ನಾಲ್ಕು ವರ್ಷಗಳ ಕಾಲ ಅತ್ತೆ ಮಗಳನ್ನು ಪ್ರೀತಿಸಿದ ಯುವಕ, ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾಳೆ. ಇದರಿಂದ ಯುವಕ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವುದು ಕುಟುಂಬದಲ್ಲಿ ಆತಂಕ ಮೂಡಿಸಿದೆ.
ಮೈಸೂರು (ಸೆ.18): ಕಳೆದ ನಾಲ್ಕೈದು ವರ್ಷಗಳಿಂದಲೂ ಅತ್ತೆ ಮಗಳೆಂಬ ಸಲುಗೆಯಿಂದ ಇಬ್ಬರೂ ಪ್ರೀತಿ ಮಾಡಿದ್ದಾರೆ. ಆದರೆ, ಇದೀಗ ಅತ್ತೆ ಮಗಳು ನೀನು ನನಗೆ ಬೇಡವೆಂದು ಮಾವನ ಮಗನನ್ನು ದೂರ ಮಾಡಲು ಮುಂದಾಗಿದ್ದಾಳೆ. ಇದರಿಂದ ಮನನೊಂದ ಯುವಕ ಅತ್ತೆ ಮಗಳು ನನಗೆ ಪ್ರೀತಿಸಿ ಕೈಕೊಟ್ಟಿದ್ದಾಳೆಂದು ಡೆತ್‌ನೋಟ್ ಬರೆದಿಟ್ಟು ನಾಪತ್ತೆ ಆಗಿದ್ದಾನೆ.
ಹೌದು, ಅತ್ತೆ ಮಗಳು ಪ್ರೀತಿಸಿ ಕೈಕೊಟ್ಟಳೆಂದು ಡೆತ್ ನೋಟ್ ಬರೆದಿಟ್ಟು ಯುವಕ ನಾಪತ್ತೆ ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರೂ, ಈಗ ಮದುವೆ ಮಾಡಿಕೊಳ್ಳೋಣ ಎಂದರೆ ಅತ್ತೆ ಮಗಳು ಕೈಕೊಟ್ಟಿದ್ದಾಳೆ. ಇನ್ನು ಪ್ರೇಯಸಿ ವರ್ತನೆಗೆ ಬೇಸತ್ತ ಭಗ್ನಪ್ರೇಮಿ ಡೆತ್ ನೋಟ್ ಬರೆದು ನಾಪತ್ತೆ ಆಗಿದ್ದಾನೆ. ಈ ಘಟನೆ ಮೈಸೂರಿನ ಲಿಂಗಾಂಬುದಿ ಪಾಳ್ಯದ ಸಿದ್ದರಾಮಯ್ಯ ನಗರದಲ್ಲಿ ನಡೆದಿದೆ. ಪ್ರೇಮಿ ನಾಪತ್ತೆಯಾಗಿ ಒಂದು ವಾರ ಕಳೆದರೂ ಯಾವುದೇ ಸುಳಿವು ದೊರೆತಿಲ್ಲ.
