ಮಂಡ್ಯಕ್ಕೆ ಬಂದು ಲೋಕಸಭೆ ಸ್ಪರ್ಧೆ ತೀರ್ಮಾನ ತಿಳಿಸ್ತೇನೆ; ಅಂಬರೀಶ್ ಅಭಿಮಾನಿಗಳಿಗೆ ಸಂಸದೆ ಸುಮಲತಾ ಸಾಂತ್ವನ

By Sathish Kumar KHFirst Published Mar 30, 2024, 5:21 PM IST
Highlights

ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಆದರೆ, ಮುಂದಿನ 2 ದಿನಗಳಲ್ಲಿ ಮಂಡ್ಯಕ್ಕೆ ಬಂದು ನನ್ನ ತೀರ್ಮಾನ ತಿಳಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಬೆಂಗಳೂರು (ಮಾ.30): ಮಂಡ್ಯದಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕು. ನಾವು ನಿಮ್ಮ ಬೆಂಬಲಕ್ಕಿದ್ದು ಪ್ರಚಾರ ಮಾಡಿ ಗೆಲ್ಲಿಸುತ್ತೇವೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಆದರೆ, ನೀವು ತಾಳ್ಮೆ ಕಳೆದುಕೊಳ್ಳಬೇಡಿ ನಿಮ್ಮೊಂದಿಗೆ ನಾನಿದ್ದೇನೆ. ಮುಂದಿನ 2 ದಿನಗಳಲ್ಲಿ ಮಂಡ್ಯಕ್ಕೆ ಬಂದು ನಾನೇ ಚುನಾವಣೆ ಸ್ಪರ್ಧೆಯ ಬಗ್ಗೆ ತೀರ್ಮಾನವನ್ನು ತಿಳಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಬೆಂಗಳೂರಿನ ಸುಮಲತಾ ಅಂಬರೀಶ್ ಮನೆಗೆ ಆಗಮಿಸಿದ ಮಂಡ್ಯದ ಬೆಂಬಲಿಗರೊಂದಿಗೆ ಚರ್ಚೆ ಮಾಡಿದ ಬಳಿಕ ಮಾತನಾಡಿದ ಸಂಸದೆ ಸುಮತಲಾ ಅಂಬರೀಶ್ ಅವರು, ಮಂಡ್ಯ ಜಿಲ್ಲೆಯ ಅಭಿಮಾನಿಗಳು ಇಲ್ಲಿಗೆ ಬರಬೇಕು, ನಮ್ಮ ಅನಿಸಿಕೆ ಹಂಚಿಕೊಳ್ಳಬೇಕು ಅಂತ ರಿಕ್ವೇಸ್ಟ್ ಮಾಡಿದ್ದರು. ಆದರೆ, ನಾನೇ ಅವರು ಬೆಂಗಳೂರಿಗೆ ಬರುವುದನ್ನು ತಡೆದಿದ್ದೆನು. ಇವತ್ತು ಎಲ್ಲರೂ ಬಂದು ಅವರವರ ಅನಿಸಿಕೆ ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ನಾನು ಜನರ ಅಭಿಪ್ರಾಯ ಪಡೆದೆ ನಿರ್ಧಾರ ತೆಗೆದುಕೊಂಡಿದ್ದೆನು. ಇವತ್ತು ಮಂಡ್ಯದಿಂದ ಬಂದವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ನಾನು ಆಪ್ತ ಬಳಗದಲ್ಲಿ ಚರ್ಚಿಸಿ ಮಂಡ್ಯದಲ್ಲಿಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. 

ದೇಶಕ್ಕಿಂತ ಮೋದಿ ಮಾಂತ್ರಿಕ ಶಕ್ತಿ ದೊಡ್ಡದು, ಅನ್ನೋ ಭ್ರಮೆಯಲ್ಲಿ ಬಿಜೆಪಿ ತೇಲ್ತಾ ಇದೆ; ಮಾಜಿ ಶಾಸಕಿ ತೇಜಸ್ವಿನಿ ಗೌಡ

