ಮದುವೆ ಹಿಂದಿನ ದಿನ ವರನಿಗೆ ಹೃದಯಾಘಾತ, ಮದುವೆಗೆ ಬಂದವರಿಗೆ ಅಂತಿಮ ದರ್ಶನ!

Published : Dec 06, 2020, 09:44 AM ISTUpdated : Dec 06, 2020, 10:13 AM IST
ಮದುವೆ ಹಿಂದಿನ ದಿನ ವರನಿಗೆ ಹೃದಯಾಘಾತ, ಮದುವೆಗೆ ಬಂದವರಿಗೆ ಅಂತಿಮ ದರ್ಶನ!

ಸಾರಾಂಶ

ಮದುವೆ ಹಿಂದಿನ ದಿನವೇ ಸಾವನ್ನಪ್ಪಿದ ಮದುಮಗ| ಹೃದಯಾಘಾತದಿಂದಾಗಿ ಮೃತಪಟ್ಟ ಯುವಕ| ಮದುವೆಗೆ ಬಂದವರಿಗೆ ಅಂತಿಮ ದರ್ಶನ

ಸಿಂಧನೂರು(ಡಿ.06): ಇನ್ನೇನು ಮದುಮಗನಾಗಿ ತಾಳಿ ಕಟ್ಟುವ ಹಿಂದಿನ ದಿನವೇ ಸಾವನಪ್ಪಿರುವ ಧಾರುಣ ಘಟನೆ ಶನಿವಾರ ಸಂಜೆ ಸಿಂಧನೂರು ತಾಲೂಕಿನಲ್ಲಿ ಜರುಗಿದೆ. 

ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ ಯಲ್ಲಪ್ಪ ಅವರ ಮಗ ಹುಲುಗಪ್ಪ (36)ರಾಮತ್ನಾಳ ಗ್ರಾಮ ಪಂಚಾಯಿತಿಯಎಸ್ ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ವಿವಾಹ ಮಹೋತ್ಸವ ಡಿ. 6 ರಂದು ತಾಲೂಕಿನ ಗೋರೆಬಾಳ ಗ್ರಾಮದ ಶರಣ  ಬಸವೇಶ್ವರ ದೇವಸ್ಥಾನದಲ್ಲಿ ನಿಶ್ಚಯಿಸಲಾಗಿತ್ತು. ಮದುಮಗಳು ದೈಹಿಕ ಶಿಕ್ಷಕಿ ಹಾಗೆ ಕಾರ್ಯನಿರ್ವಹಿಸುತ್ತಿದ್ದರು.

ಇವರ ಮದುವೆ ಹಿಂದಿನ ಶಾಸ್ತ್ರಗಳೆಲ್ಲವೂ ಶನಿವಾರ ಪೂರ್ಣಗೊಂಡಿದ್ದವು. ಇನ್ನೇನು ರವಿವಾರ ತಾಳಿ ಕಟ್ಟುವುದೊಂದೇ ಬಾಕಿ ಇತ್ತು. ಆದರೆ ಅಷ್ಟರಲ್ಲೇ ಮದುಮಗನಿಗೆ ಶನಿವಾರ ಸಂಜೆ ಹೃದಯಾಘಾತವಾಗಿ ಸಾವನಪ್ಪಿದ್ದಾರೆ.

ಬೀಗರು ಸಂಬಂಧಿಕರು ಅನೇಕರು ಮದುವೆಗೆಂದು ಆಗಮಿಸಿದವರು ಮದುಮಗನ ಅಂತಿಮ ದರ್ಶನ ಪಡೆಯುವಂತೆ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!