ಕಾರು ಚಲಾಯಿಸುವಾಗ ದಿಢೀರ್ ಉಸಿರಾಟ ಸಮಸ್ಯೆ, ಮಹಿಳೆಯ ಜೀವ ಉಳಿಸಿದ ಮಡಿವಾಳ ಸಂಚಾರಿ ಪೊಲೀಸ್ ಪೇದೆ

Kannadaprabha News   | Kannada Prabha
Published : Jul 04, 2026, 07:56 AM IST
Madival police HC Dattatreya save woman

ಸಾರಾಂಶ

ಕಾರು ಚಲಾಯಿಸುವಾಗ ದಿಢೀರನೇ ಉಸಿರಾಟ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಾಫ್ಟ್‌ವೇರ್ ಕಂಪನಿ ಮಹಿಳಾ ಉದ್ಯೋಗಿಯನ್ನು ಮಡಿವಾಳ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರು ರಕ್ಷಿಸಿದ್ದಾರೆ. ಪೇದೆಯ ಸಮಯಪ್ರ

ಬೆಂಗಳೂರು (ಜು.4): ಕಾರು ಚಲಾಯಿಸುವಾಗ ದಿಢೀರನೇ ಉಸಿರಾಟ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಾಫ್ಟ್‌ವೇರ್ ಕಂಪನಿ ಮಹಿಳಾ ಉದ್ಯೋಗಿಯನ್ನು ಮಡಿವಾಳ ಸಂಚಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರು ರಕ್ಷಿಸಿದ್ದಾರೆ.

ಮಾರತ್ತಹಳ್ಳಿ ನಿವಾಸಿ ಕಲಿಂದಿ ಶ್ರೀವಾಸ್ತವ್‌(Kalindi srinivasan) ಅವರ ಪ್ರಾಣಪಾಯದಿಂದ ಪರಾಗಿದ್ದು, ಕೆಲಸ ಮುಗಿಸಿಕೊಂಡು ಅವರು ಮನೆಗೆ ಮರಳುವಾಗ ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್‌ ಬಳಿ ಘಟನೆ ನಡೆದಿದೆ. ತೊಂದರೆಗೆ ಸಿಲುಕಿದ್ದ ಅವರಿಗೆ ನೆರವಿನ ಹಸ್ತಚಾಚಿ ಹೆಡ್‌ ಕಾನ್‌ಸ್ಟೇಬಲ್ ವೈ.ಟಿ.ದತ್ತಾತ್ರೇಯ ಪ್ರಾಣ ಉಳಿಸಿದ್ದಾರೆ.

ಏನಾಯಿತು ಘಟನೆ?:

ತಮ್ಮ ಕುಟುಂಬದ ಜತೆ ಮಾರತ್ತಹಳ್ಳಿಯಲ್ಲಿ ಕಲಿಂದಿ ನೆಲೆಸಿದ್ದು, ಸಾಫ್ಟ್‌ವೇರ್ ಕಂಪನಿಯಲ್ಲಿ ಅವರು ಉದ್ಯೋಗದಲ್ಲಿದ್ದಾರೆ. ಪ್ರತಿದಿನ ಕಾರಿನಲ್ಲಿ ಅವರು ಕೆಲಸಕ್ಕೆ ಹೋಗಿ ಬರುತ್ತಿದ್ದರು. ಅಂತೆಯೇ ಶುಕ್ರವಾರ ರಾತ್ರಿ 8.30ರಲ್ಲಿ ಕೆಲಸ ಮುಗಿಸಿ ಕಾರು ಚಲಾಯಿಸಿಕೊಂಡು ಟೆಕ್ಕಿ ಮನೆಗೆ ಹೊರಟ್ಟಿದ್ದರು. ಆಗ ಮಾರ್ಗ ಮಧ್ಯೆ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪ ಹಠಾತ್ತಾಗಿ ಅವರಿಗೆ ಉಸಿರಾಟ ಸಮಸ್ಯೆ ಎದುರಾಗಿದೆ. ಅದೇ ವೇಳೆ ಆ ಜಂಕ್ಷನ್‌ನಲ್ಲಿ ಮಡಿವಾಳ ಸಂಚಾರ ಠಾಣೆ ಹೆಚ್‌ಸಿ ದತ್ತಾತ್ರೇಯ ಕಾರ್ಯನಿರ್ವಹಿಸುತ್ತಿದ್ದರು. ರಾಜ್ಯಪಾಲರ ಪಯಣದ ಹಿನ್ನಲೆಯಲ್ಲಿ ಸಂಚಾರ ನಿರ್ವಹಣೆ ಕರ್ತವ್ಯದಲ್ಲಿ ಹೆಡ್‌ ಕಾನ್‌ಸ್ಟೇಬಲ್ ವ್ಯಸ್ತರಾಗಿದ್ದರು. ಆಗ ಕಾರಿನಲ್ಲಿ ಕಲಿಂದಿ ಅವರು ಕೈ ಸನ್ನೆ ಮಾಡಿ ರಕ್ಷಣೆಗೆ ಕರೆಯುತ್ತಿದ್ದನ್ನು ದತ್ತಾತ್ರೇಯ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣೇ ಕಾರಿನ ಬಳಿಗೆ ತೆರಳಿ ಅವರಿಗೆ ದತ್ತಾತ್ರೇಯ ನೆರವಾಗಿದ್ದಾರೆ. ಆ ಕಾರಿಗೆ ಹ್ಯಾಂಡ್ ಬ್ರೇಕ್ ಹಾಕಿ ನಿಲ್ಲಿಸಿದ

ಹೆಡ್‌ ಕಾನ್‌ಸ್ಟೇಬಲ್‌, ತಾವೇ ಆ ಕಾರನ್ನು ಚಲಾಯಿಸಿಕೊಂಡು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕಲಿಂದಿ ಅವರನ್ನು ಕರೆದೊಯ್ದಿದ್ದಾರೆ. ಬಳಿಕ ವಿಷಯವನ್ನು ಇನ್ಸ್‌ಪೆಕ್ಟರ್‌ ಈಶ್ವರಿ ಅವರಿಗೆ ದತ್ತಾತ್ರೇಯ ಮುಟ್ಟಿಸಿದ್ದಾರೆ. ಆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಬೇರೊಂದು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಆನಂತರ ಸಂತ್ರಸ್ತೆಯ ಪತಿ ಅವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸಕಾಲದಲ್ಲಿ ವೈದ್ಯೋಪಾಚಾರ ದೊರಕಿದ ಪರಿಣಾಮ ಕಲಿಂದಿ ಅವರು ಜೀವ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಿವರಾಮ ಕಾರಂತ ಬಡಾವಣೆ ಫಲಾನುಭವಿಗಳಿಗೆ ಗುಡ್‌ನ್ಯೂಸ್! ನಿವೇಶನ ಹಂಚಿಕೆಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್
ನೆಂಟರಿಗೆ, ಆಪ್ತರಿಗೆ 30 ಬಾರ್‌ ಲೈಸೆನ್ಸ್ ಕೊಟ್ಟಿದ್ದ ಜಾರಕಿಹೊಳಿ ಭಾವ! - ಇ.ಡಿ. ದಾಳಿ ಬೆನ್ನಲ್ಲೇ ಲೋಕಾಯುಕ್ತರಿಂದ ಶಾಕ್