ಅಷ್ಟಕ್ಕೂ 25ಕ್ಕೂ ಹೆಚ್ಚು ಬಲಿ ಪಡೆದ 'ರಾಜಕುಮಾರ' ಬಸ್ ಯಾರದ್ದು?

By Web DeskFirst Published Nov 24, 2018, 4:46 PM IST
Highlights

ನಾಲೆಗೆ ಬಿದ್ದಿರುವ ಬಸ್‌ ಯಾವುದು? ಈ ಬಸ್‌ನ ಮಾಲೀಕರು ಯಾರು? ಈ ಬಸ್‌ ಎಫ್‌ಸಿ (ಫಿಟ್‌ನೆಸ್‌ ಸರ್ಟಿಫಿಕೇಟ್‌) ಹೊಂದಿದ್ಯಾ? ಅನ್ನೋ ಪ್ರಶ್ನೆಗಳು ಈಗ ಎದ್ದಿವೆ. ಈ ಎಲ್ಲಾ ಫುಲ್ ಡಿಟೇಲ್ಸ್ ಇಲ್ಲಿದೆ. 

ಮಂಡ್ಯ, [ನ.24]: ಇಂದು ರಾಜ್ಯಕ್ಕೆ ಕರಾಳ ಶನಿವಾರ ಎನ್ನಬಹುದು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಣಗಾನಮರಡಿ ಗ್ರಾಮದ ವಿ.ಸಿ.ನಾಲೆಗೆ ಬಸ್‌ವೊಂದು ಉರುಳಿ 25ಕ್ಕೂ ಹೆಚ್ಚು ಜನರು ಜಲ ಸಮಾಧಿಯಾಗಿದ್ದಾರೆ. 

ಮಂಡ್ಯ ಬಸ್​ ದುರಂತ: ಸಾವು ಗೆದ್ದು ಬಂದ ಬಾಲಕ ಬಿಚ್ಚಿಟ್ಟ ಭಯಾನಕ ಸತ್ಯ

 ಇನ್ನು ಕೆಲವರ ಮೃತ ದೇಹಗಳಿಗೆ ಕಾರ್ಯಚರಣೆ ಮುಂದಿರೆಸಿದ್ದಾರೆ. ದುರದೃಷ್ಟ ಅಂದ್ರೆ ಶಾಲಾ ಮಕ್ಕಳು ಕೂಡ ವಿಧಿಯ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಜೀವಂತವಾಗಿ ಜಲ ಸಮಾಧಿಯಾಗಿರೋ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ. 

ಮಂಡ್ಯ ಬಸ್ ದುರಂತ: ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಘೋಷಿಸಿದ ಕುಮಾರಸ್ವಾಮಿ

ಅಷ್ಟಕ್ಕೂ ಈ ನಾಲೆಗೆ ಬಿದ್ದಿರುವ ಬಸ್‌ ಯಾವುದು? ಈ ಬಸ್‌ನ ಮಾಲೀಕರು ಯಾರು? ಈ ಬಸ್‌ ಎಫ್‌ಸಿ (ಫಿಟ್‌ನೆಸ್‌ ಸರ್ಟಿಫಿಕೇಟ್‌) ಹೊಂದಿದ್ಯಾ? ಅನ್ನೋ ಪ್ರಶ್ನೆಗಳು ಈಗ ಎದ್ದಿವೆ. ಈ ಎಲ್ಲಾ ಫುಲ್ ಡಿಟೇಲ್ಸ್ ಇಲ್ಲಿದೆ. 

ನಾಲೆಗೆ ಉರುಳಿದ ಬಸ್‌ನ ನಂಬರ್‌ KA19-A5676. ಈ ಬಸ್‌ನ ಮಾಲೀಕರ ಹೆಸರು ಶ್ರೀನಿವಾಸ್. 2001ರಲ್ಲಿ  ರಿಜಿಸ್ಟ್ರೇಷನ್ ಆಗಿದ್ದು, ಈ ವಾಹನವನ್ನ ಮಂಗಳೂರಿನವರು ಖರೀದಸಿದ್ದರು. ಇದಾದ ಬಳಿಕ ಮಂಡ್ಯದ ಶ್ರೀನಿವಾಸ್ ಎನ್ನುವರು ಖರೀದಿಸಿದ್ದರು.

 ಈ ಬಸ್‌ 17 ವರ್ಷಗಳ ಹಿಂದೆ ಖರೀದಿಸಲಾಗಿದೆ. ಟಾಟಾ ಕಂಪನಿಯ ಬಸ್‌ ಇದಾಗಿದ್ದು, ಫಿಟ್‌ನೆಟ್‌ ಸರ್ಟಿಫಿಕೇಟ್‌ 15 ಮೇ 2019ರವರೆಗೂ ಇದೆ.  ಜೊತೆಗೆ ಇನ್‌ಶ್ಯೂರೆನ್ಸ್‌ ಹಾಗೂ ಟ್ಯಾಕ್ಸ್‌ ವ್ಯಾಲಿಡಿಟಿಯೂ ಕೂಡ 15 ಮೇ 2019ರವರೆಗೂ ಇದೆ. 

click me!