ಮಂಗಳೂರು ರೈಲು ಹಳಿ ತಪ್ಪಿಸಲು ಕಲ್ಲು ಇಟ್ಟ ಕಿಡಿಗೇಡಿಗಳು: ಸ್ಥಳೀಯರಿಗೆ ಪಾಕ್ ಉಗ್ರರ ಆತಂಕ!

By Sathish Kumar KH  |  First Published Oct 20, 2024, 1:03 PM IST

ಮಂಗಳೂರಿನ ತೊಕ್ಕೊಟ್ಟು ಬಳಿ ರೈಲು ಹಳಿಗಳ ಮೇಲೆ ಕಲ್ಲುಗಳನ್ನು ಇರಿಸಿ ರೈಲು ಅಪಘಾತ ಮಾಡಲು ಯತ್ನಿಸಲಾಗಿದೆ. ಸ್ಥಳೀಯರು ದೊಡ್ಡ ಶಬ್ದ ಮತ್ತು ಕಂಪನವನ್ನು ಅನುಭವಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಮಂಗಳೂರು (ಅ.20): ಪಾಕಿಸ್ತಾನಿ ಉಗ್ರರ ಕಣ್ಣು ಮಂಗಳೂರು ಕೇರಳ ರೈಲಿನ ಮೇಲೆ ಬಿತ್ತಾ? ಮಂಗಳೂರಿನ ತೊಕ್ಕೊಟ್ಟು ಬಳಿ ಹಾದು ಹೋಗಿರುವ ರೈಲು ಹಳಿಗಳಲ್ಲಿ ಇಬ್ಬರು ಆಗಂತುಕರು ರಾತ್ರಿ ವೇಳೆ ರೈಲು ಹಳಿಗಳ ಮೇಲೆ ಸಾಲಾಗಿ ಕಲ್ಲನ್ನು ಇಟ್ಟು ಬೀಳಿಸಲು ಯತ್ನ ಮಾಡಿದ್ದಾರೆ. ಇನ್ನು ಕೇರಳದಿಂದ ಮಂಗಳೂರಿಗೆ ಬರುವ ರೈಲು ಹಾಗೂ ಮಂಗಳೂರಿನಿಂದ ಕೇರಳಕ್ಕೆ ಹೋಗುವ ಎರಡೂ ರೈಲುಗಳು ಹಳಿಯ ಮೇಲೆ ಸಾಗುವಾಗ ದೊಡ್ಡ ಪ್ರಮಾಣದಲ್ಲಿ ಕಂಪನ ಹಾಗೂ ಶಬ್ದ ಉಂಟಾಗಿದ್ದು, ಸ್ಥಳೀಯರಿಗೆ ರೈಲು ಬಿದ್ದ ಅನುಭವವಾಗಿದೆ. ಇದರ ಬೆನ್ನಲ್ಲಿಯೇ ಸ್ಥಳ ಪರಿಶೀಲನೆ ಮಾಡಿದಾಗ ರೈಲು ಹಳಿಯ ಮೇಲೆ ಸಾಲಾಗಿ ಕಲ್ಲು ಇಟ್ಟಿದ್ದು, ರೈಲುಗಳು ಹೋದಾಗ ಅವುಗಳು ಪುಡಿ ಪುಡಿಯಾಗಿ ಬಿದ್ದಿರುವ ಘಟನೆ ನಡೆದಿದೆ.

ಮಂಗಳೂರು-ಕೇರಳ ನಡುವಿನ ರೈಲು ಹಳಿ ತಪ್ಪಿಸಲು ಕೆಲವು ಕಿಡಿಗೇಡಿಗಳು ಯತ್ನ ಮಾಡಿರುವುದು ಕಂಡುಬಂದಿದೆ. ಮಂಗಳೂರಿನ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಬಳಿ ನಡೆದ ಈ ವಿದ್ಯಮಾನದಿಂದ ಭಾರೀ ಆತಂಕ ಶುರುವಾಗಿದೆ. ರೈಲ್ವೇ ಹಳಿಗಳ ಮೇಲೆ ಕಲ್ಲುಗಳನ್ನಿಟ್ಟು ಪರಾರಿಯಾದ ಆಗಂತುಕರು. ರೈಲ್ವೇ ಹಳಿಯ ಎರಡೂ ಬದಿಗಳಲ್ಲಿ ಆಗಂತುಕರಿಬ್ಬರು ಜಲ್ಲಿಕಲ್ಲುಗಳನ್ನಿಟ್ಟು ಪರಾರಿ ಆಗಿದ್ದ ಬಗ್ಗೆ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಇನ್ನು ರೈಲು ಹಳಿಗಳ ಮೇಲೆ ಕಲ್ಲನ್ನಿಟ್ಟು ರೈಲು ಅಪಘಾತ ಮಾಡಲು ಸಂಚು ರೂಪಿಸಿದ್ದು, ಎರಡು ರೈಲುಗಳು ಚಲಿಸುವ ಸಂದರ್ಭದಲ್ಲಿ ಸ್ಥಳೀಯರಿಗೆ ರೈಲು ಆಕ್ಸಿಡೆಂಟ್ ಆಗಿ ಬಿದ್ದಂತೆ, ಭೂಕಂಪನವಾದಂತೆ ದೊಡ್ಡದಾಗಿ ಶಬ್ದ ಉಂಟಾಗಿದೆ. ಇದರಿಂದ ರೈಲ್ವೆ ಹಳಿಯ ಇಕ್ಕೆಲಗಳಲ್ಲಿ ಜೀವನ ಮಾಡುವಂತಹ ನಿವಾಸಿಗಳಿಗೆ ರೈಲು ಹಳಿ ತಪ್ಪಿ ಎಲ್ಲಿ ತಮ್ಮ ಮನೆಯ ಮೇಲೆ ಹರಿದು ಬೀಳುತ್ತದೆ ಎಂಬ ಆತಂಕದಲ್ಲಿ ಜೀವ ಮಾಡುತ್ತಿದ್ದಾರೆ.

