ಮಾಡಾಳ್‌ ಕೇಸ್‌: ಸಿನಿಮಾ ರೀತಿ ಥರ್ಡ್‌ ಡಿಗ್ರಿ ಟ್ರೀಟ್ಮೆಂಟ್‌ ಕೊಡ್ಬೇಕಾ?, ವಕೀಲರಿಗೆ ನ್ಯಾಯಾಧೀಶರ ಪ್ರಶ್ನೆ

By Gowthami K  |  First Published Mar 17, 2023, 4:08 PM IST

ಮಾಡಾಳು ಮಧ್ಯಂತರ ನಿರೀಕ್ಷಣಾ ಜಾಮೀನಿಗೆ  ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಹೈಕೋರ್ಟ್ ನ  ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭವಾಗಿದೆ. ಮಾಡಾಳು ಪರ ವಕೀಲ ಸುಮನ್‌ ಅವರಿಂದ ವಾದ ಮಂಡನೆ‌ ಆರಂಭವಾಗಿದೆ. ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ಲೋಕಾಯುಕ್ತ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ.


ಬೆಂಗಳೂರು (ಮಾ.17): ಲಂಚ ಪ್ರಕರಣ ಸಂಬಂಧ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಸತತ 6ನೇ ದಿನವಾದ ಗುರುವಾರ ಕೂಡ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದರು. ಮಾಡಾಳು ಮಧ್ಯಂತರ ನಿರೀಕ್ಷಣಾ ಜಾಮೀನಿಗೆ  ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಹೈಕೋರ್ಟ್ ನ  ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಆರಂಭವಾಗಿದೆ. ಮಾಡಾಳು ಪರ ವಕೀಲ ಸುಮನ್‌ ಅವರಿಂದ ವಾದ ಮಂಡನೆ‌ ಆರಂಭವಾಗಿದೆ. ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ಲೋಕಾಯುಕ್ತ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರು ನೇರವಾಗಿ ಭಾಗಿಯಾಗಿದ್ದಾರೆ. ಮಾಡಾಳು ವಿರೂಪಾಕ್ಷಪ್ಪ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಲೋಕಾಯುಕ್ತ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ  ಉಲ್ಲೇಖವಾಗಿದೆ. 

 ಪರ್ಚೇಸ್ ಆರ್ಡರ್ ನೀಡಲು ಹಣಕ್ಕೆ‌ ಬೇಡಿಕೆ ಇಡಲಾಗಿದೆ. ವಿರೂಪಾಕ್ಷಪ್ಪ ತನ್ನ ಮಗನ ಮೂಲಕ ಭ್ರಷ್ಟಾಚಾರ ಮಾಡಿಸಿದ್ದಾರೆ. ರಾಸಾಯನಿಕ ಸರಕಿಗೆ ಖರೀದಿ ಆದೇಶ, ಬಿಲ್ ನೀಡಲು ನೀಡಲು ಲಂಚ ಪಡೆಯಲಾಗಿದೆ. ಸ್ಯಾಂಪಲ್ ಗಳನ್ನ ನಿರಾಕರಿಸಿ ಹಣಕ್ಕೆ‌ ಬೇಡಿಕೆ ಇಡುವ ಕೆಲಸ ಆರೋಪಿಗಳು ಮಾಡಿದ್ದಾರೆ ಎಂದು ಲೋಕಾಯುಕ್ತ ಪರ ಹಿರಿಯ ವಕೀಲರು ಹೇಳಿದ್ದಾರೆ.

