ಹೋರಾಟದ ದನಿ ಅಡಗಿಸಲು ಈ ದೂರೇ? ರೈತರು, ಕನ್ನಡ ಪರ ಹೋರಾಟಗಾರರ ವಿರುದ್ಧ ತಲಾ 41 ಪ್ರಕರಣ ದಾಖಲು!

Published : Dec 13, 2025, 04:35 PM IST
CT Ravi  Dr G Parameshwara

ಸಾರಾಂಶ

ಕಳೆದ 3 ವರ್ಷಗಳಲ್ಲಿ ರಾಜ್ಯದ ರೈತರು ಮತ್ತು ಕನ್ನಡಪರ ಹೋರಾಟಗಾರರ ಮೇಲೆ ತಲಾ 41 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಪ್ರಕರಣಗಳ  ಹಿಂಪಡೆಯುವ ಸರ್ಕಾರದ ಮಾನದಂಡಗಳ ಬಗ್ಗೆಯೂ ವಿವರಿಸಿದ್ದಾರೆ.

ವಿಧಾನ ಪರಿಷತ್‌ : ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ರೈತರು ಹಾಗೂ ಕನ್ನಡ ಪರ ಹೋರಾಟಗಾರರ ಮೇಲೆ ವಿವಿಧ ಜಿಲ್ಲೆಗಳಲ್ಲಿ ತಲಾ 41 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಬಿಜೆಪಿಯ ಸಿ.ಟಿ.ರವಿ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ರೈತರ ವಿರುದ್ಧ 2023ರಲ್ಲಿ 7, 2024ರಲ್ಲಿ 4 ಹಾಗೂ 2025ರಲ್ಲಿ 30 ಪ್ರಕರಣಗಳು ದಾಖಲು ಮಾಡಲಾಗಿದೆ. ಅದೇ ರೀತಿ ಕನ್ನಡ ಪರ ಹೋರಾಟಗಾರರ ವಿರುದ್ಧ ಮೂರು ವರ್ಷಗಳಲ್ಲಿ 41 ಪ್ರಕರಣ ದಾಖಲಾಗಿದ್ದು, 2023ರಲ್ಲಿ 26, 2024ರಲ್ಲಿ 9 ಹಾಗೂ 2025ರಲ್ಲಿ 6 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ರೈತರ ವಿರುದ್ಧ ಕೇಸ್‌ ಜಿಲ್ಲಾವಾರು ಇಂತಿದೆ

2023 ರಲ್ಲಿ, ಬೆಂಗಳೂರು- 2, ತುಮಕೂರು- 4 ಮತ್ತು ಬೆಳಗಾವಿ -1 ಪ್ರಕರಣ ದಾಖಲಾದರೆ, 2024ರಲ್ಲಿ ಬೆಂಗಳೂರು- 1, ದಾವಣಗೆರೆ- 1, ಶಿವಮೊಗ್ಗ- 1, ಕಲಬುರಗಿ -1 ಪ್ರಕರಣ ದಾಖಲಾಗಿದೆ. 2025ರಲ್ಲಿ ಬೆಂಗಳೂರು -2, ತುಮಕೂರು- 13, ರಾಮನಗರ -5, ಮಂಡ್ಯ- 1, ಚಾಮರಾಜನಗರ -1, ಬಾಗಲಕೋಟೆ- 4, ದಾವಣಗೆರೆ- 2, ಬೆಳಗಾವಿ- 1, ಕೊಪ್ಪಳ- 1 ಹೀಗೆ ಒಟ್ಟು 30 ಪ್ರಕರಣ ದಾಖಲಾಗಿದೆ.

ಕನ್ನಡ ಪರ ಹೋರಾಟಗಾರರ ವಿರುದ್ಧ ದಾಖಲಾದ ದೂರುಗಳು ಇಂತಿವೆ

2023ರಲ್ಲಿ ಬೆಂಗಳೂರು- 19, ಬೆಂಗಳೂರು ಜಿಲ್ಲೆ- 1, ರಾಮನಗರ - 1, ದಾವಣಗೆರೆ - 1, ಚಿತ್ರದುರ್ಗ - 4, 2024ರಲ್ಲಿ ಬೆಂಗಳೂರು ನಗರ- 1, ತುಮಕೂರು- 4, ರಾಮನಗರ - 1, ಗದಗ- 1, ಬೀದರ್- 1, ಯಾದಗಿರಿ- 1 2025ರಲ್ಲಿ ಬೆಂಗಳೂರು ನಗರ - 4, ರಾಮನಗರ - 1, ಚಿತ್ರದುರ್ಗ - 1 ಹೀಗೆ ಒಟ್ಟು 41 ಪ್ರಕರಣ ದಾಖಲಾಗಿದೆ.

ಪ್ರಕರಣ ವಾಪಸ್‌ಗೆ ಮಾನದಂಡ:

ಯಾವುದೇ ಪ್ರಕರಣಗಳನ್ನು ವಾಪಸ್‌ ಪಡೆಯುವ ಮುನ್ನ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು, ಸರ್ಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆದ ನಂತರ ಸಚಿವ ಸಂಪುಟ ಉಪಸಮಿತಿ ಮುಂದೆ ಮಂಡಿಸಲಾಗುತ್ತದೆ. ಈ ಸಮಿತಿ ಅಭಿಯೋಜನೆಯಿಂದ ಹಿಂಪಡೆಯಲು ಸೂಕ್ತ ಪ್ರಕರಣವೆಂದು ಶಿಫಾರಸು ಮಾಡಿದವುಗಳನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಸಂಪುಟ ಅನುಮೋದಿಸಿದ ಪ್ರಕರಣಗಳನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