ನಾಳೆ ಬೆಂಗಳೂರಿನಲ್ಲಿ ದಿನವಿಡೀ ನೀರು ಸಿಗಲ್ಲ! ಯಾಕೆ? ಯಾವ್ಯಾವ ನಗರ? ಇಲ್ಲಿದೆ ಮಾಹಿತಿ

Published : Jul 12, 2023, 08:14 AM ISTUpdated : Jul 12, 2023, 08:19 AM IST
ನಾಳೆ ಬೆಂಗಳೂರಿನಲ್ಲಿ ದಿನವಿಡೀ ನೀರು ಸಿಗಲ್ಲ! ಯಾಕೆ? ಯಾವ್ಯಾವ ನಗರ? ಇಲ್ಲಿದೆ ಮಾಹಿತಿ

ಸಾರಾಂಶ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೆಂಗೇರಿ ಹೊರವಲಯದ ರಸ್ತೆಯಲ್ಲಿರುವ ಅಂಬೇಡ್ಕರ್ ಕಾಲೇಜ್ ಕವಾಟ ದುರಸ್ತಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ಜುಲೈ 13 ರಂದು (ಗುರುವಾರ) ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಸ್ಟೇಜ್ -4 ಫೇಸ್-1 ಎರಡು ಪಂಪುಗಳು ತುರ್ತಾಗಿ ಸ್ಥಗಿತಗೊಳ್ಳಲಿದ್ದು, ಮುಂಜಾಗ್ರತ ಕ್ರಮವಾಗಿ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು (ಜು.12): ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ಕೆಂಗೇರಿ ಹೊರವಲಯದ ರಸ್ತೆಯಲ್ಲಿರುವ ಅಂಬೇಡ್ಕರ್ ಕಾಲೇಜ್ ಕವಾಟ ದುರಸ್ತಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ ಜುಲೈ 13 ರಂದು (ಗುರುವಾರ) ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಸ್ಟೇಜ್ -4 ಫೇಸ್-1 ಎರಡು ಪಂಪುಗಳು ತುರ್ತಾಗಿ ಸ್ಥಗಿತಗೊಳ್ಳಲಿದ್ದು, ಮುಂಜಾಗ್ರತ ಕ್ರಮವಾಗಿ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಟೇಜ್ -4 ಫೇಸ್ -1 ನ ಎರಡು ಪಂಪ್‌ಗಳ ದುರಸ್ತಿ ಮಾಡುವುದರಿಂದ ದಿನವಿಡೀ ನೀರು ಸರಬರಾಜು ಸ್ಥಗಿತಗೊಳ್ಳಲಿದೆ ಹೀಗಾಗಿ ಸಾರ್ವಜನಿಕರು ಇಂದೇ ಅಗತ್ಯವಿರುವಷ್ಟು ನೀರು ಶೇಖರಿಸಿಕೊಟ್ಟುಕೊಳ್ಳುವಂತೆ ತಿಳಿಸಿದೆ. 

ಎಲ್ಲೆಲ್ಲಿ ?

ರಾಜರಾಜೇಶ್ವರಿನಗರ, ಕೆಂಗೇರಿ, ವಿಜಯನಗರ, ಗೋವಿಂದರಾಜನಗರ, ಲಗ್ಗೇರೆ, ಕಾಮಾಕ್ಷಿಪಾಳ್ಯ, ಪೀಣ್ಯ, ದಾಸರಹಳ್ಳಿ, ಜಾಲಹಳ್ಳಿ, ಯಲಹಂಕ, ಹೆಬ್ಬಾಳ, ಮಹಾಲಕ್ಷ್ಮೀ ಲೇಔಟ್, ಬಸವೇಶ್ವರನಗರ, ನಂದಿನಿ ಲೇಔಟ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ಥಗಿತಗೊಳ್ಳಲಿದೆ. ಹೀಗಾಗಿ ಸಾರ್ವಜನಿಕರು ನಾಳೆ ಜಲಮಂಡಳಿ ನೀರಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು ಅಥವಾ ಅಗತ್ಯವಿರುವಷ್ಟು ನೀರನ್ನು ಇಂದೇ ಸಂಗ್ರಹಿಸಿಕೊಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. 

ವಿದ್ಯುತ್‌, ಮದ್ಯ, ಹಾಲಷ್ಟೇ ಅಲ್ಲ, ನೀರಿನ ದರವೂ ಹೆಚ್ಚಳ?

ಇಂದು ನೀರಿನ ಅದಾಲತ್‌

 ಬೆಂಗಳೂರು: ಜಲಮಂಡಳಿಯ ಉಪ ವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಜುಲೈ 13ರ ಗುರುವಾರ ಬೆಳಗ್ಗೆ 9.30ರಿಂದ 11 ರವರೆಗೆ ನೀರಿನ ಅದಾಲತ್‌ ಆಯೋಜಿಸಲಾಗಿದೆ. ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ ಸಹಾಯವಾಣಿ 1916ಗೆ ಕರೆ ಮಾಡಿ ದೂರು ದಾಖಲಿಸಬಹುದು. ಜತೆಗೆ ವಾಟ್ಸ್‌ಆಪ್‌ ಸಂಖ್ಯೆ 87622 28888 ಸಂದೇಶದ ಮೂಲಕ ದೂರು ಸಲ್ಲಿಸಬಹುದು ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!