Tap to resize

Latest Videos

ಈ ವಾದದ ವೇಳೆ ಸ್ಯಾಂಪಲ್ ಚೆಕ್ ಮಾಡುವ ಅಧಿಕಾರ ಯಾರಿಗೆ ಇದೆ?  ಕೆಎಸ್ಡಿಎಲ್ ಅಧ್ಯಕ್ಷರಿಗೆ ಸ್ಯಾಂಪಲ್ ನಿರಾಕರಿಸುವ ಅಧಿಕಾರ ಇದ್ಯಾ?  ಎಂದು ನ್ಯಾಯಾಧೀಶರು ಈ ವೇಳೆ ವಕೀಲರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಲೋಕಾ ವಕೀಲರು ಅಧ್ಯಕ್ಷರ ಸೂಚನೆ‌ ಮೇರೆಗೆ ನಿರಾಕರಣೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಸಂಜಯ್ ನಗರದ ಮನೆಯಲ್ಲಿ ಸಿಕ್ಕ ಹಣ ಮಾಡಾಳು ವಿರೂಪಾಕ್ಷಪ್ಪ ಗೆ ಸೇರಿದ್ದು. ಹಣ ಸಿಕ್ಕ ರೂಂ ಮಾಡಾಳ್ ವಿರೂಪಾಕ್ಷಪ್ಪ ಬಳಸುತ್ತಾ ಇದ್ರು. ವಿರೂಪಾಕ್ಷಪ್ಪ ರೂಂ ಬಳಸುತ್ತಿದ್ದರು ಎಂದು ಅವರ ಸೊಸೆಯೇ ಹೇಳಿಕೆ ಕೊಟ್ಟಿದ್ದಾರೆ. ಅವರು ಬಳಸುತ್ತಾ ಇದ್ದ ರೂಂ ಅಲ್ಲಿ ಹಣ ಸಿಕ್ಕರೇ ಅದು ವಿರೂಪಾಕ್ಷಪ್ಪ ಹಣವೇ. ಹಣದ ಬಗ್ಗೆ ಸೊಸೆಯೇ ಹೇಳಿಕೆ ಕೊಟ್ಟಿದ್ದಾರೆ ಎಂದು ಲೋಕಾಯುಕ್ತ ಪರ ವಕೀಲ ಅಶೋಕ್ ಹಾರನಳ್ಳಿ ವಾದ ಮಂಡನೆ.

ಮಾಡಾಳು ವಿರೂಪಾಕ್ಷಪ್ಪ ತನಿಖೆಗೆ ಸಹಕರಿಸುತ್ತಿಲ್ಲ. ಯಾವುದೇ ಪ್ರಶ್ನೆಗಳಿಗೂ ವಿರೂಪಾಕ್ಷಪ್ಪ ಸಹಕರಿಸುತ್ತಿಲ್ಲ. ವಿರೂಪಾಕ್ಷಪ್ಪ ಅವರ ಮೊಬೈಲ್‌ ನಂಬರ್ ಕೂಡ್ತಿಲ್ಲ. ಇಂಟರೋಗೇಷನ್ ಗೂ ಕಸ್ಟಡಿಯಲ್ ಇಂಟೋರೋಗೆಷನ್ ಗೂ ಏನ್ ವ್ಯತ್ಯಾಸ? ತನಿಖೆಗೆ ಬಂದಾಗ ಡೀಮ್ಡ್ ಕಸ್ಟಡಿಯಲ್ಲೇ ಇರ್ತಾರೆ ಅಲ್ವಾ.? ಹಾಗಿದ್ರೆ ಎಲ್ಲಾ ಕೇಸಲ್ಲೂ ನಿರೀಕ್ಷಣಾ ಜಾಮೀನು ಕೊಡಬೇಕಲ್ವಾ.? ಸಿನಿಮಾದಲ್ಲಿ ಇದ್ದ ಹಾಗೆ ಕುರ್ಚಿಗೆ ಕಟ್ಟಿ, ಟಾರ್ಚರ್ ಮಾಡಿ ಸತ್ಯ ಬಾಯ್ಬಿಡಿಸ್ತೀರಾ? ಸಿನಿಮಾ ರೀತಿ ಥರ್ಡ್ ಡಿಗ್ರಿ ಟ್ರಿಟ್ ಮೆಂಟ್‌ಕೊಡಬೇಕಾ.?  ಎಂದು ಪ್ರಶ್ನಿಸಿದ ನ್ಯಾಯಾಧೀಶ ನ್ಯಾ.ಕೆ.ನಟರಾಜನ್. ಇದಕ್ಕೆ ಕಾನೂನು ಪ್ರಕಾರ ತನಿಖೆ‌ ಮಾಡಲಾಗುತ್ತೆ ಎಂದ ವಕೀಲರು.

