Chikkamagaluru ಬೆಳವಾಡಿ ಗ್ರಾಮದಲ್ಲಿ ಸೂರಿಗಾಗಿ ಪರಿತಪಿಸುತ್ತಿರುವ ಕುಟುಂಬದ ಕರುಣಾಜನಕ ಕತೆ

By Suvarna News  |  First Published Mar 19, 2022, 11:56 PM IST

ಸೂರಿಗಾಗಿ ಅಲೆಯುತ್ತಿರುವ ಕುಟುಂಬ

ಅನಾರೋಗ್ಯಕ್ಕೆ ತುತ್ತಾಗಿರುವ ಗಂಡ, ಬುದ್ಧಿಮಾಂಧ್ಯ ಮಗ, ಹೆಂಡತಿ ಕೂಲಿಯಲ್ಲೇ ಜೀವನ

ಗುಡಿಸಲ್ಲಿ ವಾಸವಿರುವ ಕುಟುಂಬದ ಸಹಾಯಕ್ಕೆ ಬರುತ್ತಾ ಸರ್ಕಾರ


ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕ ಮಗಳೂರು (ಮಾ. 19):
ಅನೇಕ ದಶಕಗಳ ಕಾಲ ಸೂರಿಗಾಗಿ ಸರ್ಕಾರಿ ಕಛೇರಿಗಳ ಕಂಬ ಸುತ್ತಿ ಸುತ್ತಿ ಬೇಸತ್ತು ಬೇರೆ ದಾರಿ ಕಾಣದೆ ರಸ್ತೆಯ ಜಾಗದಲ್ಲೇ ಗುಡಿಸಿಲು ಕಟ್ಟಿಕೊಂಡು ಬದುಕಿನ ಬಂಡಿ ಸಾಗಿಸುತ್ತಿರುವ ಕೂಲಿ ಕಾರ್ಮಿಕರ (Daily Wage Workers) ಕುಟುಂಬದ ಕರುಣಾಜನಕ ಕತೆ-ವ್ಯಥೆ ಕರುಳು ಹಿಂಡುವಂತಿದೆ ! ಹೌದು ಇಂತಹ ಪರಿಸ್ಥಿತಿ ಎದುರಿಸುತ್ತಿರುವ ಬಡ ಕುಟುಂಬ ಇರುವುದು ಚಿಕ್ಕಮಗಳೂರು ( Chikkamagaluru ) ಜಿಲ್ಲಾ ಕೇಂದ್ರದಿಂದ 30 ಕಿಮೀ ದೂರದಲ್ಲಿರುವ  ಬೆಳವಾಡಿ ಗ್ರಾಮದಲ್ಲಿ. 

ಕುಟುಂಬದ ಯಜಮಾನ ಅಣ್ಣಯ್ಯ 14 ವರ್ಷಗಳಿಂದ ಅನ್ಯಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಅವರ ಪತ್ನಿ ಹೆಸರು ಕಾಂತಮಣಿ ಕೃಷಿ ಕೂಲಿ ಕಾರ್ಮಿಕರು. ಇವರಿಗೆ ಇಬ್ಬರು ಮಕ್ಕಳು , ಪುತ್ರ  ಬುದ್ಧಿ ಮಾಂಧ್ಯನಾಗಿದ್ದು ಈ ಕುಟುಂಬದ ಸಂಪೂರ್ಣ ನಿರ್ವಹಣೆ ನೊಗ ಕಾಂತಮಣಿ ಹೆಗಲಿನಲ್ಲಿದೆ.ಅಣ್ಣಯ್ಯ ಬೆಳವಾಡಿಯಲ್ಲೇ ಹುಟ್ಟಿ ಬೆಳೆದವರು. ಆದರೆ, ಸೂರಿನಿಂದ ವಂಚಿತರು. ಕಳೆದ ಎರಡು ದಶಕಗಳಿಂದ ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲೆಯ ಕೇಂದ್ರ ಸ್ಥಾನದಲ್ಲಿರುವ ಬಹುತೇಕ ಕಛೇರಿಗಳಿಗೆ ಅಲೆದಾಟ ನಡೆಸುತ್ತಿದ್ದಾರೆ. ಸೂರಿಗಾಗಿ ನೂರಾರು ಅರ್ಜಿಗಳನ್ನು ಕೊಟ್ಟು ಬೇಸತ್ತು ಹೋಗಿದ್ದಾರೆ. ಆದರೆ, ಅವರ ಅರ್ಜಿಗಳಿಗೆ ಯಾವುದೇ ಸ್ಪಂದನೆ ದೊರೆತಿಲ್ಲ.  

