ತಮಿಳುನಾಡಿನ ಬಳಿಕ ರಾಜಧಾನಿಗೂ ಮಾಂಡೌಸ್ ಎಫೆಕ್ಟ್ ತಟ್ಟಿದ್ದು, ಇದೀಗ ಸಿಲಿಕಾನ್ ಸಿಟಿ ಬೆಂಗಳೂರು ಕೂಲ್ ಕೂಲ್ ಆಗಿದೆ. ಈಗಾಗಲೇ 2 ದಿನದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ತುಂತುರು ಮಳೆಯು ಇನ್ನು 3 ದಿನಗಳ ಕಾಲ ಬೆಂಗಳೂರಿನಲ್ಲಿ ಮುಂದುವೆರಯುವ ಮುನ್ಸೂಚನೆಯಿದೆ.
ಬೆಂಗಳೂರು (ಡಿ.11): ತಮಿಳುನಾಡಿನ ಬಳಿಕ ರಾಜಧಾನಿಗೂ ಮಾಂಡೌಸ್ ಎಫೆಕ್ಟ್ ತಟ್ಟಿದ್ದು, ಇದೀಗ ಸಿಲಿಕಾನ್ ಸಿಟಿ ಬೆಂಗಳೂರು ಕೂಲ್ ಕೂಲ್ ಆಗಿದೆ. ಈಗಾಗಲೇ 2 ದಿನದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ತುಂತುರು ಮಳೆಯು ಇನ್ನು 3 ದಿನಗಳ ಕಾಲ ಬೆಂಗಳೂರಿನಲ್ಲಿ ಮುಂದುವೆರಯುವ ಮುನ್ಸೂಚನೆಯಿದೆ. ಚಂಡಮಾರುತದ ಭೀತಿ ನಡುವೆ ರಾಜ್ಯದಲ್ಲಿ ಮತ್ತೆ ವರುಣಾ ಅಬ್ಬರದ ಮುನ್ಸೂಚನೆಯಿದ್ದು, ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಮಳೆಯ ಬಗ್ಗೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆಯು ಗಾಳಿ ವೇಗವು ಹೆಚ್ಚಾಗುವ ಜೊತೆಗೆ ಕನಿಷ್ಠ ತಾಪಮಾನ ಕೂಡ ಇಳಿಕೆಯಾಗುವ ಎಚ್ಚರಿಕೆಯನ್ನು ನೀಡಿದೆ. ಈಗಾಗಲೇ ಮೋಡ ಕವಿದ ವಾತಾವರಣ ಇರಲಿದ್ದು, ಇನ್ನು ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಒಳನಾಡಿಗೆ ಇಂದು, ನಾಳೆ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆಯಿದ್ದು, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ತಮಿಳುನಾಡನಲ್ಲಿ ಮ್ಯಾಂಡಸ್ ಅಬ್ಬರ: 400 ಮರಗಳು ಧರೆಗೆ, 4 ಸಾವು
ಉಳಿದಂತೆ ಕರಾವಳಿ, ಉತ್ತರ ಒಳನಾಡಿಗೆ ಸಾಧಾರಣ ಮಳೆ ಮುನ್ಸೂಚನೆಯಿದೆ. ಇನ್ನು ಬೆಂಗಳೂರು ನಗರಕ್ಕೆ ಯಲ್ಲೋ ಅಲರ್ಟ್ ನೀಡಿದ್ದು, ಮುಂದಿನ 24 ಗಂಟೆಗಳ ಕಾಲ ಕವಿದ ವಾತಾವರಣವ ಇರಲಿದೆ. ಗಾಳಿಯ ಪ್ರಮಾಣ 65 ರಿಂದ 75 ಕೀಮೀ ವೇಗದಲ್ಲಿ ಇರಲಿದ್ದು, ಡಿಸೆಂಬರ್ 14 ರವರೆಗೂ ಮಳೆ ಇರಲಿದೆ. ಸದ್ಯ ನಗರದಲ್ಲಿ ಕನಿಷ್ಟ ಉಷ್ಣಾಂಶ 18ಡಿಗ್ರಿ ಸೆಲ್ಸಿಯಸ್ ಇದ್ದು ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇದೆ . ಹೀಗಾಗಿ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಳೆಯಿಂದ ರೈತರಲ್ಲಿ ಆತಂಕ: ತಮಿಳುನಾಡಿಗೆ ಅಪ್ಪಳಿಸಿರುವ ಮಾಂಡೌಸ್ ಚಂಡಮಾರುತ ಪರಿಣಾಮವಾಗಿ ಡಂಬಳ ಹೋಬಳಿಯ ಗ್ರಾಮಗಳಲ್ಲಿ ಬೆಳಗ್ಗೆಯಿಂದ ದಟ್ಟಮೋಡ ಕವಿದ ವಾತಾವರಣದ ನಡುವೆ ಜಡಿ ಮಳೆ ಆಗುವ ಮೂಲಕ ರೈತರಲ್ಲಿ ಆತಂಕ ಉಂಟುಮಾಡಿತು. ಈಗಾಗಲೆ ಮಳೆಗಾಲದಲ್ಲಿ ಸತತ ಮಳೆಯಿಂದಾಗಿ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಚಂಡಮಾರುತ ಎಫೆಕ್ಟ್: ಚಳಿಗೆ ಬೆಂಗಳೂರು ಗಡ, ಗಡ
ಬರ ಸಿಡುಲು ಬಡಿದಂತೆ ಮತ್ತೇ ಮಾಂಡೌಸ್ ಚಂಡಮಾರುತದ ಪರಿಣಾಮ ಜಡಿ ಮಳೆ ಪ್ರಾರಂಭವಾದ ಹಿನ್ನೆಲೆ ಅಲ್ಪ ಸ್ವಲ್ಪ ಬಂದಿರುವ ಜೋಳ, ಶೇಂಗಾ, ಈರುಳ್ಳಿ, ಮೆಣಸಿನಕಾಯಿ, ಗೋವಿನ ಜೋಳ ಸೇರಿದಂತೆ ಕಡಲೆ ಬೆಳೆಗೆ ಕೀಟಬಾಧೆ ನಿಯಂತ್ರಣಕ್ಕೆ ಔಷಧಿಯನ್ನು ಸಿಂಪಡಿಸಿದ್ದು, ಮಳೆಯಿಂದ ಕಡಲೆ ಬೆಳೆಯಲ್ಲಿರುವ ಹೂವು ಅದರ ಹುಳಿ ತೊಳೆದು ಹೋಗುತ್ತದೆ ಎನ್ನುವ ಆತಂಕ ರೈತರಲ್ಲಿ ಮೂಡಿದೆ. ಇನ್ನು ಕಟಾವು ಮಾಡಿ ತಂದ ಬೆಳೆಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಲು ಸಿದ್ಧಪಡಿಸುತ್ತಿದ್ದು, ಜಡಿ ಮಳೆಯಿಂದ ಬೆಳೆಗಳನ್ನು ಹಾಗೂ ದನಕರುಗಳಿಗೆ ಸಂಗ್ರಹಿಸಿಟ್ಟಹೊಟ್ಟು, ಮೇವಿನ ಬಣವಿಗಳನ್ನು ರಕ್ಷಣೆ ಮಾಡಿಕೊಳ್ಳಲು ಈ ಭಾಗದ ರೈತರು ಹರಸಾಹಸ ಪಡುವಂತಾಗಿದೆ.