ಚೈತ್ರಾ ಕುಂದಾಪುರ ದೋಚಿದ್ದ ಹಣದಲ್ಲಿ ಖರೀದಿ ಮಾಡಿದ್ದೇನು? ಕಾರು, ಮನೆ, ಸೈಟು, 2 ಕೋಟಿ ರೂ. ಎಫ್‌ಡಿ ಹಣ ಜಪ್ತಿ

By Sathish Kumar KH  |  First Published Sep 17, 2023, 1:35 PM IST

ಉದ್ಯಮಿ ಗೋವಿಂದಬಾಬು ಪೂಜಾರಿಯನ್ನು ವಂಚಿಸಿ ಪಡೆದ ಹಣದಿಂದ ಚೈತ್ರಾ ಕುಂದಾಪುರ ಅವರು ಖರೀದಿಸಿದ್ದ ಕಾರು, ಆಸ್ತಿ, ಚಿನ್ನಾಭರಣ, ಎಫ್‌ಡಿ ಹಣವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಬಾಗಲಕೋಟೆ/ ಬೆಂಗಳೂರು (ಸೆ.17): ರಾಜ್ಯದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಭಾರಿ ಸಂಚಲಕ ಸೃಷ್ಟಿಸಿರುವ ಚೈತ್ರಾ ಕುಂದಾಪುರ ಮತ್ತು ಅವರ ಗ್ಯಾಂಗ್‌ನಿಂದ ಉಡುಪಿ ಜಿಲ್ಲೆಯ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಎಂಎಲ್‌ಎ ಟಿಕೆಟ್‌ ಕೊಡಿಸುವುದಾಗಿ ಪಡೆದಿದ್ದ 5 ಕೋಟಿ ರೂ. ಹಣದಲ್ಲಿ ಖರೀದಿ ಮಾಡಿದ್ದ ಕಿಯಾ ಕಾರನ್ನು ಸಿಸಿಬಿ ಪೊಲೀಸರು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಚೈತ್ರಾ ಬ್ಯಾಂಕ್‌ನಲ್ಲಿಟ್ಟಿದ್ದ ಹಣ, ಖರೀದಿ ಮಾಡಿದ್ದ ಚಿನ್ನಾಭರಣವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೈತ್ರಾ ಕುಂದಾಪುರಗೆ ಸೇರಿದ್ದ ಕಾರು ಮುಧೋಳದಲ್ಲಿ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸಿಸಿಬಿ ಪೊಲೀಸರಿಂದ ಚೈತ್ರಾ ಕುಂದಾಪುರ ಅವರ ಹೊಸ ಕಾರನ್ನು ವಶಕ್ಕೆ ಪಡೆದಿದ್ದಾರೆ. ಚೈತ್ರಾಳ ಸ್ನೇಹಿತ ಎಂದು ಹೇಳಲಾಗುವ ಕಿರಣ್‌ ಎನ್ನುವವರ ಬಳಿ ಈ ಕಾರು ಇತ್ತು. ಸೊಲ್ಲಾಪುರದಲ್ಲಿದ್ದ ಕಾರನ್ನು ಕಿರಣ್‌ ಮುಧೋಳಕ್ಕೆ ತಂದಿದ್ದನು. ಕಾರು ಡ್ರವೈವಿಂಗ್‌ ಸ್ಕೂಲ್‌ ನಡೆಸುತ್ತಿದ್ದ ಕಿರಣ್‌ಗೆ ಕಾಡು ಕೊಟ್ಟಿದ್ದು, ಅದನ್ನು ಈಗ ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ, ಯುವಕ ಕಿರಣ್‌ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Latest Videos

undefined

ಚೈತ್ರಾ ಕುಂದಾಪುರ‍‍ಳಿಂದ ಕೋಟಿ ರೂ. ಕೇಳಿದ್ರಾ ಬಿಜೆಪಿ ಸಂಸದ?

ಇನ್ನು ಚೈತ್ರಾ ಕುಂದಾಪುರ ಅವರಿಗೆ ಸೇರಿದ್ದ 3 ಕೋಟಿ ರೂ. ಮೌಲ್ಯದ ಸ್ವತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಚೈತ್ರಾ ಮತ್ತು ಶ್ರೀಕಾಂತ್‌ ಹೆಸರಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಇಟ್ಟಿದ್ದ 1.8 ಕೋಟಿ ರೂ. ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇನ್ನು ಸ್ಥಳೀಯ ಸೊಸೈಟಿಯಲ್ಲಿದ್ದ 40ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ವಂಚನೆಯ ಹಣದಲ್ಲಿ ಖರೀದಿ ಮಾಡಿದ್ದ 65 ಲಕ್ಷ ರೂ. ಮೊತ್ತದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಆಸ್ತಿ ಖರೀದಿ ಮಾಡಿದ ಬಗ್ಗೆ ಮಾಹಿತಿಯಿದ್ದು, ಅದನ್ನೂ ವಿಡಿಯೋ ಮಾಡುವ ಮೂಲಕ ಸರ್ಕಾರಿ ವ್ಯಾಪ್ತಿಗೆ ಪಡೆದುಕೊಂಡಿದ್ದಾರೆ.