Tap to resize

Latest Videos

ಸೂರಿಗೆ ಕಂಟಕವಾದ ದೇವಾಲಯ: ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ವೀರನಾರಾಯಣಸ್ವಾಮಿ ದೇವಾಲಯ ದೇಶವ್ಯಾಪಿ ಪ್ರಸಿದ್ಧಿ ಪಡೆದಿದೆ. ವೀರನಾರಾಯಣಸ್ವಾಮಿ, ವೇಣುಗೋಪಾಲಸ್ವಾಮಿ, ಯೋಗನರಸಿಂಹಸ್ವಾಮಿ ದೇವರ ವಿಗ್ರಹಗಳಿರುವುದರಿಂದ ತ್ರಿಕೋಟಚಲ ದೇವಾಲಯ ಎಂದು ಪ್ರಸಿದ್ಧಿ ಪಡೆದಿದೆ. ಈ ದೇವಾಲಯ ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಈ ದೇವಾಲಯ ಆಕರ್ಷಕ ಮತ್ತು ಸುಂದರವಾಗಿದ್ದು, ಕಣ್ಮನ ಸೆಳೆಯುತ್ತಿದೆ. ಈ ದೇವಾಲಯವೇ ಅಣ್ಣಯ್ಯ ಅವರ ಸೂರಿಗೆ ಕಂಟಕವಾಗಿದೆ.

ದೇವಾಲಯದ ನೂರು ಮೀಟರ್ ವ್ಯಾಪ್ತಿಯೊಳಗಿರುವ ಯಾವುದೇ ಮನೆಗಳ ಮರು ನಿರ್ಮಾಣ ಅಥವಾ ಹೊಸದಾಗಿ ನಿರ್ಮಾಣ ಮಾಡಲು ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಕಾನೂನಿನಲ್ಲಿ ಅವಕಾಶ ಇಲ್ಲ. ಅದರ ಪರಿಣಾಮ ಹಳೆಯದಾಗಿದ್ದ ಅಣ್ಣಯ್ಯ ಅವರ ಮನೆ ದೇವಾಲಯ ಸಮೀಪವೇ ಇತ್ತು. ದುರಸ್ತಿಗೆ ಅವಕಾಶ ಇಲ್ಲದ ಕಾರಣದಿಂದ ಮಳೆ ಗಾಳಿಗೆ ಮನೆ ನೆಲಕಚ್ಚಿತು. ಅಣ್ಣಯ್ಯ ಅವರ ಕುಟುಂಬ ಬೀದಿಗೆ ಬಿದ್ದಿತು.ಅಣ್ಣಯ್ಯ ಅವರು ಆರೋಗ್ಯವಂತರಾಗಿದ್ದ ಸಂದರ್ಭದಲ್ಲಿ ಎಲ್ಲರಂತೆ ದುಡಿದು ಚನ್ನಾಗಿಯೇ ಬದುಕುತ್ತಿದ್ದರು. 

ಚಿಕ್ಕಮಗಳೂರು ಕಾಂಗ್ರೆಸ್ ಸದಸ್ಯತ್ವದಲ್ಲಿ ಕಳಪೆ ಸಾಧನೆ, ತಾಯಿ, ಮಗಳಿಗೆ ಡಿಕೆಶಿ ಕ್ಲಾಸ್
ಮನೆ ನೆಲಸಮಗೊಂಡ ಆನಂತರದಲ್ಲಿ ಸೂರಿಲ್ಲದೆ ಈಗ ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿರುವ ರಸ್ತೆಗಾಗಿ ಮೀಸಲಿರುವ ಜಾಗದಲ್ಲಿ ತೆಂಗಿನ ಸೋಗೆ ಗುಡಿಸಲು ಕಟ್ಟಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಅಣ್ಣಯ್ಯ ಅನಾರೋಗ್ಯಕ್ಕೆ ಒಳಗಾಗಿ ದುಡಿಯಲಾಗದ ಕಾರಣದಿಂದಾಗಿ ಪತ್ನಿಯ ದುಡಿಮೆಯನ್ನೇ ಅವಲಂಬಿರತಾಗಿದ್ದಾರೆ. ಬುದ್ಧಿ ಮಾಂಧ್ಯ ಮಗ ಮತ್ತು ಪತಿಯ ಆರೈಕೆಯ ಹೊಣೆಯೂ ಕಾಂತಮಣಿ ಅವರದ್ದೇ ಆಗಿದೆ.ಕೂತಲ್ಲಿಯೇ ಕೂತಿರುವ, ಮಲಗಿದಲ್ಲಿಯೇ ಮಲಗಿರುವ ಅಣ್ಣಯ್ಯ ಅವರು ಹಿಂದೆ ಮುಂದೆ ಚಲಿಸುವಾಗ ತುಂಬಿದ ಚೀಲ ಉರುಳುವಂತೆ ಉರುಳಿಕೊಂಡು ಹೋಗುತ್ತಾರೆ. ಈ ದೃಶ್ಯವನ್ನು ಕಂಡವರ ಕರುಳು ಕಿತ್ತು ಬರುವಂತಾಗುತ್ತದೆ. ಗಂಡನಿಗೆ ಬರುವ ವಿಕಲಚೇತನ ವೇತನ ಔಷಧ ಮಾತ್ರೆಗೂ ಸಾಕಾಗದೆ ತಾನು ದುಡಿದ ಹಣವನ್ನು ಖರ್ಚು ಮಾಡುತ್ತಿದ್ದಾರೆ ಕಾಂತಮಣಿ ಅವರು. 

