ಡ್ರಗ್ಸ್ ವಿಚಾರದಲ್ಲಿ ಕನ್ನಡ ಚಿತ್ರರಂಗ ಟಾರ್ಗೆಟ್ ಮಾಡ್ಬೇಡಿ : ಸುಮಲತಾ

Kannadaprabha News   | Asianet News
Published : Sep 08, 2020, 12:59 PM ISTUpdated : Sep 08, 2020, 01:53 PM IST
ಡ್ರಗ್ಸ್ ವಿಚಾರದಲ್ಲಿ ಕನ್ನಡ ಚಿತ್ರರಂಗ ಟಾರ್ಗೆಟ್ ಮಾಡ್ಬೇಡಿ : ಸುಮಲತಾ

ಸಾರಾಂಶ

ಡ್ರಗ್ ಮಾಫಿಯಾ ಕರಾಳತೆ ದಿನದಿನಕ್ಕೂ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ಇದೀಗ ಡ್ರಗ್ ಮಾಫಿಯಾ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಸೆ.08): ಡ್ರಗ್ಸ್  ವಿಚಾರದಲ್ಲಿ ಕನ್ನಡ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರಿಶ್ ಹೇಳಿದ್ದಾರೆ. 

ಚಿತ್ರರಂಗದಲ್ಲಿ ಡ್ರಗ್ಸ್ ಇಲ್ಲವೇ ಇಲ್ಲ ಎಂದು ಹೇಳಿಲ್ಲ ಆದರೆ ನಮ್ಮ  ಅನುಭವದಲ್ಲಿ ಇಲ್ಲ ಎಂದು ಬೆಂಗಳೂರಿನಲ್ಲಿ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ. 

ಮಾಹಿತಿ ಇರದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಬಾರದು. ಆರೋಪ ಸಾಬೀತಾಗುವ ಮುನ್ನವೇ ಜಡ್ಜ್‌ಮೆಂಟ್ ಕೊಡಬಾರದು. ಡ್ರಗ್ಸ್ ಎನ್ನುವುದು ಚಲನಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಕಡೆಯಲ್ಲೂ ಇದೆ. ಆದರೆ ಯಾವ ಕಡೆ ಎಷ್ಟು ಪರ್ಸೆಮಟ್ ಇದೆ ಎನ್ನುವುದನ್ನು ನೋಡಬೇಕು ಎಮದು ಸುಮಲತಾ ಹೇಳಿದರು. 

ರಾಗಿಣಿ ಸೇವಿಸುತ್ತಿದ್ದ 1 ಡ್ರಗ್ಸ್‌ ಮಾತ್ರೆಗೆ 3000..! ಹೊರಬಿತ್ತು ಮತ್ತಷ್ಟು ಸೀಕ್ರೇಟ್ಸ್

ಕನ್ನಡ ಚಿತ್ರರಂಗ ಮಾತ್ರವಲ್ಲ. ಎಲ್ಲಾ ಚಿತ್ರರಂಗದಲ್ಲಿಯೂ ಕೂಡ ಜನರೇಶನ್ ಚೇಂಜ್ ಆಗಿದೆ. ಹಿರಿಯರ ಜನರೇಶನ್‌ಗೆ  ಕಪಡೊತ್ತಿದ್ದ  ಗೌರವ ಈಗ ಕಡಿಮೆಯಾಗಿದೆ ಎಂದರು. 

ಇನ್ನು ಡ್ರಗ್ ಎನ್ನುವ ವ್ಯಸನ ಅಭ್ಯಾಸವಾದವರಿಗೆ ಬಿಡುವುದು ಕಷ್ಟ. ಡ್ರಗ್ಸ್ ಪೆಡ್ಲರ್‌ಗಳ ಜೊತೆ ದಂಧೆ ನಡೆಯುತ್ತಿದೆ. ನಾಯಕರಿಯರ ಹೆಸರು ಮಾತ್ರವೇ ಕೇಳಿಬರುತ್ತಿದೆ.  ವಿನಾಕಾರಣ ಮಾಹಿತಿ ಇಲ್ಲದೇ ನಾನು ಮಾತನಾಡುವುದಿಲ್ಲ. ಡ್ರಗ್ಸ್ ದಂಧೆಯಲ್ಲಿ ಇತರೆ ನಟರು ಇದ್ದಾರಾ ಎನ್ನುವುದನ್ನು ತನಿಖಾಧಿಕಾರಿಗಳೇ ಮಾಹಿತಿ ಕೊಡಬೇಕು ಎಂದು ಸುಮಲತಾ ಹೇಳಿದರು. 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!