ನಾರ್ವೆ ದೇಶಕ್ಕಾಗಿ ಉಡುಪಿಯ UCSL ನಿರ್ಮಿತ 99 ಮೀ ಉದ್ದದ ಬೃಹತ್ ಹಡಗು ಲೋಕಾರ್ಪಣೆ, 8 ಹಡಗು ನಿರ್ಮಾಣ!

Gowthami K   | Kannada Prabha
Published : Oct 27, 2026, 07:34 AM IST
UCSL

ಸಾರಾಂಶ

ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೆಡ್‌ನಲ್ಲಿ ನಾರ್ವೆ ದೇಶಕ್ಕಾಗಿ ನಿರ್ಮಿಸಲಾದ ಬೃಹತ್ ಸರಕುಸಾಗಣೆ ಹಡಗನ್ನು ಲೋಕಾರ್ಪಣೆಗೊಳಿಸಲಾಗಿದೆ. 'ವಿಲ್ಸನ್ ಎನರ್ಜಿ 1' ಹೆಸರಿನ ಈ ಹಡಗು ಯುಸಿಎಸ್‌ಎಲ್‌ನಲ್ಲಿ ನಿರ್ಮಾಣವಾದ ಅತೀ ದೊಡ್ಡ ಹಡಗಾಗಿದೆ. ಇದರೊಂದಿಗೆ ಇತರ ಹಡಗುಗಳ ನಿರ್ಮಾಣ ಕಾರ್ಯಗಳಿಗೂ ಚಾಲನೆ ನೀಡಲಾಯಿತು.

ಮಲ್ಪೆ: ಕೇಂದ್ರ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ‘ಮ್ಯಾರಿಟೈಮ್ ಇಂಡಿಯಾ ವಿಷನ್ 2030/2047’ ಮಾರ್ಗಸೂಚಿಯಲ್ಲಿ ಇಲ್ಲಿನ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೆಡ್ (ಯುಸಿಎಸ್‌ಎಲ್‌) ನಲ್ಲಿ ನಾರ್ವೆ ದೇಶಕೊಸ್ಕರ ನಿರ್ಮಿಸಿದ ಬೃಹತ್ ಸರಕುಸಾಗಣೆ ಹಡಗನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

ಇದೇ ಸಂದರ್ಭ ಇನ್ನೊಂದು ಬೃಹತ್ ಸರಕುಸಾಗಣೆ ಹಡಗಿನ ‘ತಳಪಾಯ ಸ್ಥಾಪನೆ’ (ಕೀಲ್ ಲೇಯಿಂಗ್) ಹಾಗೂ ಮತ್ತೊಂದು ಹಡಗಿನ ನಿರ್ಮಾಣಕ್ಕೆ ‘ಉಕ್ಕು ಕತ್ತರಿಸುವ’ (ಸ್ಟೀಲ್ ಕಟ್ಟಿಂಗ್) ಕಾರ್ಯಕ್ಕೆ ಚಾಲನೆ ನೀಡಲಾಯಿತು.

ನಾರ್ವೆಯ ರಾಯಭಾರಿ ಭಾಗಿ

ಭಾರತದಲ್ಲಿರುವ ನಾರ್ವೆಯ ರಾಯಭಾರಿ ಮೇ ಎಲಿನ್ ಸ್ಟೆನರ್ ಅವರ ಉಪಸ್ಥಿತಿಯಲ್ಲಿ, ನಾರ್ವೆಯ ‘ವಿಲ್ಸನ್ ಎಎಸ್‌ಎ’ ಕಂಪೆನಿಯ ಅಧ್ಯಕ್ಷ ಐವಿಂಡ್ ಐಡೆಸ್ವಿಕ್ ಮತ್ತವರ ಮಗಳು ಅನ್ನಾ ಐಡೆಸ್ವಿಕ್ ಅವರು ‘ವಿಲ್ಸನ್ ಎನರ್ಜಿ 1’ ಎಂಬ ಬೃಹತ್ ಹಡಗನ್ನು ಲೋಕಾರ್ಪಣೆಗೊಳಿಸಿದರು. ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ಕಾರ್ಯದರ್ಶಿ ವಿಜಯಕುಮಾರ್ ಅವರು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉಪಸ್ಥಿತರಿದ್ದರು.

