ಜನರ ಮಧ್ಯೆ ಬೆಂಕಿ ಹಚ್ಚುವ ಪ್ರತಾಪ ಸಿಂಹರನ್ನ ಬಂಧಿಸಿ: ದಸಂಸ ಆಗ್ರಹ

By Ravi Janekal  |  First Published Sep 26, 2024, 3:54 PM IST

ಮಾಜಿ ಸಂಸದ ಪ್ರತಾಪ ಸಿಂಹ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಕೂಡಲೇ ಪ್ರತಾಪ ಸಿಂಹರನ್ನ ಬಂಧಿಸುವಂತೆ ಚಾಮರಾಜನಗರ ದಲಿತ ಸಂಘರ್ಷ ಸಮಿತಿ ಮುಖಂಡರು ಒತ್ತಾಯಿಸಿದ್ದಾರೆ.


ಚಾಮರಾಜನಗರ (ಸೆ.26): ಕಳೆದ ವರ್ಷ ಭಾರೀ ವಿವಾದಕ್ಕೆ ಕಾರಣವಾಗಿದ್ದ ಮಹಿಷಾ ದಸರಾ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿಯೂ ಚಾಮುಂಡಿ ಬೆಟ್ಟದಲ್ಲೇ ನಡೆಯುತ್ತಾ ಮಹಿಷ ದಸರಾ? ಕಳೆದ ಬಾರಿ ಟೌನ್‌ಹಾಲ್ ಆವರಣದಲ್ಲಿ ಅವಕಾಶ ನೀಡಿದ್ದ ಜಿಲ್ಲಾಡಳಿತ? ಯಾರು ಯಾವ ಕಾರ್ಯಕ್ರಮ ಮಾಡ್ತಾರೋ ಅದು ಅವರ ಹಕ್ಕು. ಮಾಡಲೇಬೇಕು, ಮಾಡಲೇಬಾರದು ಎನ್ನಲು ಆಗುವುದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಮಹಿಷಾ ದಸರಾ ಆಚರಣೆಯ ಸುಳಿವು ನೀಡಿದ್ದ ಸಚಿವ ಹೆಚ್‌ಸಿ ಮಹದೇವಪ್ಪ.  ಆದರೆ ಯಾವುದೇ ಕಾರಣಕ್ಕೂ ಮಹಿಷ ದಸರಾ ಆಚರಣೆ ಮಾಡಲು ಬಿಡಲ್ಲ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ ಸಿಂಹ ಸವಾಲು ಹಾಕಿದ್ದರು. ಇದೀಗ ಪ್ರತಾಪ ಸಿಂಹ ಹೇಳಿಕೆಗೆ ಚಾಮರಾಜನಗರ ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು ನಾವು ಮಹಿಷ ದಸರಾ ಆಚರಿಸಿಯೇ ಸಿದ್ಧ ಎಂದಿದ್ದಾರೆ.

ಮಾಜಿ ಸಂಸದ ಪ್ರತಾಪ ಸಿಂಹ ಬೆಂಕಿ ಹಚ್ಚುವ ಕೆಲ,ಸ ಮಾಡುತ್ತಿದ್ದಾರೆ. ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಹಿಷ ದಸರಾ ವಿಚಾರವನ್ನಿಟ್ಟುಕೊಂಡು ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಸಮಾಜದ ಶಾಂತಿಗೆ ಭಂಗ ತರುತ್ತಿರುವ ಪ್ರತಾಪ ಸಿಂಹರನ್ನ ಬಂಧಿಸಬೇಕು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

Tap to resize

Latest Videos

undefined

ಮುಸ್ಲಿಮರ ಕುರಿತು ಪ್ರಚೋಧನಕಾರಿ ಭಾಷಣ: ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್‌

ಮಹಿಷ ದಸರಾ ಆಚರಣೆ ಬಗ್ಗೆ ಹಾಲಿ ಸಂಸದ ಯದುವೀರ್ ಒಡೆಯರ್ ಯಾವುದೇ ಅಪಸ್ವರ ಎತ್ತದೆ ಘನತೆ ಉಳಿಸಿಕೊಂಡಿದ್ದಾರೆ. ಆದರೆ ಪ್ರತಾಪ ಸಿಂಹ ಮಹಿಷ ದಸರಾ ವಿಚಾರವಾಗಿ ವಿವೇಚನಾರಹಿತರಾಗಿ ಮಾತನಾಡುತ್ತಿದ್ದಾರೆ.  ಮಹಿಷಾಸುರ ಮೈಸೂರಿನ ಅಸ್ಮಿತೆಯ ಸಂಕೇತ, ಮೈಸೂರಿನ ಆದಿ ಪುರುಷ. ಹೀಗಾಗಿ ನಾವು ಮಹಿಷ ದಸರಾವನ್ನು ಆಚರಿಸಲಿದ್ದೇವೆ. ಚಾಮರಾಜನಗರ ಜಿಲ್ಲೆಯಿಂದ 5000ಕ್ಕೂ ಹೆಚ್ಚು ಮಂದಿ ತೆರಳುತ್ತೇವೆ. ಕಳೆದ ಬಾರಿಯೂ ಇದೇ ರೀತಿ ಬೈಕ್ ಗಳ ಮೂಲಕ ಹೋಗಿದ್ದೆವು. ಈ ಬಾರಿಯೂ ಮಹಿಷ ದಸರಾ ಆಚರಣೆ ಮಾಡೇ ಮಾಡುತ್ತೇವೆ ಎಂದಿರುವ ದಲಿತ ಮುಖಂಡರು. 

ಒಟ್ಟಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ದಸರಾ ವೈಭವನನ್ನು ಪರ-ವಿರೋಧ ಪ್ರತಿಭಟನೆಗಳು ನುಂಗಿಹಾಕಿಬಿಡುತ್ತದೆ ಎಂದು ಸಾರ್ವಜನಿಕರು ಆತಂಕಗೊಂಡಿರುವುದು ಸುಳ್ಳಲ್ಲ. 

click me!