್ಪಷ್ಟನೆ..

ಇಂದಿನ ರದ್ದು: 

ಡಿ.5ರಂದು ಮಂಗಳವಾರ ಬಿಹಾರದ ದಾನ್‌ಪುರಕ್ಕೆ ತೆರಳಬೇಕಿದ್ದ (03252) ರೈಲು ರದ್ದಾಗಿದೆ. ಎಸ್‌ಎಂವಿಟಿ-ಹತಿಯಾ (ಝಾರ್ಕಂಡ್) (12836), ಎಸ್‌ಎಂವಿಟಿ-ನಾಗೆರಕೊಯ್ಲ ( 17235 ), ಕಾಕಿನಾಡ- ಎಸ್‌ಎಂವಿಟಿ ರೈಲು ರದ್ದಾಗಿದೆ.

ನಾಳೆ, ನಾಡಿದ್ದು ರದ್ದು:

ಡಿ. 6ರಂದು ದಾನ್‌ಪುರದಿಂದ ಬೆಂಗಳೂರಿಗೆ ಬರಬೇಕಿದ್ದ ರೈಲು (06510) , ಎಸ್‌ಎಂವಿಟಿ-ಗುವಾಹಟಿ (12509), ಎಸ್‌ಎಂವಿಟಿ-ನಾಗೆರಕೊಯ್ಲ ( 17235 ) , ಎಸ್‌ಎಂವಿಟಿ-ಹೌರಾ (22864) , ದಕ್ಷಿಣ ದೆಹಲಿ ಸಂಪರ್ಕಿಸುವ ಓಖಲಾ-ಎಸ್‌ಎಂವಿಟಿ ರೈಲಿನ ಸಂಚಾರ ಡಿ. 6, 13 ಹಾಗೂ 20 ರಂದು ರದ್ದಾಗಿದೆ. ಡಿ. 7ರಂದು ಕಾಕಿನಾಡ, ನಾಗೆರಕೊಯ್ಲ ಹಾಗೂ ಮುಝಫರಪುರ ರೈಲುಗಳು ರದ್ದಾಗಿದೆ.

click me!