ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ನೇಮಕ: ಘೋಷಣೆಯಾಗುತ್ತಾ TP, ZP ಎಲೆಕ್ಷನ್ ಡೇಟ್?

By Suvarna NewsFirst Published Oct 4, 2021, 11:31 PM IST
Highlights

* ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ನೇಮಕ
* ಸಂಜೀವ್ ಕುಮಾರ್ ಅವರಿಂದ ತೆರವಾಗಿದ್ದ ಮುಖ್ಯ ಚುನಾವಣಾಧಿಕಾ ಸ್ಥಾನ
* ಹೊಸ ಚುನಾವಣಾಧಿಕಾರಿ ನೇಮಿಸಿ ಆದೇಶ ಹೊರಡಿಸಿದ  ರಾಜ್ಯ ಸರ್ಕಾರ

ಬೆಂಗಳೂರು, (ಅ.04): ರಾಜ್ಯದ ನೂತನ ಮುಖ್ಯ ಚುನಾವಣಾಧಿಕಾರಿಯಾಗಿ ಮನೋಜ್ ಕುಮಾರ್ ಮೀನಾ ಅವರು ನೇಮಕವಾಗಿದ್ದಾರೆ.

ಮುಖ್ಯ ಚುನಾವಣಾಧಿಕಾರಿಯಾಗಿದ್ದ ಸಂಜೀವ್ ಕುಮಾರ್ ಅವರ ಅಧಿಕಾರವಧಿ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡಿತ್ತು. ಅವರಿಂದ ತೆರವಾಗಿರುವ ಸ್ಥಾನಕ್ಕೆ ಮನೋಜ್ ಕುಮಾರ್ ಮೀನಾ ಅವರನ್ನು ನೇಮಿಸಲಾಗಿದೆ.

ಜಿಲ್ಲಾ, ತಾಲೂಕು ಪಂಚಾಯಿತಿ ಎಲೆಕ್ಷನ್ ಮುಂದೂಡಿಕೆಗೆ ಹೆಜ್ಜೆ ಇಟ್ಟ ಸರ್ಕಾರ

ರಾಜ್ಯ ಸರ್ಕಾರ ಇಂದು (ಅ.04) ಆದೇಶ ಹೊರಡಿಸಿದ್ದು, ರಾಜ್ಯ ವಸತಿ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ಮನೋಜ್ ಕುಮಾರ್ ಮೀನಾ ಅವರನ್ನು ಬಿಡುಗಡೆಗೊಳಿಸಿ, ರಾಜ್ಯದ ನೂತನ ಮುಖ್ಯ ಚುನಾವಣಾಧಿಕಾರಿಯಾಗಿ ನೇಮಿಸಿದೆ.

ಹೊಸ  ಮುಖ್ಯ ಚುನಾವಣಾಧಿಕಾರಿ ನೇಮಕವಾಗಿದ್ದರಿಂದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಶೀಘ್ರದಲ್ಲಿಯೇ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿವೆ.

2003 ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ರಾಜಸ್ಥಾನ ಮೂಲದ ಮನೋಜ್ ಕುಮಾರ್ ಮೀನಾ ಅವರು ಈ ಹಿಂದೆ ಅಂದ್ರೆ 2017-18ರಲ್ಲಿ ಆರೋಗ್ಯ ಇಲಾಖೆಯ ಆಯುಕ್ತರಾಗಿದ್ದರು.

ಅಲ್ಲದೇ ಯಾದಗಿರಿಯಲ್ಲಿ ಸಹಾಯಕ ಆಯುಕ್ತರಾಗಿ, ತುಮಕೂರಿನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಸಹಾಯಕ ಅಧಿಕಾರಿ, ಚಾಮರಾಜನಗರ ಉಪ ಆಯುಕ್ತರು ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

click me!