ದೀಪಾವಳಿ: ಬೆಂಗ್ಳೂರಿಂದ ಕಾರವಾರಕ್ಕೆ ವಿಶೇಷ ಎಕ್ಸ್‌ಪ್ರೆಸ್‌ ರೈಲು

By Kannadaprabha News  |  First Published Oct 20, 2024, 9:39 AM IST

ಬೆಂಗಳೂರಿನ ಸರ್‌ಎಂ.ವಿಶ್ವೇಶ್ವರಯ್ಯ ಟರ್ಮಿನಲ್-ಕಾರವಾರ ಮತ್ತು ಯಶವಂತಪುರ- ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ನೈಋತ್ಯ ರೈಲ್ವೆ ವಲಯ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ಕಲ್ಪಿಸಿದೆ. 


ಬೆಂಗಳೂರು(ಅ.20):  ದೀಪಾವಳಿ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಬೆಂಗಳೂರಿನ ಸರ್‌ಎಂ.ವಿಶ್ವೇಶ್ವರಯ್ಯ ಟರ್ಮಿನಲ್-ಕಾರವಾರ ಮತ್ತು ಯಶವಂತಪುರ- ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ನೈಋತ್ಯ ರೈಲ್ವೆ ವಲಯ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆ ಕಲ್ಪಿಸಿದೆ. 

ಅಕ್ಟೋಬರ್ 30ರಂದು ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಮಧ್ಯಾಹ್ನ 1ಕ್ಕೆ ಹೊರಡಲಿರುವ ಈ ರೈಲು (06597) ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ, ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಾ ನಿಲ್ದಾಣಗಳ ಮೂಲಕ ಮರುದಿನ ಬೆಳಗಿನ ಜಾವ 4ಕ್ಕೆ ಕಾರವಾರ ನಿಲ್ದಾಣವನ್ನು ತಲುಪಲಿದೆ. 

Tap to resize

Latest Videos

ಇದು ಭಾರತದ ಅತ್ಯಂತ ನಿಧಾನದ ರೈಲು, 111 ನಿಲುಗಡೆ, 37 ಗಂಟೆ ಪ್ರಯಾಣ!

ಹಿಂದಿರುಗುವಾಗ ಪುನಃ ಇದೇ ರೈಲು (06598) ಅ.31ರಂದು ಮಧ್ಯಾಹ್ನ 12ಕ್ಕೆ ಕಾರವಾರದಿಂದ ಹೊರಟು ಮರುದಿನ ಬೆಳಗಿನ ಜಾವ 4ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

click me!