ಯಾರೂ ನೆರವಿಗೆ ಬಂದಿಲ್ಲ: ಇಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದಲ್ಲಿ ಈ ಕುಟುಂಬ ಅಲ್ಲಿಂದಲೂ ಎತ್ತಂಗಡಿಯಾಗಬೇಕು. ಮಳೆ ಬಂದರೆ ಗುಡಿಸಲು ಸೋರುತ್ತದೆ. ಪ್ರಾಚ್ಯವಸ್ತು ಇಲಾಖೆ, ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳು ನಿರ್ಗತಿಕರಾಗಿರುವ ಈ ಕುಟುಂಬದ ನೆರವಿಗೆ ದಾವಿಸಿಲ್ಲ. ಬದುಕಿನ ಬಂಡಿಯ ನೊಗಕ್ಕೆ ಹೆಗಲು ಕೊಟ್ಟಿರುವ ಕಾಂತಮಣಿ ಅವರು ತಮ್ಮ ಪತಿಯ ಸ್ಥಿತಿಯನ್ನು ಕಂಡು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.

ಹೆಬ್ಬಾಳೆ ಮುಳುಗಡೆ ಸೇತುವೆಗೆ ಮುಕ್ತಿ ಇಲ್ಲ, ಬೇಸಿಗೆ ಬಂದ್ರೂ ರಿಪೇರಿ ಭಾಗ್ಯವಿಲ್ಲ
ವರ್ಷಕ್ಕೆ ಅಷ್ಟು ಮನೆ, ಇಷ್ಟು ಮನೆ ಕೊಡುತ್ತೇವೆ ಎಂದು ಭರವಸೆಗಳ ಮೂಲಕವೇ ಭರಪೂರ ಪ್ರಚಾರ ಗಿಟ್ಟಿಸುವ ಸರ್ಕಾರಗಳು ಒಮ್ಮೆ ಈ ಕುಟುಂಬದ ಸ್ಥಿತಿಯನ್ನು ಕಣ್ಣಾರೆ ಕಾಣಲೇಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿಯವರನ್ನು ಕೇಳಿದರೆ ನಿವೇಶನ ಕೊಡಲು ಜಾಗವಿಲ್ಲ ಎಂಬ ಸಿದ್ದ ಉತ್ತರಿವಿದೆ.ಒಟ್ಟಾರೆ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಇತ್ತೀಚೆಗೆ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪೂರ್ವಾನುಮತಿ ಪಡೆದು ಬಿದ್ದೋಗಲಿರುವ ಮನೆಗಳನ್ನು ಮಾರ್ಗಸೂಚಿಗೆ ಅನುಗುಣವಾಗಿ ಮರು ನಿರ್ಮಾಣ ಮಾಡಿಕೊಳ್ಳಬಹುದು. ಆದರೆ, ಹೆಂಚಿನ ಮನೆಯೇ ಆಗಿರಬೇಕು. ಆರ್ ಸಿಸಿ ಮನೆ ಕಟ್ಟುವಂತಿಲ್ಲ.ಈ ಬಗ್ಗೆ ಜನಪ್ರತನಿಧಿಗಳು, ಅಧಿಕಾರಿ ವರ್ಗ ಇತ್ತ  ಆಗಮನ ಹರಿಸಿ ಈ ಬಡ ಕುಟುಂಬದ ಸಹಾಯಕ್ಕೆ ಬರಬೇಕಾಗಿದೆ.
 

click me!