ಬೇಲೂರು ಚನ್ನಕೇಶವ ರಥದ ಮುಂದೆ ಕುರಾನ್ ಪಠಣ ಮಾಡಬೇಕೆಂದು ಹೇಳಿಲ್ಲ!: ಕೈಪಿಡಿಯ ಮಾಹಿತಿ ಹೀಗಿದೆ.!

By Sathish Kumar KH  |  First Published Mar 30, 2023, 7:20 PM IST

ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್‌ ಪಠಣ ಮಾಡಬೇಕೆಂದು ಮೈಸೂರು ಸಂಸ್ಥಾನದ ಮೂಲಕ ಕೈಪಿಡಿಯ ದಾಖಲೆಗಳಲ್ಲಿ ಉಲ್ಲೇಖವನ್ನೇ ಮಾಡಿಲ್ಲ.


ಹಾಸನ (ಮಾ.30): ಹಾಸನ ಜಿಲ್ಲೆಯ ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್‌ ಪಠಣ ಮಾಡಬೇಕೆಂದು ಯಾವ ದಾಖಲೆಗಳಲ್ಲಿಯೂ ಉಲ್ಲೇಖ ಮಾಡಿಲ್ಲ. ಆದರೆ, 90 ವರ್ಷಗಳಿಂದ ತಪ್ಪು ತಿಳುವಳಿಕೆಯಿಂದ ಕುರಾನ್‌ ಪಠಣ ಮಾಡಿಕೊಂಡು ಬರಲಾಗುತ್ತಿದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಆಗಮ ಪಂಡಿತರು ತಿಳಿಸಿದ್ದಾರೆ.

ಚನ್ನಕೇಶವ ರಥೋತ್ಸವದ ಮುಂದೆ ಕಳೆದ 90 ವರ್ಷಗಳಿಂದ ಕುರಾನ್‌ ಪಠಣ ಮಾಡಲಾಗುತ್ತದೆ. ಮುಸ್ಲಿಂ ಖಾಜಿಗಳನ್ನು ಕರೆತಂದು ಖುರಾನ್‌ ಪಠಣ ಮಾಡಿದ ನಂತರವೇ ರಥವನ್ನು ಎಳೆಯಲಾಗುತ್ತದೆ. ಆದರೆ, ಸುಮಾರು 900 ವರ್ಷಗಳ ಇತಿಹಾಸವಿರುವ ಹಾಗೂ ಕನ್ನಡ ನಾಡನ್ನು ಆಳಿದ ಒಂದು ಹೊಯ್ಸಳ ಸಾಮ್ರಾಜ್ಯದ ಹಿಂದೂ ಆರಾಧ್ಯ ದೈವ ಚನ್ನಕೇಶ್ವರ ಸ್ವಾಮಿಯ ಮುಂದೆ ಅಲ್ಲಾನೇ ಎಲ್ಲಾ, ಅಲ್ಲಾನ ಮುಂದೆ ಯಾವುದೇ ದೇವರಿಲ್ಲ ಎಂದು ಕುರಾನ್‌ ಪಠಣ ಮಾಡಲಾಗುತ್ತದೆ. ನಂತರ, ರಥವನ್ನು ಎಳೆಯುವ ಮೂಲಕ ಹಿಂದೂಗಳು ಹಾಗೂ ಹಿಂದೂ ದೇವರಿಗೆ ಅಪಮಾನ ಮಾಡಲಾಗುತ್ತದೆ.ಈ ಪದ್ದತಿಯನ್ನು ಕೈಬಿಡಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿ ಹೋರಾಟ ಆರಂಭಿಸಿದ್ದವು. ನಿರಂತರ ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಈಗ ಜಯ ಸಿಗುವುದು ಸನ್ನಿಹಿತವಾಗಿದೆ.