ಮಾಡಾಳ್‌ ವಿರುಪಾಕ್ಷಪ್ಪ ಜಾಮೀನು ರದ್ದುಗೊಳಿಸಿ: ಸುಪ್ರೀಂ ಕೋರ್ಟ್‌ ಮೊರೆಹೋದ ಲೋಕಾಯುಕ್ತ ಪೊಲೀಸರು

ವಿರೂಪಾಕ್ಷಪ್ಪ ಪರ ವಕೀಲ ಸುಮನ್ ವಾದ ಮಂಡಿಸಿ, ವಿರೂಪಾಕ್ಷಪ್ಪ ತನಿಖೆಗೆ ಸಹಕರಿಸುತ್ತಿದ್ದಾರೆ. ಪ್ರತಿದಿನ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗುತ್ತಿದ್ದಾರೆ. ವಿರೂಪಾಕ್ಷಪ್ಪ ಅವರನ್ನ ಜೈಲಿಗೆ ಕಳುಹಿಸಿ ಅವರ ವರ್ಚಸ್ಸಿಗೆ ದಕ್ಕೆ‌ ತರುವ ಯತ್ನ ಮಾಡಲಾಗುತ್ತಿದೆ. ವಿರೂಪಾಕ್ಷಪ್ಪ ಅವರನ್ನ ಬಂಧಿಸಿ ವಿಚಾರಣೆ ಮಾಡುವ ಅಗತ್ಯವಿಲ್ಲ ಎಂದರು.

ಮಾಡಾಳ್ ವಿರುಪಾಕ್ಷಪ್ಪ ಬೇಲ್‌ ರದ್ದು ಮಾಡೋಕೆ ಅರ್ಜೆಂಟ್‌ ಯಾಕೆ?: ಲೋಕಾಯುಕ್ತಗೆ ಸುಪ್ರೀಂ ತರಾಟೆ

ನ್ಯಾಯಾಧೀಶ ಮತ್ತು ಲೋಕಾ ವಕೀಲರ ನಡುವಿನ ಸಂವಾದ ಇಂತಿತ್ತು

ನ್ಯಾಯಾಧೀಶ: ವಾಚ್ ಕ್ಯಾಮೆರಾದಲ್ಲಿ ಆಡಿಯೋ ವಿಡಿಯೋ ಇದೆಯಾ.? 
ಲೋಕಾ ವಕೀಲ: ಹೌದು ಅದರ ಸಮೇತ ದೂರು ನೀಡಿದ್ದಾರೆ. 81 ಲಕ್ಷ ಲಂಚ ನೀಡುವಂತೆ ಕೇಳಿದ್ದಾರೆ. 
ನ್ಯಾಯಾಧೀಶ: ಅದರಲ್ಲಿ ಎ1 ಹೇಳಿದ್ದಾರೆ ಅಂತಾ ಕೇಳಿದ್ದಾರಾ.? ಈ ಟೆಂಡರ್ ಬಗ್ಗೆ ಡಿಸೈಡ್ ಮಾಡೋದು ಯಾರು‌.?
ಲೋಕಾ ವಕೀಲ: ಅಧ್ಯಕ್ಷರ ಸೂಚನೆಯಂತೆ ಎಂಡಿ  ಡಿಸೈಡ್ ಮಾಡ್ತಾರೆ.
ನ್ಯಾಯಾಧೀಶ: ನೀವು ಈಗಾಗಲೇ ಹಣ ಸೀಜ್ ಮಾಡಿದ್ದೀರಿ. ಆರೋಪಿಯ ಬೆಂಬಲಿಗರ ಅರೆಸ್ಟ್ ಮಾಡಲಾಗಿದೆ. ಈಗ ಏಕೆ ಆರೋಪಿ ಕಷ್ಟಡಿಗೆ ಬೇಕು.  
ಲೋಕಾ ವಕೀಲ: ಸರಿಯಾದ ತನಿಖೆ ಮಾಡಲು ಕಷ್ಟಡಿ ಅವಶ್ಯಕತೆ ಇದೆ. ಆರೋಪಿ ಪ್ರಭಾವಿ ಆಗಿದ್ದಾರೆ. ಇವರ ಪ್ರಭಾವದ ಬಗ್ಗೆ ಎಂಡಿಯ 164 ಹೇಳಿಕೆ ನೋಡಬಹುದು. ಪ್ರಶಾಂತ್ ಮಾಡಾಳು ಹಾಗೂ ಎಂಡಿ ಮಧ್ಯದ ವಾಟ್ಸ್ ಪ್ ಚಾಟ್ ನೋಡಬಹುದು. ಎಂದು ಮುಚ್ಚಿದ ಲಕೋಟೆಯಲ್ಲಿ ದಾಖಲೆ ನೀಡಿರುವ ಲೋಕಾಯುಕ್ತ ವಕೀಲ.
ಲೋಕಾ ವಕೀಲ: ಪ್ರಶಾಂತ್ ಹಾಗೂ ಎಂಡಿ ಮಧ್ಯದ ಕಮ್ಯೂನಿಕೇಷನ್ ನಲ್ಲಿ ವಿರೂಪಾಕ್ಷಪ್ಪ ಇರೋದು ಸ್ಪಷ್ಟವಾಗಿದೆ. ಮಾಡಾಳು ವಿರೂಪಾಕ್ಷಪ್ಪ ಹಾಗೂ ಪ್ರಶಾಂತ್ ಮಾಡಾಳು ಇಬ್ಬರೂ ತನಿಖೆಗೆ ಸಹಕರಿಸುತ್ತಿಲ್ಲ. ವಿರೂಪಾಕ್ಷಪ್ಪ ಕೆಲವು ರೈಟಿಂಗ್ ನೋಟ್ಸ್ ಸಮೇತ ಬರ್ತಾರೆ. ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಹೀಗಾಗಿ ಬಂಧಿಸಿ ವಿಚಾರಣೆ ನಡೆಸುವ ಅಗತ್ಯ ಇದೆ.  

