ಕಳೆದ ಮೂರು ದಿನಗಳ ಹಿಂದೆ ಹಿಂದೂ ಮಹಾಮಂಡಳಿಯವರು ಗಣೇಶ ವಿಸರ್ಜನೆ ವೇಳೆ ನಗರದ ಜಾಮೀಯ ಮಸೀದಿ ಮುಂಭಾಗ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹಿಂದೂಪರ ಸಂಘಟನೆಯ ಕಾರ್ಯಕರ್ತರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಗಂಗಾವತಿ (ಅ.3): ಕಳೆದ ಮೂರು ದಿನಗಳ ಹಿಂದೆ ಹಿಂದೂ ಮಹಾಮಂಡಳಿಯವರು ಗಣೇಶ ವಿಸರ್ಜನೆ ವೇಳೆ ನಗರದ ಜಾಮೀಯ ಮಸೀದಿ ಮುಂಭಾಗ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹಿಂದೂಪರ ಸಂಘಟನೆಯ ಕಾರ್ಯಕರ್ತರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿನ ಮಹಾತ್ಮಗಾಂಧಿ ವೃತ್ತದ ಬಳಿಯ ಜಾಮೀಯ ಮಸೀದಿ ಮುಂಭಾಗ ಗಣೇಶಮೂರ್ತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತರಲಾಗಿತ್ತು. ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಯ ಕೆಲ ಪ್ರಮುಖರು ಮಸೀದಿ ಮುಂಭಾಗವೇ ನಿಂತು ಮಂಗಳಾರತಿ ಮಾಡಿ, 'ಜೈ ಶ್ರೀರಾಮ್' ಎಂದೂ ಘೋಷಣೆ ಕೂಗಿದ್ದರು.
undefined
ಗಣೇಶೋತ್ಸವಕ್ಕೆ ಕೇಸರಿಮಯವಾಗಿದ್ದ ಶಿವಮೊಗ್ಗ; ಈದ್ ಮಿಲಾದ್ ಹಸಿರುಮಯವಾಯ್ತು ನಗರ!
ಇದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಘಟನೆ ಎಂದಿರುವ ಪೊಲೀಸರು, ಇದಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಯ ಐವರು ಮತ್ತು ಇತರರ ವಿರುದ್ಧ ಸ್ವಯಂ ಪ್ರೇರಿತಚವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ ಗಲಭೆ ಬಗ್ಗೆ ವರದಿ ಕೇಳಿದ ಸಿಎಂ
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಿ ಕೋಮುಗಲಭೆ ಎಬ್ಬಿರುವ ಘಟನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಕೇಳಿದ್ದಾರೆ.
ಘಟನೆ ಬಗ್ಗೆ ಸಮಗ್ರ ವರದಿ ನೀಡಬೇಕು. ಘಟನೆಗೆ ಮೂಲ ಕಾರಣ ಏನು? ಘಟನೆ ಹಿಂದೆ ಯಾರಿದ್ದಾರೆ. ಎಷ್ಟು ಜನರನ್ನು ಬಂಧಿಸಲಾಗಿದೆ ಎಂಬ ಬಗ್ಗೆ ಪೂರ್ಣ ವರದಿ ನೀಡಿ. ಕೃತ್ಯ ನಡೆಸಿರುವವರು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೇಸರಿ ಬಾವುಟ ತೆರವಿನಿಂದ ಗೊಂದಲ: ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ
ಇಂತಹ ಕೃತ್ಯ ಸಹಿಸಲ್ಲ:
ಈ ಮಧ್ಯೆ ಶಿವಮೊಗ್ಗ ಘಟನೆ ಕುರಿತು ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ದೇವರು, ಧರ್ಮದ ಕಾರ್ಯಕ್ರಮಗಳಿಗೆ ಧಕ್ಕೆ ತರುವುದು, ಕಲ್ಲುತೂರುವಂತಹ ಕೃತ್ಯ ನಡೆಸುವುದನ್ನು ಸಹಿಸುವುದಿಲ್ಲ. ಇಂತಹದ್ದನ್ನು ಹತ್ತಿಕ್ಕುತ್ತೇವೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.