Tap to resize

Latest Videos

ಮುಸ್ಲಿಂ ಖಾಜಿಗಳ ಕುರಾನ್‌ ಪಠಣ ಸಂಪ್ರದಾಯ ಕೈಬಿಡಿ: ರೋಹಿತ್‌ ಚಕ್ರತೀರ್ಥ ವಿವಾದ

ದೇವಾಲಯದಲ್ಲಿನ ಕಾರ್ಯಗಳ ಹಂಚಿಕೆ: ಇಂದು ಬೇಲೂರಿನ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತ ಜಿ.ಎ.ವಿಜಯ್ ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಚನ್ನಕೇಶವ ರಥೋತ್ಸವದ ವೇಳೆ ಕುರಾನ್‌ ಪಠಣದ ಬಗ್ಗೆ ಮಾತನಾಡಿದ ಅವರು, ರಥೋತ್ಸವ ದಿನ ಯಾರು ಯಾರು ಯಾವ ಕರ್ತವ್ಯ ನಿರ್ವಹಿಸಬೇಕು ಏನೇನು ವ್ಯತ್ಯಾಸ ಆಗಿದೆ. ಜನರಲ್ಲಿ ಏನು ಗೊಂದಲ ಆಗಿದೆ ಅವುಗಳ ಪರಿಶೀಲನೆಗೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾಗಾಗಿ ಇಂದು ಭೇಟಿ ನೀಡಲಾಗಿದೆ. ಚನ್ನಕೇಶವ ದೇವಾಲಯ ದಲ್ಲಿ ಯಾರು? ಯಾವ ಸಂದರ್ಭದಲ್ಲಿ? ಯಾವ ಕರ್ತವ್ಯ? ಹೇಗೆ ಮಾಡಬೇಕು? ಎಂದು ಕೈಬರಹದ ಮೂಲಕ ಉಲ್ಲೇಖ ಮಾಡಲಾಗಿದೆ. ಇದು ಮೈಸೂರು ಮಹಾರಾಜರ ಸಂಸ್ಥಾನದಿಂದ ಅದು ಬಿಡುಗಡೆ ಆಗಿದೆ. ಅದರಂತೆ ಎಲ್ಲ ವಿಧಿ ವಿದಾನ, ಪೂಜಾ ಕೈಂಕರ್ಯ ಕರ್ತವ್ಯ ನಡೆಯುತ್ತಿದೆ. ಆದರೆ, ಮದ್ಯದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಜನರಲ್ಲಿ ಗೊಂದಲ ಆಗಿದೆ. ಹಾಗಾಗಿ ನಾವು ಮೂಲ ಗ್ರಂಥ ಪರಿಶೀಲನೆ ಮಾಡಿದ್ದೇವೆ. ಈ ಕೈಪಿಡಿಯಲ್ಲಿ ರಥದ ಮುಂದೆ ಖುರಾನ್ ಪಠಣ ಮಾಡಬೇಕು ಎಂದು ಎಲ್ಲಿಯು ಹೇಳಿಲ್ಲ ಎಂಬ ಮಾಹಿತಿ ತಿಳಿಸಿದರು.

ಸರ್ಕಾರಕ್ಕೆ ಮೂರು ದಿನದಲ್ಲಿ ವರದಿ ಸಲ್ಲಿಕೆ: ಇನ್ನು ದೇವಾಲಯ ವ್ಯವಸ್ಥಾಪನಾ ಸಮಿತಿ, ಆಡಳಿತ ಅಧಿಕಾರಿ, ಧಾರ್ಮಿಕ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆ ಮಾಡಲಾಗಿದೆ. ಮ್ಯಾನ್ಯುಯಲ್ ನಲ್ಲಿ ಏನು ಹೇಳಿದೆ ಯಾರು ಏನೇನು ಮಾಡುತ್ತಿದ್ದಾರೆ, ಏನು ತಪ್ಪು ಆಗಿದೆ ಎನ್ನೋ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಇನ್ನೂ ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿ ಎಲ್ಲವನ್ನೂ ತಿಳಿದು ನಾನು ಹಿರಿಯ ಅಧಿಕಾರಿಗಳಿಗೆ ವರದಿ ಕೊಡಬೇಕಾಗುತ್ತದೆ. ಮುಂದಿನ ಎರಡು ಮೂರುದಿನದಲ್ಲಿ ನಮ್ಮ ವರದಿಯನ್ನು ಸರ್ಕಾರಕ್ಕೆ ನೀಡುತ್ತೇನೆ. ಕೈಪಿಡಿಯಲ್ಲಿ ಏನಿದೆ? ಏನು ಮಾಡಲಾಗುತ್ತಿದೆ? ಈಗ ಆಗಿರುವ ಲೋಪದೋಷ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು. 

