
ಮಂಡ್ಯ (ಸೆ.26): ಇದೊಂದು ಐತಿಹಾಸಿಕ ಕಾರ್ಯಕ್ರಮ. ಕಾವೇರಿ ಆರತಿಯನ್ನು ಧಾರ್ಮಿಕ ಕಾರ್ಯಕ್ರಮ ಎಂದು ರೂಪಿಸಲಿಲ್ಲ. ಮನುಷ್ಯನಿಗೆ ಸೂರ್ಯ, ಚಂದ್ರ, ಗಾಳಿ, ನೀರು ಇಲ್ಲದೇ ಬದುಕಿಲ್ಲ ಎಂದು ಕಾವೇರಿ ಆರತಿಯ ವೇದಿಕೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ನಮ್ಮ ರಾಜ್ಯದಲ್ಲಿ ಜೀವನದಿ ಕಾವೇರಿ. ಹಳೆ ಮೈಸೂರು ಭಾಗದಲ್ಲಿ ಮೂರು ಕೋಟಿ ಜನರಿಗೆ ಕಾವೇರಿ ತಾಯಿ ನೀರು ಕೊಡ್ತಾ ಇದ್ದಾಳೆ. ತಮಿಳುನಾಡು, ಪುದುಚೇರಿಗೂ ನೀರು ಕೊಡ್ತಾ ಇದ್ದಾಳೆ. ಇಂತಹ ತಾಯಿಗೆ ನಮನ ಸಲ್ಲಿಸುವ ಕೆಲಸ ಆಗುತ್ತೆ. ನಾವು ಶಾಶ್ವತವಾಗಿ ಇರಲ್ಲ. ಒಡೆಯರ್, ವಿಶ್ವೇಶ್ವರಯ್ಯ ಅವರು ಮಾಡಿರುವ ಕೆಲಸದಿಂದ ನೆನೆಯುತ್ತೇವೆ.
ಕಾವೇರಿ ಕನ್ನಡಿಗರ ಭಾಗ್ಯ ದೇವತೆ. ನಮ್ಮ ರೈತರ ಜೀವದಾನ ಕಾವೇರಿ. 10 ಸಾವಿರ ಮಂದಿ ಕೂತು ಆರತಿ ನೋಡಬೇಕೆಂದು ಕಾರ್ಯಕ್ರಮ ರೂಪಿಸಿದ್ದೋ. ಕೆಲವು ಅಡೆತಡೆಗಳು ಬಂದು ಅದು ಸಾಧ್ಯ ಆಗಿಲ್ಲ. ಇಂದು ಸಾಂಕೇತಿಕವಾಗಿ ಕಾವೇರಿ ಆರತಿ ಮಾಡ್ತಾ ಇದೀವಿ. ಆಗಮ ಶಾಸ್ತ್ರದ ಮೂಲಕ ಇಂದು ಕಾವೇರಿ ಆರತಿ ನಡೆಯುತ್ತಿದೆ. ಗಂಗಾರತಿಯನ್ನು ಚಲುವರಾಯಸ್ವಾಮಿ ತಂಡ ವೀಕ್ಷಣೆ ಮಾಡಿ ಬಂದಿದೆ. ಅವರು ಸಹ ನಮಗೆ ವರದಿ ಕೊಟ್ಟಿದ್ದಾರೆ. ಆ ಹಿನ್ನೆಲೆ ನಾವು ಕಾವೇರಿ ಆರತಿ ರೂಪಿಸಿದ್ದೇವೆ. ಯಾರೇ ತೊಂದರೆ ಮಾಡಬಹುದು, ಪ್ರಾರ್ಥನೆ ಯಾರ ಮನೆ ಸ್ವತ್ತಲ್ಲ.
ಮನಸ್ಸಿನಲ್ಲೂ ಪ್ರಾರ್ಥನೆ ಮಾಡಬಹುದು. ಆರತಿ ಮೂಲಕವೂ ಪ್ರಾರ್ಥನೆ ಮಾಡಬಹದು. ಆಗಸ್ಟ್‌ನಲ್ಲಿ ಕೆಆರ್‌ಎಸ್ ತುಂಬಿ ದಾಖಲೆ ಬರೆದಿದೆ. ನಾವು ಬಾಗಿನ ಸಹ ಅರ್ಪಿಸಿದ್ದೇವೆ. ಇಂದಿನಿಂದ ಐದು ದಿನಗಳ ಕಾಲ ಕಾವೇರಿ ಆರತಿ ನಡೆಯಲಿದೆ. ಮುಂದಿನ ದಿನಗಳಲ್ಲಿ ನಾವು ಸಿದ್ಧತೆ ಮಾಡಿರುವ ರೀತಿ ಕಾವೇರಿ ಆರತಿ ಮಾಡ್ತೀವಿ. ತಾಯಿ ಚಾಮುಂಡೇಶ್ವರಿ ನಮಗೆ ಶಕ್ತಿ ಕೊಡುತ್ತಾಳೆ. ಕನ್ನಂಬಾಡಿ ಕಟ್ಟೆ ನಮ್ಮೇಲ್ಲರ ಅನ್ನದ ತಟ್ಟೆ. ಮೇಕೆದಾಟಿಗಾಗಿ ನಾವು ಹೆಜ್ಜೆ ಹಾಕಿದ್ದೇವೆ. ಮೇಕೆದಾಟು ಕಟ್ಟಲು ಕಾವೇರಿ ತಾಯಿ ಆಶೀರ್ವದಿಸಲಿ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಐತಿಹಾಸಿಕ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಉತ್ತರದಲ್ಲಿ ಗಂಗೆ ದಕ್ಷಿಣದಲ್ಲಿ ಕಾವೇರಿ. ಗಂಗಾರತಿ ಮಾದರಿ ಕಾವೇರಿ ಆರತಿ ಆರಂಭವಾಗಿದೆ. ಪರೋಪಕಾರಿಕ್ಕಾಗಿ ಹರಿಯುವುದು ನದಿ. ನಾಲ್ವಡಿ, ವಿಶ್ವೇಶ್ವರಯ್ಯ ಪರಿಶ್ರಮದಿಂದ ಅಣೆಕಟ್ಟು ನಿರ್ಮಾಣವಾಯಿತು. ಬರದನಾಡಾಗಿದ್ದ ಮಂಡ್ಯ ಸಮೃದ್ಧ ನಾಡಾಯಿತು. ಕೋಟ್ಯಾಂತರ ಜನರಿಗೆ ಜೀವಜಲವಾಯಿತು. ಕಾವೇರಿ ಉಗಮಸ್ಥಾನಕ್ಕೆ ತಮಿಳುನಾಡಿನ ಜನರು ಕೃತಜ್ಞತೆ ಸಲ್ಲಿಸುತ್ತಾರೆ. ನಾವು ಕೃತಜ್ಞತೆ ಅರ್ಪಿಸಬೇಕೆಂಬ ಭಾವನೆಯಿಂದ ಡಿಕೆಶಿ ಆರತಿ ಕಾರ್ಯಕ್ರಮ ರೂಪಿಸಿದ್ದಾರೆ. ನಾಡಿನ ಜನರು ಸುಭೀಕ್ಷ, ಸಂತೋಷದಿಂದ ಇರಲಿ ಎಂದು ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