ಮುಡಾ ಕೇಸ್ ಕೇವಲ ಸಿವಿಲ್ ಪ್ರಕರಣ. ಅದಕ್ಕೆ ಇಡೀ ವಿಶ್ವ ನೋಡುವ ಹಾಗೆ ಮಾಡೋದಾ?. ಮುಡಾ ಕೇಸ್ ಸುದ್ದಿಯನ್ನು ಇಡೀ ದೇಶ ನೋಡುವ ರೀತಿ ಜನರಲ್ಲಿ ತಪ್ಪು ಕಲ್ಪನೆ ಬರುವ ರೀತಿಯಲ್ಲಿ ಬಿಂಬಿಸಲಾಗಿದೆ. ಅದಕ್ಕೆ ಉತ್ತರ ಕೊಡಲು ನಾವು ಬೀದಿಗೆ ಇಳಿಯುವ ಕೆಲಸ ಮಾಡಲಿದ್ದೇವೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್
ತುಮಕೂರು(ಅ.20): ಮುಡಾ ಪ್ರಕರಣದಲ್ಲಿ ಹಣದ ವ್ಯವಹಾರ ಆಗಿಲ್ಲ. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.
ನಗರದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಡಾ ಕೇಸ್ ಕೇವಲ ಸಿವಿಲ್ ಪ್ರಕರಣ. ಅದಕ್ಕೆ ಇಡೀ ವಿಶ್ವ ನೋಡುವ ಹಾಗೆ ಮಾಡೋದಾ?. ಮುಡಾ ಕೇಸ್ ಸುದ್ದಿಯನ್ನು ಇಡೀ ದೇಶ ನೋಡುವ ರೀತಿ ಜನರಲ್ಲಿ ತಪ್ಪು ಕಲ್ಪನೆ ಬರುವ ರೀತಿಯಲ್ಲಿ ಬಿಂಬಿಸಲಾಗಿದೆ. ಅದಕ್ಕೆ ಉತ್ತರ ಕೊಡಲು ನಾವು ಬೀದಿಗೆ ಇಳಿಯುವ ಕೆಲಸ ಮಾಡಲಿ ದ್ದೇವೆ ಎಂದು ತಿಳಿಸಿದರು.
undefined
ರಸ್ತೆ ಜಾಗ ಕಬಳಿಸಿ ಸೈಟ್ ನೋಂದಣಿ: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಆರೋಪ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ತಾವೊಂದು ಉದ್ದಿಮೆ ಸ್ಥಾಪಿಸುತ್ತೇವೆ, ಜಾಗ ಕೊಡಿ ಎಂದು ಮನವಿ ಮಾಡಿದ್ದರು. ಆ ರೀತಿ ಜಾಗ ಕೊಡಲು ಅವಕಾಶವಿದೆ ಎಂದರು.