ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಪೋಸ್ಟರ್ ರಿಲೀಸ್‌

Published : Mar 30, 2023, 04:13 PM ISTUpdated : Mar 30, 2023, 04:14 PM IST
ಸಿದ್ದರಾಮಯ್ಯ ಜೀವನಾಧಾರಿತ ಸಿನಿಮಾದ ಪೋಸ್ಟರ್ ರಿಲೀಸ್‌

ಸಾರಾಂಶ

ರಾಜ್ಯದಲ್ಲಿ ವಿಧಾನಸಭೆ ಕಾವು ಏರುತ್ತಿದೆ. ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಆದ ಬೆನ್ನಲ್ಲಿಯ ಅವರ ಜೀವನಾಧಾರಿನ ಸಿನಿಮಾದ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ.  

ಬೆಂಗಳೂರು (ಮಾ.30): ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲಿಯೇ ರಾಜಕೀಯ ನಾಯಕರ ಉತ್ಸಾಹ ಮುಗಿಲುಮುಟ್ಟಿದೆ. ರಾಜಕಾರಣಿಗಳು ಚುನಾವಣೆವಾಗಿ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜೀವನಾಧಾರಿತ ಸಿನಿಮಾದ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ಲೀಡರ್ ರಾಮಯ್ಯ ಹೆಸರಿನ ಸಿನಿಮಾ ಪೋಸ್ಟರ್ ಗುರುವಾರ ಬಿಡುಗಡೆ ಮಾಡಲಾಗಿದೆ. ಸಿದ್ದರಾಮಯ್ಯ ಮನೆಯ ಮುಂದೆ ಪೋಸ್ಟರ್ ಅನಾವರಣ ಮಾಡಲಾಗಿದೆ. ಸಿದ್ಧರಾಮಯ್ಯ ಅವರ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ ನಟಿಸುವ ಸಾಧ್ಯತೆ ಇದೆ. ಈಗಾಗಲೇ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಲಾಗಿದೆ ಎನ್ನುವ ವರದಿಯಾಗಿದೆ. ವಿಜಯ್‌ ಸೇತುಪತಿ ಕೂಡ ಸಿದ್ಧರಾಮಯ್ಯ ಅವರ ಪಾತ್ರದಲ್ಲಿ ನಟಿಸಲು ಬಹುತೇಕ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಮುಂದಿನ ತಿಂಗಳಿಂದ ಸಿನಿಮಾದ ಶೂಟಿಂಗ್ ನಡೆಯಲಿದೆ. ರಾಮನವಮಿ ಪ್ರಯುಕ್ತ ಇಂದು ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಸಂಜೆ ಮತ್ತೆ ಅಧಿಕೃತವಾಗಿ ಸಿದ್ದರಾಮಯ್ಯ ಕೈಯಿಂದ ಪೋಸ್ಟರ್ ರಿಲೀಸ್ ಮಾಡಲಾಗುತ್ತದೆ. ಡೈರೆಕ್ಟರ್, ಸತ್ಯ ರತ್ನಮ್ ಸೇರಿ ಹಲವರಿಂದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಬಿಜೆಪಿ ಜೆಡಿಎಸ್‌ ಮೈತ್ರಿ ಮಾಡಿಕೊಂಡರೂ ಆಶ್ಚರ್ಯವಿಲ್ಲ: ಸಿದ್ದರಾಮಯ್ಯ

ಜನ್ಮದಿನದ ದಿನ ತೆರೆಗೆ: ಸಿದ್ದರಾಮಯ್ಯ ಹುಟ್ಟುಹಬ್ಬದಂದೇ ತೆರೆಗೆ ಅಪ್ಪಳಿಸಲಿದೆ ಲೀಡರ್ ರಾಮಯ್ಯ ಚಿತ್ರ. ಆಗಸ್ಟ್ 3ರಂದು ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಆ ದಿನದಂದೇ ಚಿತ್ರ ಬಿಡುಗಡೆ ಮಾಡಬೇಕು ಅನ್ನೋದು ನಿರ್ದೇಶಕ ಸತ್ಯ ರತ್ನಮ್‌ ಅವರ ಕನಸಾಗಿದೆ. ಪಾರ್ಟ್ 1 ಮತ್ತು ಪಾರ್ಟ್ 2 ಎರಡು ಭಾಗವಾಗಿ ಚಿತ್ರ ಬಿಡುಗಡೆಗೆ ಯೋಜನೆ ರೂಪಿಸಲಾಗಿದೆ. ಅಂದಾಜು 30 ಕೋಟಿ ರೂಪಾಯಿಯ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತದೆ.

ಹುಟ್ಟೂರಿನ ಕ್ಷೇತ್ರದಲ್ಲೇ ಸ್ಪರ್ಧಿಸಿ ನಿವೃತ್ತಿಯಾಗುವ ಬಯಕೆ

ಲೀಡರ್ ರಾಮಯ್ಯ ಚಿತ್ರದಲ್ಲಿ ಲವ್ ಸ್ಟೋರಿಯೂ ಇರಲಿದೆ. ಶೇ.70% ಸಿದ್ದರಾಮಯ್ಯ ಜೀವನ ಚರಿತ್ರೆಯನ್ನ ಒಳಗೊಂಡಿರುವ ಚಿತ್ರ ಇದಾಗಿರಲಿದೆ. ಬಾಲ್ಯದ ಜೀವನ ಮತ್ತು ರಾಜಕೀಯಕ್ಕೆ ಎಂಟ್ರಿಯಾಗುವ ಅಂಶ ಸಿನಿಮಾದಲ್ಲಿದೆ. ಬಾಕಿ 30% ಲವ್ ಸ್ಟೋರಿ ಕುರಿತಾದ ಅಂಶ ಸಿನಿಮಾದಲ್ಲಿ ಇರಲಿದೆ. ಇಂದು ಸಿನಿಮಾದ ಟೈಟಲ್ ಬಿಡುಗಡೆ ಮಾಡಿರುವ ಚಿತ್ರತಂಡ, ಕೆಲವೇ ದಿನಗಳಲ್ಲಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಲಿದೆ ಎಂದು ಮಾಹಿತಿ ನೀಡಿದೆ. ಚಿತ್ರದಲ್ಲಿ ಸಿದ್ದರಾಮಯ್ಯ ನಟಿಸಿಲ್ಲ, ಪಾತ್ರಧಾರಿಯಷ್ಟೇ ಇದ್ದಾರೆ ಎಂದು ನಿರ್ದೇಶಕ ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಲಾಟೆ, ದೊಂಬಿ, ಗಲಭೆ ಇಲ್ಲದೆ 518 ಆರೆಸ್ಸೆಸ್‌ ಪಥ ಸಂಚಲನ : ಸರ್ಕಾರ
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!