ರಾಯಚೂರು: ದೇಶಾದ್ಯಂತ ಕಾಂಗ್ರೆಸ್ ಪರ ಟ್ರೆಂಡ್ ಇದೆ: ಜಿ ಕುಮಾರ್ ನಾಯಕ್

By Ravi JanekalFirst Published Mar 30, 2024, 6:28 PM IST
Highlights

ದೇಶದಲ್ಲಿ ಕಾಂಗ್ರೆಸ್ ಪರ ಟ್ರೆಂಡ್ ಇಲ್ಲ ಅನ್ನೋದು ಸರಿ ಅಲ್ಲ. ಕೆಲವೊಮ್ಮೆ ಅದು ಗುಪ್ತಗಾಮಿನಿಯಾಗಿ ಇರುತ್ತೆ. ಆದರೆ ಆ ಟ್ರೆಂಡ್ ಕೈ ಎತ್ತಿ ತೋರಿಸೊಲ್ಲ. ಅದು ಮತ ನೀಡೋ ಮೂಲಕ ವ್ಯಕ್ತಪಡಿಸುತ್ತೆ. ಆಶ್ಚರ್ಯಕ್ಕೆ ಸಿದ್ಧರಿರಬೇಕು ಎಂದು ರಾಯಚೂರು ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ್ ತಿಳಿಸಿದರು

ರಾಯಚೂರು (ಮಾ.30): ದೇಶದಲ್ಲಿ ಕಾಂಗ್ರೆಸ್ ಪರ ಟ್ರೆಂಡ್ ಇಲ್ಲ ಅನ್ನೋದು ಸರಿ ಅಲ್ಲ. ಕೆಲವೊಮ್ಮೆ ಅದು ಗುಪ್ತಗಾಮಿನಿಯಾಗಿ ಇರುತ್ತೆ. ಆದರೆ ಆ ಟ್ರೆಂಡ್ ಕೈ ಎತ್ತಿ ತೋರಿಸೊಲ್ಲ. ಅದು ಮತ ನೀಡೋ ಮೂಲಕ ವ್ಯಕ್ತಪಡಿಸುತ್ತೆ. ಆಶ್ಚರ್ಯಕ್ಕೆ ಸಿದ್ಧರಿರಬೇಕು ಎಂದು ರಾಯಚೂರು ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ್ ತಿಳಿಸಿದರು.

ದೇಶದ್ಯಾಂತ ಮೋದಿ ಅಲೆ ಇದೆ ಎಂದು ಹೇಳಲಾಗುತ್ತಿದೆ. ಇತ್ತ ಕಾಂಗ್ರೆಸ್ ಟ್ರೆಂಡ್ ಕಡಿಮೆಯಾಗಿದೆ ಎಂಬ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಈ ಬಾರಿ ಕಾಂಗ್ರೆಸ್ ಟ್ರೆಂಡ್ ಚುನಾವಣೆ ಬಳಿಕ ತಿಳಿಯುತ್ತೆ ಎಂದರು ಇದೇ ವೇಳೆ ಕಾಂಗ್ರೆಸ್‌ನಲ್ಲಿ ಬಂಡಾಯ ಎದ್ದಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಎಲ್ಲ ಪಕ್ಷ ಮತ್ತು ಘಟಕದಲ್ಲಿ ಇರುತ್ತೆ. ಅದು ಆರೋಗ್ಯಕಾರಿ ರಾಜಕೀಯ ಚಟುವಟಿಕೆಯ ಲಕ್ಷಣ. ಇವು ಯಾವುದೂ ಕಳವಳ ವ್ಯಕ್ತಪಡಿಸೋ ವಿಚಾರವಲ್ಲ ಎಂದರು.

ಎಚ್‌ಡಿಕೆ ಹಾರ್ಟ್ ಆಪರೇಷನ್ ಬಗ್ಗೆ ಕಾಂಗ್ರೆಸ್ ನಾಯಕರು ಚುನಾವಣೆ ಪ್ರಚಾರದಲ್ಲಿ ವ್ಯಂಗ್ಯ ಮಾಡೋದು ಎಷ್ಟು ಸರಿ?

ಎಲ್ಲ ಟೀಂ ಮೆಂಬರ್‌ಗಳು ಒಂದಾಗುತ್ತಿದ್ದಾರೆ. ಹನ್ನೊಂದು ಜನ ಒಬ್ಬ ಬ್ಯಾಟಿಂಗ್ ಪರಿಣತ, ಒಬ್ಬ ಬೌಲಿಂಗ್‌ ನಲ್ಲಿ ಪರಿಣತ, ಇನ್ನೊಂದು ಕೀಪರ್ ಎಲ್ಲರೂ ಆಡುವಾಗ ಒಂದಾಗ್ತಾರೆ. ಟಿಕೆಟ್ ವಿಚಾರದಲ್ಲಿ ಏನೇ ಬಂಡಾಯ ಇದ್ದರೂ ಅದು ಶಮನವಾಗಿ ಚುನಾವಣೆಯಲ್ಲಿ ಒಂದು ಟೀಂನಂತೆ ಎಲ್ಲರೂ ಒಟ್ಟಾಗಿ ಅಭ್ಯರ್ಥಿಯನ್ನ ಗೆಲ್ಲಿಸುತ್ತಾರೆ ಎಂದರು.

click me!