
ಬೆಂಗಳೂರು (ಜು.12): ನಗರದಲ್ಲಿ ಭಾರೀ ದುರಂತವೊಂದು ತಪ್ಪಿದ್ದು, ಟೆಕ್ನಿಕಲ್ ಸಮಸ್ಯೆ ಹಿನ್ನೆಲೆ ಸೇನಾ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ. HAL ನಿಂದ ಟೇಕ್ ಆಫ್ ಆಗಿ BIALಗೆ ಹೊರಟಿದ್ದ VT-KBN ಹೆಸರಿನ 1A ಪ್ರೀಮಿಯಂ ಸೇನಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಮುಂದಿನ ವ್ಹೀಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ತುರ್ತಾಗಿ HALನಲ್ಲೆ ಲ್ಯಾಂಡ್ ಮಾಡಲಾಗಿದೆ. ಆಘಾತಕಾರಿ ವಿಚಾರವೆಂದರೆ ವಿಮಾನ ಲ್ಯಾಂಡಿಂಗ್ ವೇಳೆ ಮಗುಚಿ ಬೀಳುವ ಹಂತಕ್ಕೆ ಹೋಗಿತ್ತು.
ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದು ಸದ್ಯ ಯಾರಿಗೂ ಪ್ರಾಣಾಪಾಯವಾಗಿಲ್ಲ. ತಾಂತ್ರಿಕ ದೋಷದಿಂದಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಸುರಕ್ಷಿತ ಭೂಸ್ಪರ್ಶಕ್ಕಾಗಿ ರನ್‌ವೇಯಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಸೇನಾ ವಿಮಾನವನ್ನು ಕೇವಲ ಎರಡೇ ಚಕ್ರಗಳಲ್ಲಿ ಲ್ಯಾಂಡ್ ಮಾಡಲಾಯಿತು. ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿದ್ದನ್ನು ಕಂಡು ಎಚ್‌ಎಎಲ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ನಮ್ಗೆ ಪೋಲಿಸ್ ಮೇಲೆ ನಂಬಿಕೆಯಿದೆ, ಸಿದ್ದು ಸರ್ಕಾರದ ಮೇಲಿಲ್ಲ: ನಳಿನ್ ಕುಮಾರ್ ಕಟೀಲ್
ಮೊಬೈಲ್ ಕಳ್ಳನನ್ನು ಬೆನ್ನಟ್ಟಿ ಹಿಡಿದ ಟ್ರಾಫಿಕ್ ಪೊಲೀಸ್: ಬನಶಂಕರಿ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಂದ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ಕಿಡಿಗೇಡಿಯನ್ನು ಸಂಚಾರ ವಿಭಾಗದ ಪೊಲೀಸರು ಬೆನ್ನು ಹತ್ತಿ ಸೆರೆ ಹಿಡಿದಿದ್ದಾರೆ. ಜೇಬುಗಳ್ಳನನ್ನು ಬನಶಂಕರಿ ಸಂಚಾರ ಠಾಣೆ ಸಹಾಯಕ ಸಬ್ ಇನ್‌ಸ್ಪೆಕ್ಟರ್ (ಎಎಸ್‌ಐ) ಬೆಟ್ಟಸ್ವಾಮಿ ಹಾಗೂ ಕಾನ್‌ಸ್ಟೇಬಲ್ ಕಾಶಿರಾಮ್ ಬಂಧಿಸಿದ್ದು, ಪೊಲೀಸರ ಕರ್ತವ್ಯ ನಿರ್ವಹಣೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯನಗರ: ಹಂಪಿಯಲ್ಲಿ ಯೋಗ ಮಾಡಿ ಸಂಭ್ರಮಿಸಿದ ಜಿ-20 ಪ್ರತಿನಿಧಿಗಳು!
ಬನಶಂಕರಿ ಬಸ್ ನಿಲ್ದಾಣ ಬಳಿ ಬೆಳಗ್ಗೆ 10ರ ವೇಳೆ ಎಎಸ್‌ಐ ಬೆಟ್ಟಸ್ವಾಮಿ ಹಾಗೂ ಕಾನ್‌ಸ್ಟೇಬಲ್ ಕಾಶಿರಾಮ್ ಕರ್ತವ್ಯ ನಿರತರಾಗಿದ್ದರು. ಅದೇ ವೇಳೆ ಮಹಿಳಾ ಪ್ರಯಾಣಿಕರೊಬ್ಬರಿಂದ ಮೊಬೈಲ್ ಕದ್ದು ಜೇಬುಗಳ್ಳ ಪರಾರಿಯಾಗುತ್ತಿದ್ದ. ತಕ್ಷಣವೇ ತಮ್ಮ ಮೊಬೈಲ್ ಕಳ್ಳತನವಾಗಿದ್ದನ್ನು ಗಮನಿಸಿದ ಸಂತ್ರಸ್ತೆ, ಕಳ್ಳ ಕಳ್ಳ ಎಂದು ಜೋರಾಗಿ ಕೂಗಿಕೊಂಡಿದ್ದಾರೆ. ಈ ಚೀರಾಟ ಕೇಳಿ ಬಸ್ ನಿಲ್ದಾಣಕ್ಕೆ ಧಾವಿಸಿದ ಎಎಸ್‌ಐ ಬೆಟ್ಟಸ್ವಾಮಿ ಹಾಗೂ ಕಾನ್‌ಸ್ಟೇಬಲ್ ಕಾಶಿರಾಮ್ ಅವರು ಕೂಡಲೇ ಕಾರ್ಯವೃತ್ತರಾಗಿದ್ದಾರೆ. ಆಗ ಮೊಬೈಲ್ ದೋಚಿ ಓಡಿ ಹೋಗುತ್ತಿದ್ದವನ್ನು ಬೆನ್ನಹತ್ತಿ ಹೋಗಿ ಪೊಲೀಸರು ಹಿಡಿದಿದ್ದಾರೆ. ನಂತರ ಬನಶಂಕರಿ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರಿಗೆ ಜೇಬುಗಳ್ಳನನ್ನು ಸಂಚಾರ ಪೊಲೀಸರು ಒಪ್ಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