ರಥದ ಮುಂದೆ, ಹಿಂದೆ ಕುರಾನ್‌ ಪಠಣ ಮಾಡುವಂತೆ ಹೇಳಿಲ್ಲ: ಮೈಸೂರು ಸಂಸ್ಥಾನದ ಕೈಪಿಡಿಯ ಪ್ರಕಾರ ಎಲ್ಲರಿಗು ಹಿಂದು ಧಾರ್ಮಿಕ ದತ್ತಿ ಕಾಯಿದೆ ಸೆಕ್ಷೆನ್ 58 ರ ಪ್ರಕಾರ ದೇವಾಲಯದ ಸಂಪ್ರದಾಯ ನಡೆಸಿಕೊಂಡು ಹೋಗಬೇಕು ಎಂದಿದೆ. ಅದರಂತೆ ಸರ್ಕಾರ ಮುಂದಿನ ಕ್ರಮ ವಹಿಸುತ್ತದೆ. ರಥದ ಮುಂದೆ ಖುರಾನ್ ಪಠಣ ಮಾಡಬೇಕು ಎಂದು ಎಲ್ಲಿಯು ಹೇಳಿಲ್ಲ. ನಾನು ಓದಿದ ಪ್ರಕಾರ ರಥದ ಮುಂದೆಯಾಗಲಿ, ದೇವಾಲಯದ ಮುಂದೆಯಾಗಲಿ ಮಾಡಬೇಕು ಎಂದು ಹೇಳಿಲ್ಲ. ಇನ್ನು ಅವರಿಗೆ ಗೌರವ ಸಲ್ಲಿಸಬೇಕು, ಅವರೂ ಕೂಡ ನಮಸ್ಕರಿಸಬೇಕು ಎಂದು ಹೇಳಲಾಗಿದೆ ಎಂದು ಮಾಹಿತಿ ನೀಡಿದರು.

'ಕುರಾನ್ ಪಠಿಸಿದ ನಂತರ ನಡೆಯುತ್ತೆ ರಥಜಾತ್ರೆ', ಚನ್ನಕೇಶವನ ಎದುರು ಕುರಾನ್ ಪಠಣ ಶುರುವಾಗಿದ್ದು ಹೇಗೆ..?

ಅವರಿಗೆ ಮರ್ಯಾದ ಸಲಾಂ ಮಾಡಬೇಕು? : ಈ ಬಗ್ಗೆ ಕೈಪಿಡಿಯ ಪ್ರತಿಯನ್ನು ಪಡೆಯಲಾಗಿದೆ. ಇದನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ ನಂತರ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಏನು ಮಾಡಬೇಕು ತೀರ್ಮಾನ ಮಾಡುತ್ತಾರೆ. ಇನ್ನು ಮುಖ್ಯವಾಗಿ ಕೈಪಿಡಿಯಲ್ಲಿ ಕುರಾನ್ ಪಠಣ ಮಾಡಬೇಕು ಎಂದು ಎಲ್ಲಿಯು ಇಲ್ಲ. ಇದನ್ನ ನಾನು ವರದಿಯಲ್ಲಿ ಕೊಡುತ್ತೇನೆ. ಅವರು ಮರ್ಯಾದೆ ಸಲಾಂ ಮಾಡಬೇಕು ಎಂದಿದೆ. ಅವರು ಮರ್ಯಾದ ಸಲಾಂ ಮಾಡಬೇಕು ಎಂದು ಉಲ್ಲೇಖ ಇದೆ. ಇನ್ನು ದೇವಸ್ಥಾನಕ್ಕಾಗಲಿ, ಅಧಿಕಾರಿಗಳಿಗಾಗಲಿ ಯಾರಿಗೆ ನಮಸ್ಕಾರ ಮಾಡಬೇಕು ಎಂದು ಇಲ್ಲ. ನಮಸ್ಕಾರ ಮಾಡಬೇಕು ಎಂದಿದೆ. ಹಾಗಾಗಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದು ಪುರಾತತ್ ಇಲಾಖೆ ಹಿರಿಯ ಆಗಮ ಪಂಡಿತ ವಿಜಯ್ ಕುಮಾರ್ ತಿಳಿಸಿದರು.

click me!