ಮೆಡಿಕಲ್ ಶಾಪ್‌ಗಳಲ್ಲಿ ಸಿಗುವ ಪೇನ್ ಕಿಲ್ಲರ್ ಮಾತ್ರೆಗಳಿಂದ ಡ್ರಗ್ಸ್ ದಂಧೆ ಆತಂಕ: ಗೃಹ ಸಚಿವ ಪರಮೇಶ್ವರ್
ಸಿದ್ದರಾಮಯ್ಯ ನಗರದ ಮಹದೇವು ಅವರ ಪುತ್ರ ರವಿ (26) ನಾಪತ್ತೆಯಾದ ಯುವಕ. ಕಳೆದ ನಾಲ್ಕು ವರ್ಷಗಳಿಂದ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದನು. ಇನ್ನು ಅತ್ತೆ ಮಗಳೂ ಕೂಡ ರವಿಯನ್ನ ಪ್ರೀತಿಸುತ್ತಿದ್ದಳು. ಇಬ್ಬರೂ ನಾಲ್ಕೈದು ವರ್ಷದಿಂದ ಪ್ರೀತಿ ಮಾಡುತ್ತಿದ್ದರಿಂದ ಸಲುಗೆ ಹೆಚ್ಚಾಗಿಯೇ ಇತ್ತು. ಇವರಿಬ್ಬರ ಮದುವೆಗೆ ಮನೆಯವರಿಂದ ಯಾವುದೇ ವಿರೋಧವೂ ಇರಲಿಲ್ಲ. ಆದರೆ, ಕಳೆದ 15 ದಿನಗಳ ಹಿಂದೆ ಅತ್ತೆ ಮಗಳು ನೀನು ನನಗೆ ಬೇಡ. ನಿನ್ನನ್ನು ಮದುವೆ ಮಾಡಿಕೊಳ್ಳುವುದಿಲ್ಲ. ನಿನ್ನನ್ನು ಪ್ರೀತಿ ಮಾಡುವುದಿಲ್ಲ ಎಂದು ಯೂಟರ್ನ್ ಹೊಡೆದಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದೇ ಮಾವನ ಮಗ ರವಿ ಬಗ್ಗೆ ಅವರ ಚಿಕ್ಕಪ್ಪ ಹಾಗೂ ಮಾವನ ಬಳಿ ಇಲ್ಲಸಲ್ಲದ ದೂರು ನೀಡಿದ್ದಾಳೆ. ಈ ಎಲ್ಲಾ ಬೆಳವಣಿಗೆಯಿಂದ ಬೇಸತ್ತ ರವಿ ಸೆ.10 ರಂದು ಮನೆಯಿಂದ ನಾಪತ್ತೆ ಆಗಿದ್ದಾನೆ. ಈ ಘಟನೆ ಬೆಳಕಿಗೆ ಬಂದ ನಂತರ ರವಿ ಮಲಗುವ ಸ್ಥಳವನ್ನು ಪರಿಶೀಲನೆ ಮಾಡಿದಾಗ ಆತನ ಹಾಸಿಗೆ ಕೆಳಗೆ ಡೆತ್ ನೋಟ್ ಪತ್ತೆಯಾಗಿದೆ.
ಮುನಿರತ್ನ ಆಡಿಯೋ ವಿಚಾರ: ಧ್ವನಿ ಅವರದ್ದೇ ಅನ್ನೋದು ನಿಜವಾದ್ರೆ ಕ್ಷಮಿಸಲ್ಲ: ಡಾ.ನಿರ್ಮಲಾನಂದಶ್ರೀ
ರವಿ ಬರೆದಿಟ್ಟ ಪತ್ರದಲ್ಲೇನಿದೆ?
ಇಷ್ಟು ದಿನ ಲವ್ ಮಾಡಿ ಈಗ ಪ್ರೀತಿಸಿಲ್ಲವೆಂದು ಹೇಳಿ ನನ್ನ ಮತ್ತು ನಮ್ಮ ಮನೆಯವರ ನೆಮ್ಮದಿ ಹಾಳು ಮಾಡಿದ್ದಲ್ಲದೆ ಮನೆಯವರಿಗೆ ಅವಮಾನ ಮಾಡಿ ಸಂಭಂಧಿಕರ ಬಳಿ ಇಲ್ಲಸಲ್ಲದ ಕಂಪ್ಲೇಂಟ್ ಮಾಡಿ ನೆಮ್ಮದಿ ಹಾಳು ಮಾಡಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಯಾರೂ ಹುಡುಕಬೇಡಿ. ಇದಕ್ಕೆಲ್ಲಾ ಕಾರಣ ಮಾವ ಮಹದೇವ, ಚಿಕ್ಕಪ್ಪ ಮಹದೇವಮೂರ್ತಿ ಹಾಗೂ ನಾನು ಪ್ರೀತಿಸಿದ ಅತ್ತೆ ಮಗಳು ವಾಣಿಶ್ರೀ ಕಾರಣ ಎಂದು ಬರೆದಿದ್ದಾನೆ. ಮಗನ ನಾಪತ್ತೆಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳುವಂತೆ ರವಿ ತಂದೆ ಮಹದೇವು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.