ಮಾಡಾಳು ವಿರೂಪಾಕ್ಷಪ್ಪ ಪರ ಕೆ.ಸುಮನ್ ವಾದ ಮಂಡನೆ:
ವಕೀಲ ಸುಮನ್: ಪ್ರಶಾಂತ್ ಮಾಡಾಳು ಮನೆಯಲ್ಲಿ ಸಿಕ್ಕ‌ ಹಣ ನನ್ನದಲ್ಲ. ಆ ಹಣ ನನ್ನ ಅಣ್ಣನಿಗೆ ಸೇರಿದ್ದು ಎಂದು ಹೇಳಿದ್ದಾರೆ. ಆ ಕಟ್ಟಡ ಒಂದು ಕಂಪನಿಗೆ ಸೇರಿದ್ದು. ಮಾಡಾಳು ವಿರೂಪಾಕ್ಷಪ್ಪ ಪುತ್ರರ ಕಂಪನಿಗೆ ಸೇರಿದ ಕಟ್ಟಡ.
ನ್ಯಾಯಾಧೀಶ: ಮಧ್ಯಂತರ ನಿರೀಕ್ಷಣಾ ಜಾಮೀನು ಸಿಕ್ಕರೂ ಯಾಕೆ ತನಿಖೆಗೆ ಸಹರಿಸ್ತಾ ಇಲ್ಲ?  
ವಕೀಲ ಸುಮನ್: ಪ್ರತಿದಿನ 5-6 ಗಂಟೆ ವಿಚಾರಣೆ ನಡೆಸ್ತಾ ಇದ್ದಾರೆ. ತೀರಾ ಕ್ರೂವೆಲ್ ಆಗಿ ವಿಚಾರಣೆ ಮಾಡ್ತಾ ಇದ್ದಾರೆ.
ನ್ಯಾಯಾಧೀಶ: ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸ್ತಾ ಇಲ್ಲ ಅಂದ್ರೆ ತನಿಖೆ ನಡೆಸ್ತಾರೆ.
ವಕೀಲ ಸುಮನ್: ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗೂ ತಪ್ಪು ಒಪ್ಪಿಕೊಂಡ್ರೆ ಸರಿಯಾದ ರೀತಿಯಲ್ಲಿ ಸಹಕರಿಸೋದಾ? ಎ2 ಪ್ರಶಾಂತ್ ಕಸ್ಟೋಡಿಯಲ್ ಇಂಟ್ರಾಗೇಷನ್ ನಾಡೀತಾ ಇದೆ. ಅವರೂ ಸಹಕರಿಸ್ತಾ ಇಲ್ಲ ಅಂತಿದ್ದಾರೆ. ಯಾವ ರೀತಿಯಲ್ಲಿ ತನಿಖೆ ಮಾಡ್ತಾ ಇದ್ದಾರೆ ನ್ಯಾಯಾಧೀಶ: ಜಾಮೀನು ಪಡೆದ‌ ಮೇಲೂ ಸಹಕರಿಸ್ತಾ ಇಲ್ಲ ಅಂದ್ರೆ ಜಾಮೀನು ರದ್ದು ಮಾಡಬಹುದು ಅಲ್ವಾ.? 
 

click me!