  • ಚೈತ್ರಾ ಕುಂದಾಪುರ ಗ್ಯಾಂಗ್‌ ವಂಚನೆಯ ಹಣ, ಯಾರಿಂದ ಎಷ್ಟು ಜಪ್ತಿ?
  • ಈವರೆಗೆ ಚೈತ್ರಾ ಕುಂದಾಪುರ ಅಂಡ್‌ ಗ್ಯಾಂಗ್‌ನಿಂದ 3 ಕೋಟಿ ರೂ. ಮೌಲ್ಯದ ನಗದು, ಚಿನ್ನ, ಕಾರು ಜಪ್ತಿ
  • ಚೈತ್ರಾ ಕುಂದಾಪುರ ತನ್ನ ಸಂಬಂಧಿಕರ ಹೆಸರಲ್ಲಿ ಖಾಸಗಿ ಬ್ಯಾಂಕ್ ನಲ್ಲಿ ಇಟ್ಟಿದ್ದ 1.8 ಕೋಟಿ ಠೇವಣಿ ಪತ್ರ ಜಪ್ತಿ
  • ಚೈತ್ರಾ ಮನೆಯಲ್ಲಿದ್ದ ಸುಮಾರು 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ.
  • ಚೈತ್ರಾ ತನ್ನ ಭಾವ ಮ್ಯಾನೇಜರ್ ಆಗಿದ್ದ ಬ್ಯಾಂಕ್‌ನಲ್ಲಿ (ಸಹಕಾರಿ ಬ್ಯಾಂಕ್‌) ಇಟ್ಟಿದ್ದ 40 ಲಕ್ಷ ರೂ. ಜಪ್ತಿ.
  • ಚೈತ್ರಾಳ ಸ್ನೇಹಿತ ಶ್ರೀಕಾಂತ್ ಮನೆಯಲ್ಲಿ 45 ಲಕ್ಷ ರೂ. ಜಪ್ತಿ.
  • ಇನ್ನು ಹಡಗಲಿಯ ಹಾಲಶ್ರೀ ಸ್ವಾಮೀಜಿ ಈಗಾಗಲೇ ಗೋವಿಂದ ಪೂಜಾರಿಗೆ 50 ಲಕ್ಷ ರೂ. ಹಿಂದುರುಗಿಸಿದ್ದಾರೆ.
  • ಚೈತ್ರಾ ಖರೀದಿ ಮಾಡಿದ್ದ ಹೊಸ ಕಾರನ್ನು ವಶ.

Hassan Rape: 13 ವರ್ಷದ ಅಪ್ರಾಪ್ತೆ ಮೇಲೆ ಅತ್ಯಚಾರವೆಸಗಿದ 73 ವರ್ಷದ ವೃದ್ಧ, ಗರ್ಭಿಣಿಯಾದ ಬಾಲಕಿ

ಡೀಲ್‌ ಹಣವನ್ನು ಹಂಚಿಕೊಂಡಿದ್ಹೇಗೆ ಗೊತ್ತಾ? 
ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ವಂಚನೆ ಮಾಡಿ ಪಡೆದ 3ಕೋಟಿ ರೂಪಾಯಿ ಹಣವನ್ನು ಚೈತ್ರಾ ಕುಂದಾಪುರ ಮತ್ತು ಅವರ ತಂಡವು ಕಾರ್ಕಳ ಬಳಿ ಹೋಗಿ ಹಂಚಿಕೆ ಮಾಡಿಕೊಂಡಿದೆ. 29-10-2022ರ ಬೆಳಿಗ್ಗೆ 6 ಕ್ಕೆ ಕಾರ್ಕಳ - ಮಂಗಳೂರು ರಸ್ತೆಯಲ್ಲಿ ಹಣ ಕಲೆಕ್ಟ್ ಮಾಡಿಕೊಳ್ಳಲಾಗಿದೆ. ನಂತರ ಆ ಹಣವನ್ನು ಬೆಳಗ್ಗೆ 10.30 ಕ್ಕೆ ಬೈಂದೂರಿನ ಮರವಂತೆ ಬೀಚ್ ಬಳಿ ತರಲಾಗಿದೆ. ಅಲ್ಲಿ 10 ಲಕ್ಷ ರೂ. ಹಣವನ್ನು ಮಾತ್ರ ತೆಗೆದುಕೊಂಡು ಚೈತ್ರ ಕುಂದಾಪುರ ಅವರ ಮನೆಯಲ್ಲಿ ಹಂಚಿಕೆ ಮಾಡಲಾಗಿದೆ. ಬಳಿಕ ಮರವಂತೆಯಲ್ಲಿ ಕಾಯುತ್ತಿರೋ ಶ್ರೀಕಾಂತ್‌ನನ್ನು ಸೇರಿಕೊಳ್ಳುವ ಚೈತ್ರಾ ಮತ್ತು ಗಗನ್ ಮೂವರು ಸೇರಿ ಹಣ ಹಂಚಿಕೊಳ್ಳುತ್ತಾರೆ. 
ಹೀಗೆ ಹಂಚಿಕೊಂಡ ಹಣವನ್ನು ಕೋಟೇಶ್ವರದಲ್ಲಿರೋ ಅಕ್ಕನ ಮನೆ ನಿರ್ಮಾಣಕ್ಕೆ ಚೈತ್ರಾ ಹಣ ಹೂಡಿಕೆ ಮಾಡುತ್ತಾಳೆ. ಅಲ್ಲಿ ಹೊಸ ಜಾಗಕ್ಕೆ ಹಣ ಹೂಡಿಕೆ ಮಾಡಿದ್ದಾಳೆ. ಇನ್ನು ಶ್ರೀಕಾಂತ್ ನಾಯಕ್ ಕಾರ್ಕಳ ಬಳಿ‌ ಮನೆ ಕಟ್ಟಿಸುತ್ತಿದ್ದಾನೆ.

click me!