160 ಕೋಟಿ ರು. ವೆಚ್ಚ

2021ರಲ್ಲಿ ಆರಂಭವಾದ ಯುಸಿಎಸ್‌ಎಲ್‌ ನಲ್ಲಿ ‘ವಿಲ್ಸನ್ ಎನರ್ಜಿ 1’ ಇದುವರೆಗೆ ನಿರ್ಮಾಣವಾದ ಅತೀ ದೊಡ್ಡ ಹಡಗು ಎಂಬ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಹಡಗು 99 ಮೀ. ಉದ್ದ. 15.85 ಅಡಿ ಅಗಲವಿದ್ದು, 2200 ಟನ್ ಭಾರವಿದೆ. ಇದು 6300 ಟನ್ ಸರಕು ಸಾಗಣಾ ಸಾಮರ್ಥ್ಯ (3,16,278 ಘನ ಅಡಿ ಸರಕು) ವನ್ನು ಹೊಂದಿದೆ. ಇದಕ್ಕೆ ಸುಮಾರು 15 ಮಿಲಿಯನ್ ಯೂರೋಸ್ (160 ಕೋಟಿ ರು.) ವೆಚ್ಚ ತಗಲಿದೆ.

ಕೊಚ್ಚಿನ್ ಶಿಪ್‌ಯಾರ್ಡ್ ಸ್ವಾಮ್ಯದ ಯುಸಿಎಸ್‌ಎಲ್‌ ಘಟಕವು ವಿಲ್ಸನ್ ಎಎಸ್‌ಎ ಕಂಪೆನಿಗೆ ಇಂತಹ 8 ಸರಕು ಹಡಗುಗಳನ್ನು ನಿರ್ಮಿಸಲು , ಮೊದಲ ಹಡಗು ಈಗಾಗಲೇ ಹಸ್ತಾಂತರವಾಗಿದೆ. 2ನೇ ಹಡಗನ್ನು ಸೋಮವಾರ ಉದ್ಘಾಟಿಸಲಾಗಿದೆ. ಇನ್ನುಳಿದ 6 ಹಡಗುಗಳನ್ನು 2028ರ ಮಳ‍‍ೆಗಾಲಕ್ಕೆ ಮೊದಲು ನಿರ್ಮಿಸಿ ಹಸ್ತಾಂತರಿಸಲಾಗುತ್ತದೆ ಎಂದು ಯುಸಿಎಸ್‌ಎಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಕುಮಾರ್ ಅಂಬಲಪರಂಬಿಲ್ ತಿಳಿಸಿದರು.

ಅಲ್ಲದೆ ಯುಸಿಎಸ್‌ಎಲ್‌ ಘಟಕವು ಈ ಹಿಂದೆ ವಿಲ್ಸನ್ ಎಎಸ್‌ಎಗಾಗಿ 89 ಮೀ. ಉದ್ದದ 3,800 ಟನ್ ಒಣ ಸರಕು ಸಾಮರ್ಥ್ಯದ 6 ಹಡಗುಗಳನ್ನು ನಿರ್ಮಿಸಿಕೊಟ್ಟಿದೆ. ಈ ಹಡಗುಗಳನ್ನು ಕೇವಲ 14 ತಿಂಗಳಲ್ಲಿ ನಿರ್ಮಿಸಲಾಗಿದ್ದು, ಯುಸಿಎಸ್‌ಎಲ್‌ ಘಟಕ ಈಗ ಭಾರತದಲ್ಲಿಯೇ ಅತ್ಯಂತ ಕಡಿಮೆ ಅವಧಿಯಲ್ಲಿ ಹಡಗು ನಿರ್ಮಾಣ ಮಾಡುವ ಸಂಸ್ಥೆಯಾಗಿದೆ ಎಂದು ಹರಿಕುಮಾರ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮತದಾರ ಪಟ್ಟೀಲಿ ನಿಮ್ಮ ಹೆಸರು ಇದೆಯೇ ನೋಡಿ! ಮಧ್ಯಾಹ್ನ 3ಕ್ಕೆ ವೆಬ್‌ನಲ್ಲಿ ಪಟ್ಟಿ ಲಭ್ಯ
ರಾಜ್ಯದಲ್ಲಿ ಚಳಿಗಾಲ ಆರಂಭ, ಮಂಜು ವಾತಾವರಣ: ಈ ವರ್ಷದ ಹವಾಮಾನ ಹೇಗಿರಲಿದೆ ಗೊತ್ತಾ?