ರಾಜ್ಯದಲ್ಲಿ ಚಳಿಗಾಲ ಆರಂಭ, ಮಂಜು ವಾತಾವರಣ: ಈ ವರ್ಷದ ಹವಾಮಾನ ಹೇಗಿರಲಿದೆ ಗೊತ್ತಾ?

Published : Oct 27, 2026, 06:17 AM IST
Bengaluru Winter

ಸಾರಾಂಶ

ಕರ್ನಾಟಕದಲ್ಲಿ ಚಳಿಗಾಲ ಆರಂಭವಾಗಿದ್ದು, ಬೆಂಗಳೂರು ಮತ್ತು ಉತ್ತರ ಒಳನಾಡಿನಲ್ಲಿ ಮಂಜಿನ ವಾತಾವರಣ ಶುರುವಾಗಿದೆ. ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿದಿದೆ. ಆದರೆ, ಎಲ್ ನೀನೋ ಪ್ರಭಾವದಿಂದ ಈ ವರ್ಷ ಚಳಿಯ ತೀವ್ರತೆ ಕಡಿಮೆ ಇರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಚಳಿಗಾಲ ಆರಂಭವಾಗಿದ್ದು ಉತ್ತರ ಒಳನಾಡಿನ ವಿಜಯಪುರ, ರಾಜಧಾನಿ ಬೆಂಗಳೂರು ನಗರ, ಗ್ರಾಮಾಂತರ ಸೇರಿ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ನಸುಕಿನಲ್ಲಿ ಮಂಜಿನ ವಾತಾವರಣ ಶುರುವಾಗಿದೆ. ಕೆಲ ಜಿಲ್ಲೆಗಳಲ್ಲಿ ತಾಪಮಾನ ಸರಾಸರಿಗಿಂತ 4.7 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ದಾಖಲಾಗಿದೆ.

ಕುಸಿತವಾಗುತ್ತಿರುವ ತಾಪಮಾನ

ಸೋಮವಾರದಂದು ರಾಜ್ಯದ 15 ಜಿಲ್ಲೆಗಳಲ್ಲಿ ತಾಪಮಾನ ಸರಾಸರಿಗಿಂತ ಕಡಿಮೆ ದಾಖಲಾಗಿದೆ. ಉತ್ತರ ಒಳನಾಡಿನ ವಿಜಯಪುರದಲ್ಲಿ ಸೋಮವಾರ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸರಾಸರಿಗಿಂತ 4.7 ಡಿಗ್ರಿ ಸೆಲ್ಸಿಯಸ್ ಕಡಿಮೆ ಇತ್ತು. ಗದಗದಲ್ಲಿ ಕನಿಷ್ಠ 15.8 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಸರಾಸರಿಗಿಂತ 4.1 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದೆ. ಧಾರವಾಡ 15.4, ಬೆಳಗಾವಿ 15.6, ಬಾಗಲಕೋಟೆ 16.5, ರಾಯಚೂರಿನಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮುಂದಿನ ಏಳು ದಿನಗಳ ಮುನ್ಸೂಚನೆಯ ಪ್ರಕಾರ, ರಾಜ್ಯದ ಹಲವು ಭಾಗಗಳಲ್ಲಿ ಬೆಳಗಿನ ವೇಳೆಯಲ್ಲಿ ಚಳಿ ಹಾಗೂ ಮಂಜು ಆವರಿಸುವ ಸಾಧ್ಯತೆ ಇದೆ. ದಿನದ ಅವಧಿಯಲ್ಲಿ ಎಂದಿನಂತೆ ಬಿಸಿಲಿನ ವಾತಾವರಣ ಇರಲಿದೆ. ಕೆಲವು ಕಡೆ ಹಗುರ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಈ ವರ್ಷ ಕಡಿಮೆ ಚಳಿ?

ಪ್ರಸಕ್ತ ಸಾಲಿನ ಚಳಿಗಾಲದ ಅವಧಿಯಲ್ಲಿ ಚಳಿಯ ತೀವ್ರತೆ ಕಡಿಮೆ ಇರುವ ಮುನ್ಸೂಚನೆ ಇದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಎಲ್ ನೀನೋ ಪರಿಣಾಮ ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕಡಿಮೆಯಾಗಿದೆ. ಜೊತೆಗೆ ಚಳಿಗಾಲದ ತೀವ್ರತೆಯೂ ಕಡಿಮೆ ಇರಲಿದೆ. ಇನ್ನು ಹಿಂಗಾರು ಅವಧಿಯ ಈ ತಿಂಗಳ ಮಳೆ ಮುಕ್ತಾಯಗೊಂಡಿದೆ. ನವೆಂಬರ್ 2ನೇ ವಾರವರೆಗೂ ರಾಜ್ಯಕ್ಕೆ ಮಳೆ ಸಾಧ್ಯತೆ ಇಲ್ಲ. ಬೆಳಗಿನ ಅವಧಿಯಲ್ಲಿ ಚಳಿ ಅನುಭವ ಇದ್ದರೆ, ದಿನದ ಅವಧಿಯಲ್ಲಿ ತಾಪಮಾನ ಸಾಮಾನ್ಯದಂತೆಯೇ ಇರುತ್ತದೆ ಎಂದು ಶ್ರೀನಿವಾಸ ರೆಡ್ಡಿ ತಿಳಿಸಿದರು.

Oct 27, 2026, 12:13:26 AM

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಪ್ರಧಾನಿ ಮೋದಿ ಈ ಕೆಲಸ ಮಾಡಿದರೆ 30 ಸೆಕೆಂಡ್‌ನಲ್ಲಿ ಪ್ರತಿಭಟನೆ ಅಂತ್ಯ - ರಾಹುಲ್ ಗಾಂಧಿ
25-30ನೇ ವಯಸ್ಸಲಲ್ಲ, 40ನೇ ವಯಸ್ಸಿನಲ್ಲಿ ನಾನೇಕೆ ಮನೆ ಖರೀದಿಸಿದೆ? ಉದ್ಯಮಿ ನೀಡಿದ ಸಲಹೆ ಇದು