ಲಾಕ್‌ಡೌನ್ ಉಲ್ಲಂಘಿಸಿ ರೈತರ ಸಂತೆ, ಎಂದಿನಂತಿದೆ ಜನ ಸಂಚಾರ; ಗ್ರೌಂಡ್ ರಿಪೋರ್ಟ್ ಇಲ್ಲಿದೆ

By Suvarna News  |  First Published Apr 12, 2020, 1:35 PM IST

ಬೆಂಗಳೂರಿನಾದ್ಯಂತ 1800 ಸಬ್ ರೋಡ್‌ಗಳು ಬಂದ್ ಆಗಿವೆ. 200 ಕ್ಕೂ ಹೆಚ್ಚು ಏರಿಯಾಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಸಬ್ ರೋಡ್‌ಗಳಿಗೆ ಬ್ಯಾರಿಕೇಡ್ ಹಾಕಿ ಬ್ಲಾಕ್ ಮಾಡಿದ್ದಾರೆ.


ಬೆಂಗಳೂರು (ಏ. 12): 1800 ಸಬ್ ರೋಡ್‌ಗಳು ಬಂದ್ ಆಗಿವೆ. 200 ಕ್ಕೂ ಹೆಚ್ಚು ಏರಿಯಾಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಸಬ್ ರೋಡ್‌ಗಳಿಗೆ ಬ್ಯಾರಿಕೇಡ್ ಹಾಕಿ ಬ್ಲಾಕ್ ಮಾಡಿದ್ದಾರೆ. ಪಾದರಾಯನಪುರ ಈಗಾಗಲೇ ಸೀಲ್‌ಡೌನ್ ಆಗಿದೆ. ಸದ್ಯಕ್ಕೆ ಅಲ್ಲಿನ ಸ್ಥಿತಿಗತಿ ಹೇಗಿದೆ? ಇಲ್ಲಿದೆ ನೋಡಿ!

"

Latest Videos

undefined

ಕೊರೊನಾ ಕಟ್ಟೆಚ್ಚರಕ್ಕಾಗಿ ಬೆಂಗಳೂರಿನಲ್ಲಿ 200 ಲೇಔಟ್‌ಗಳ ಸಾವಿರ ಅಡ್ಡ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪಾದರಾಯನಪುರ, ಬಾಪೂಜಿನಗರ ಸೀಲ್‌ಡೌನ್ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಬ್ಯಾರಿಕೇಡ್, ಮರದ ಕೊಂಬೆ, ಗುಜರಿ ಗಾಡಿ ನಿಲ್ಲಿಸಿ ರಸ್ತೆಯನ್ನು ಬಂದ್ ಮಾಡಿದ್ದಾರೆ. ಕತ್ರಿಗುಪ್ಪೆಯ ಸ್ಥಿತಿಗತಿಗಳು ಹೀಗಿವೆ ನೋಡಿ! 

"

ಬ್ಯಾಟರಾಯನಪುರದಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ರೈತರು ಸಂತೆ ನಡೆಸಿದ್ದಾರೆ. 

"

ಒಂದು ಪ್ಯಾಕೇಟ್ ಹಾಲಿಗೆ ಶಿವಾಜಿನಗರದಲ್ಲಿ ಫುಲ್ ಗಲಾಟೆ ನಡೆದಿದೆ. ಹಾಲು ಹಂಚಿಕೆದಾರನ ವಿರುದ್ಧ ನಾರಿ ಮಣಿಯರು ಗಲಾಟೆ ನಡೆಸಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದ ಹಾಲಿಗಾಗಿ ಕ್ಯೂ ನಿಂತಿದ್ದರು. ಒಂದು ಪ್ಯಾಕೇಟ್ ಹಾಲಿಗೆ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ. 

"

ಸೀಲ್‌ಡೌನ್, ಲಾಕ್‌ಡೌನ್‌ ಬಗ್ಗೆ ತಲೆಕೆಡಿಸಿಕೊಳ್ಳದೇ ಸಾರ್ವಜನಿಕರು ರಸ್ತೆಗಳಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದಾರೆ. ಕಮಲಾನಗರದಲ್ಲಿ ಜನ ಸಂಚಾರ ಎಂದಿನಂತೆಯೇ ಇದೆ. ಕಮಲಾನಗರದ ರಿಯಾಲಿಟಿ ಚೆಕ್ ಇಲ್ಲಿದೆ  ನೋಡಿ! 

"

click me!