2019ರಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲು ಆಗಲ್ಲ ಅಂತ ಹೇಳಿದ್ದರು. ಇವತ್ತು ಕೂಡ ಅದೇ ರೀತಿ ನಿರ್ಧಾರ ಮಾಡಿದೆ. ನಾನು ಬಿಜೆಪಿಗೆ ಬೆಂಬ,ಬಿಜೆಪಿ ಮಂಡ್ಯವನ್ನು ಉಳಿಸಿಕೊಳ್ಳುತ್ತೆ ಅಂತ ಅಂದುಕೊಂಡಿದ್ದೆ. ಆದರೆ, ಈಗ ಮೈತ್ರಿ ಧರ್ಮದ ಪಾಲನೆ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಟಿಕೆಟ್‌ ಬಿಟ್ಟುಕೊಟ್ಟಿದೆ. ನಮ್ಮ ನಡೆ ಏನು, ನಮ್ಮ ಭವಿಷ್ಯ ಏನು? ಬಿಜೆಪಿ ಮುಖಂಡರಿಗೆ  ನಮ್ಮ ಭವಿಷ್ಯ ಅಲ್ಲವೇ? ಮಂಡ್ಯದಲ್ಲಿ ನಮ್ಮನ್ನು ನಂಬಿಕೊಂಡು ಲಕ್ಷಾಂತರ ಜನ ಇದ್ದಾರೆ, ಅವರ ಭವಿಷ್ಯ ಏನು ಅನ್ನೋದು ಮುಖ್ಯ? ಎಂದು ಪ್ರಶ್ನೆ ಮಾಡಿದ್ದೆನು.

ಇದಕ್ಕೆ ನಮಗೆ ಸಹಕಾರ ಕೊಟ್ಟರೆ, ಉನ್ನತ ಮಟ್ಟದಲ್ಲಿ ಸ್ಥಾನಮಾನ ಸಿಗುತ್ತದೆ. ಹೈಕಮಾಂಡ್ ನಲ್ಲಿ ನನಗೆ ಸೂಚನೆ ಸಿಕ್ಕಿದೆ ಅಂತ ವಿಜಯೇಂದ್ರ ಹೇಳಿದ್ದಾರೆ. ನಾನು ಅಮಿತ್ ಶಾ ಅವರನ್ನ ಭೇಟಿಯಾದಾಗಲೂ  ಕಾರ್ಯಕರ್ತರ ಗತಿ ಏನು ಅಂತ ಕೇಳಿದ್ದೆ. ಅವತ್ತು ನಿಮ್ಮ ಕಾರ್ಯಕರ್ತರನ್ನು ನಾನು ಕೈಬಿಡಲ್ಲ ಅಂತ ಹೇಳಿದ್ದರು. ನನ್ನ ನಿರ್ಧಾರ ಯಾವ ಪಕ್ಷಕ್ಕೆ ಅನುಕೂಲ ಆಗುತ್ತೆ ಅನ್ನೋದ್ರ ಮೇಲೆ ನಾನು ನಿರ್ಧಾರ ಮಾಡಲ್ಲ. ಬಿಜೆಪಿ ಸೇರಿ ಅಂತ ಆಹ್ವಾನ ಬಂದಿದೆ ಎಂದು ಮಾಹಿತಿ ನೀಡಿದರು.

ಚುನಾವಣೆ ಬಂದಾಗೆಲ್ಲಾ ಕುಮಾರಸ್ವಾಮಿಗೆ ಹಾರ್ಟ್ ಪ್ಲಾಬ್ಲಂ: ರಮೇಶ್ ವ್ಯಂಗ್ಯ

ಮಂಡ್ಯದಲ್ಲಿ ರಾಧ ಮೋಹನ್ ದಾಸ್ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಅವರ ಜೊತೆ ನಾನು ಇನ್ನು ಮಾತನಾಡಿಲ್ಲ. ಬೆಂಬಲಿಗರ ಸಭೆಯಲ್ಲಿ ಈ ರೀತಿ ನಿರ್ಧಾರವಾಗಿದೆ ನೀವು ಏನು ಹೇಳ್ತಿರಾ ಅಂತ ಕೇಳುತ್ತೇನೆ. ಎಲ್ಲ ಪಕ್ಷಕ್ಕೆ ಸೇರಲು ಆಹ್ವಾನ ಬಂದಿದೆ. ಬಿಜೆಪಿ ಪರವಾಗಿ ವಿಧಾನಸಭೆ ಎಲೆಕ್ಷನ್ ನಲ್ಲಿ ನಾನು ಬಿಜೆಪಿ ಪರವಾಗಿ ಕೆಲಸ ಮಾಡಿದ್ದೆ. ಸುಮಲತಾಗೆ ಟಿಕೆಟ್ ಸಿಗಲಿಲ್ಲ ಅಂದ್ರೆ ನನಗೆ ಟಿಕೆಟ್ ಕೇಳುತ್ತಿದ್ದೇ ಎಂಬ ನಾರಾಯಣ ಗೌಡ ಹೇಳಿದ್ದಾರೆ. ನಾರಾಯಣ ಗೌಡರಿಗೆ ಎಲ್ಲವೂ ಗೊತ್ತಿದೆ. ಅವರು ಮೊದಲಿನಿಂದಲೂ ನಮ್ಮ ಜೊತೆಯಲ್ಲಿಯೇ ಇದ್ದರು. ಅವರ ಈಗ ಮೈನ್ಡ್ ಚೇಂಜ್ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

click me!