Tap to resize

Latest Videos

ಇದನ್ನೂ ಓದಿ: ಒಂದೇ ವಾರದಲ್ಲಿ 21,971 ಮಂದಿ ಅಕ್ರಮ ವಿದೇಶಿ ವಲಸಿಗರನ್ನು ಬಂಧಿಸಿದ ಸೌದಿ ಪೊಲೀಸರು!

ಮಂಗಳೂರಿನ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಬಳಿ ತಡರಾತ್ರಿ ಸುಮಾರಿಗೆ ಈ ಘಟನೆ ನಡೆದಿದೆ. ಮಂಗಳೂರಿನಿಂದ ರೈಲು ಕೇರಳ ಕಡೆಗೆ ತೆರಳುತ್ತಿದ್ದ ವೇಳೆ ದೊಡ್ಡ ಸದ್ದು ಬಂದಿತ್ತು. ಬಳಿಕ ಇನ್ನೊಂದು ರೈಲು ಕೇರಳದಿಂದ ಮಂಗಳೂರಿಗೆ ಬರುವಾಗಲೂ ಮತ್ತೊಮ್ಮೆ ದೊಡ್ಡ ಸದ್ದು ಕೇಳಿತ್ತು. ಪರಿಣಾಮ ಸ್ಥಳೀಯ ಕೆಲವು ಮನೆಗಳಲ್ಲಿಯೂ ಭಾರೀ ಕಂಪನ ಉಂಟಾಗಿತ್ತು. ರೈಲು ಅಪಘಾತವೆಂದು ಭಾವಿಸಿ ಹಳಿಯತ್ತ ಸ್ಥಳೀಯರು ಬಂದು ನೋಡಿದಾಗ ಈ ವೇಳೆ ಹಳಿ ಮೇಲೆ ಜಲ್ಲಿಕಲ್ಲುಗಳು ತುಂಡಾಗಿ ಬಿದ್ದಿರುವುದು ಪತ್ತೆಯಾಗಿದೆ. ಕೂಡಲೇ ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಉಗ್ರ ಸಂಘಟನೆಯ ಪಾಕ್‌ ಭಯೋತ್ಪಾದಕ ಫ‌ರ್ಹಾತುಲ್ಲಾ ಘೋರಿ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದನು. ಉಗ್ರರ ಸ್ಲಿಪರ್‌ ಸೆಲ್‌ಗ‌ಳಿಗೆ ಕರೆ ನೀಡಿದ ಬೆನ್ನಲ್ಲೇ ದೇಶದ ಹಲವಡೆ ರೈಲು ಹಳಿ ತಪ್ಪಿಸುವ ಪ್ರಯತ್ನಗಳು ನಡೆದಿದ್ದವು. ದೇಶದ ಹಲವೆಡೆ ಎಎನ್‌ಐ ಮತ್ತು ಭಯೋತ್ಪಾದಕ ನಿಗ್ರಹ ದಳದ ಮೂಲಕ ತನಿಖೆ ನಡೆಯುತ್ತಿದೆ. ಹಲವು ತಿಂಗಳ ಹಿಂದೆ ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿತ್ತು. ರೈಲ್ವೇ ‌ಹಳಿ ಮೇಲೆ ಕಲ್ಲು, ಕಬ್ಬಿಣದ ಸರಳು, ಕಾಂಕ್ರೀಟ್‌ ತುಂಡುಗಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿತ್ತು. ಕಾಸರಗೋಡಿನ ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ, ತಳಂಗರೆದಲ್ಲಿ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿತ್ತು. ಇದೀಗ ಮೊದಲ ಬಾರಿಗೆ ಮಂಗಳೂರಿನಲ್ಲೂ ರೈಲು ಹಳಿಯಲ್ಲಿ ಕಲ್ಲುಗಳನ್ನಿಟ್ಟು ದುಷ್ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Reel ಮಾಡುತ್ತಾ Real ಆಗಿ ಸತ್ತ; ನೋಡ ನೋಡುತ್ತಿದ್ದಂತೆ ರುಂಡ-ಮುಂಡ ಬೇರೆ ಬೇರೆ ಆಯ್ತು!

ಮಂಗಳೂರಿನಲ್ಲೂ ರೈಲು ಹಳಿ ತಪ್ಪಿಸಲು ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ರೈಲ್ವೆ ಪೊಲೀಸರು, ಉಳ್ಳಾಲ ಪೊಲೀಸರು ರೈಲು ಹಳಿಯಲ್ಲಿ ‌ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇನ್ನು ಸ್ಥಳೀಯ ಮಹಿಳೆಯರು ರಾತ್ರಿ ರೈಲ್ವೇ ಹಳಿ ಮೇಲೆ ಇಬ್ಬರು ಟಾರ್ಚ್ ಹಾಕಿ ನಿಂತಿದ್ದವರು ಎಂಬುದಾಗಿ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳಲ್ಲೂ ಆಗುಂತಕ ಫೋಟೋ ವಿಡಿಯೋ ಸೆರೆ ಆಗಿದೆಯೇ ಎಂಬುದನ್ನು ಶೋಧಿಸುತ್ತಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯ ಆಗಿದೆ ಎಂಬ ಅನುಮಾನ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.

click me!