ಕಾರ್ಕಳ ನಿಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಏಳನೆ ತರಗತಿಯಲ್ಲಿ ಓದುತ್ತಿರುವ ಮನಸ್ವಿ ಕುಲಾಲ್ ಪ್ರತಿಭಾನ್ವಿತೆ. ವಿದ್ಯಾಭ್ಯಾಸ ಜೊತೆಗೆ ಯಕ್ಷಗಾನ, ನೃತ್ಯ, ಭರತನಾಟ್ಯ, ಸಿನಿಕ್ಲಾಸಿಕ್ ಡ್ಯಾನ್ಸ್ , ಡ್ರಾಯಿಂಗ್ನಲ್ಲಿ ತೊಡಗಿಸಿಕೊಂಡಿದ್ದಾಳೆ. ಸಂತೋಷ್ ಕುಲಾಲ್ , ಮಂಜುಳ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯವಳು ಮನಸ್ವಿ, ಕಿರಿಯವಳು ಸ್ವೀಕೃತಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ಕಾರ್ಕಳ (ಸೆ.17): ಕಾರ್ಕಳ ನಿಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಏಳನೆ ತರಗತಿಯಲ್ಲಿ ಓದುತ್ತಿರುವ ಮನಸ್ವಿ ಕುಲಾಲ್ ಪ್ರತಿಭಾನ್ವಿತೆ. ವಿದ್ಯಾಭ್ಯಾಸ ಜೊತೆಗೆ ಯಕ್ಷಗಾನ, ನೃತ್ಯ, ಭರತನಾಟ್ಯ, ಸಿನಿಕ್ಲಾಸಿಕ್ ಡ್ಯಾನ್ಸ್ , ಡ್ರಾಯಿಂಗ್ನಲ್ಲಿ ತೊಡಗಿಸಿಕೊಂಡಿದ್ದಾಳೆ. ಸಂತೋಷ್ ಕುಲಾಲ್ , ಮಂಜುಳ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯವಳು ಮನಸ್ವಿ, ಕಿರಿಯವಳು ಸ್ವೀಕೃತಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ತಂದೆ ಸಂತೋಷ್ ಕುಲಾಲ್ ಮಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೆಜರ್ ಕಾರ್ಯ ನಿರ್ವಹಿಸುತಿದ್ದಾರೆ . ತಾಯಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ
undefined
ವಿವೇಕ ಶಿಕ್ಷಣ ವಾಹಿನಿ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ವೀಡಿಯೋ ವೈರಲ್ ಆಗಿದೆ. ಆದರೆ ಕಳೆದ ನಾಲ್ಕು ವರ್ಷದ ಹಳೆಯ ವೀಡಿಯೋ ಎಂದು ತಂದೆ ಸಂತೋಷ್ ಕುಲಾಲ್ ತಿಳಿದ್ದಾರೆ.
ವೀಡಿಯೋದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯ ಹಾಗು ಸಂಸ್ಕೃತಿಯ ಜೀವನ ಮೌಲ್ಯಯುತ ಶಿಕ್ಷಣದ ಬಗ್ಗೆ ಮಾತನಾಡಿದ್ದಾಳೆ. ಸ್ವಾಭಿಮಾನ, ಜೀವನ ಮೌಲ್ಯಗಳನ್ನು ರೂಪಿಸುವ ಮೂಲಕ ಬದುಕಿಗೆ ದಾರಿ ಯಾಗುವುದನ್ನು , ವೀಡಿಯೋ ದಲ್ಲಿ ತಿಳಿಸಲಾಗಿದೆ.
ಯಪ್ಪಾ ಕಣ್ಣಲ್ಲಿ ನೋಡೋಕಾಗ್ತಿಲ್ಲ..ಹಾತೆ ಫ್ರೈ ಮಾಡಿ ಕರುಂಕುರುಂ ಅಂತ ಹೇಗೆ ತಿನ್ತಾರೆ ನೋಡಿ!