ಪೊಲೀಸ್ ಠಾಣೆಯಲ್ಲಿ ಕಾಮದಾಟ ತೋರಿಸಿದ ಪ್ರಕರಣದಲ್ಲಿ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಅಮಾನತುಗೊಳಿಸಲಾಗಿದೆ.
ತುಮಕೂರು (ಜ.4): ಪೊಲೀಸ್ ಠಾಣೆಯಲ್ಲಿಯೇ ಕಾಮದಾಟ ತೋರಿಸಿದ ಪ್ರಕರಣದಲ್ಲಿ ಮಧುಗಿರಿ ಪೊಲೀಸ್ ಠಾಣೆಯ ಡಿವೈಎಸ್‌ಪಿ ರಾಮಚಂದ್ರಪ್ಪ ಅವರ ಬಂಧನವಾಗಿದ್ದು, ಶನಿವಾರ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಮುಂದಾಗಿದ್ದ ವಿಡಿಯೋ ವೈರಲ್ ಪ್ರಕರಣದಲ್ಲಿ ಡಿವೈಎಸ್ ಪಿ ಬಂಧನವಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.
ಶನಿವಾರ ರಾಮಚಂದ್ರಪ್ಪನನ್ನು ಮಧುಗಿರಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಮಧುಗಿರಿ ಪ್ರಿನ್ಸಿಪಲ್ ಸಿನಿಯರ್ ಸಿವಿಲ್ ಜಡ್ಜ್ ಇವರನ್ನು 14 ದಿನ ನ್ಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಡಿವೈಎಸ್ ಪಿ ಗೆ ನ್ಯಾಯಾಂಗ ಬಂಧನ ನೀಡಿ ಆದೇಶ ನೀಡಿದರು. ಭಾನುವಾರ ಒಂದು ದಿನ ಮಧುಗಿರಿ ಉಪಕಾರಗೃಹದಲ್ಲಿರುವಂತೆ ಆದೇಶ ನೀಡಲಾಗಿದೆ. ಇನ್ನುಳಿದ 13 ದಿನಗಳ ಕಾಲ ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಅವರು ಇರಲಿದ್ದಾರೆ.
ಶನಿವಾರ ಸಂಜೆ ಡಿವೈಎಸ್ ಪಿ ರಾಮಚಂದ್ರಪ್ಪ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಕೊಂಡು, ನೇರವಾಗಿ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದರು.
ಪೊಲೀಸ್ ಠಾಣೆಯಲ್ಲೇ ಕುಚ್‌ಕುಚ್: ಅಯ್ಯೋ ರಾಮಚಂದ್ರ... ಪರಮೇಶ್ವರನ ಭಯವೂ ನಿನಗೆ ಇಲ್ಲದಾಯಿತೇ!
ಮೆಡಿಕಲ್ ಟೆಸ್ಟ್ ವೇಳೆಯಲ್ಲೂ ಅವಾಂತರ: ಇನ್ನು ಮೆಡಿಕಲ್ ಟೆಸ್ಟ್ ವೇಳೆಯಲ್ಲೂ ಪೊಲೀಸರು ಅವಾಂತರ ಸೃಷ್ಟಿಸಿದ್ದಾರೆ. ಮೆಡಿಕಲ್ ಟೆಸ್ಟ್ ವೇಳೆ ಡಿವೈಎಸ್ ಪಿ ರಾಮಚಂದ್ರಪ್ಪ ಪೋನ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಮೊಬೈಲ್ ಹಿಡಿದುಕೊಂಡು ಪೋಸ್ ಕೊಟ್ಟಿರುವ ಅವರ ವಿಡಿಯೋ ವೈರಲ್ ಆಗಿದೆ. ಬಂಧಿತ ಆರೋಪಿಗೆ ಮಾತನಾಡಲು ಫೋನ್ ಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಮಾನ್ಯರಿಗೆ ಒಂದು ಕಾನೂನು ಡಿವೈಎಸ್ ಪಿ ಗೆ ಒಂದು ಕಾನೂನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧುಗಿರಿ ಡಿವೈಎಸ್‌ಪಿ ರಾಮಚಂದ್ರ ಅಮಾನತು; ದೂರು ಕೊಟ್ಟ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ!