ಖರ್ಗೆ ತವರು ಕ್ಷೇತ್ರದಿಂದಲೇ ಮೋದಿ ರಣಕಹಳೆ; ಕಲಬುರಗಿಯಲ್ಲಿಂದು ರೋಡ್ ಶೋ

By Ravi JanekalFirst Published Mar 16, 2024, 12:53 PM IST
Highlights

ಕಲಬುರಗಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಲಬುರಗಿ ವಿಮಾನ ನಿಲ್ದಾಣದ ಬಳಿ ಪೊಲೀಸರು ಹೈಅಲರ್ಟ್ ಆಗಿದ್ದು, ವಿಮಾನ ನಿಲ್ದಾಣದಲ್ಲಿ ಶ್ವಾನ ದಳ, ಬಾಂಬ್ ಪತ್ತೆ ದಳ ತಂಡದಿಂದ ತಪಾಸಣೆ ನಡೆಸಲಾಗಿದೆ.

ಕಲಬುರಗಿ (ಮಾ.16): ಕಲಬುರಗಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಲಬುರಗಿ ವಿಮಾನ ನಿಲ್ದಾಣದ ಬಳಿ ಪೊಲೀಸರು ಹೈಅಲರ್ಟ್ ಆಗಿದ್ದು, ವಿಮಾನ ನಿಲ್ದಾಣದಲ್ಲಿ ಶ್ವಾನ ದಳ, ಬಾಂಬ್ ಪತ್ತೆ ದಳ ತಂಡದಿಂದ ತಪಾಸಣೆ ನಡೆಸಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರು ಕ್ಷೇತ್ರ ಕಲಬುರಗಿಯಿಂದ ಲೋಕಸಭಾ ಚುನಾವಣೆಯ ಪ್ರಚಾರ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕೆ ಭಾಗವಹಿಸಲು ಕಲಬುರಗಿ ವಿಮಾನ ನಿಲ್ದಾಣಕ್ಕ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ಸೇನಾ ಹೆಲಿಕಾಪ್ಟರ್ ಮೂಲಕ ಪೊಲೀಸ್ ಮೈದಾನಕ್ಕೆ ತೆರಳಿದ್ದಾರೆ. ಸಮಾವೇಶ ಮುಗಿದ ಬಳಿಕ ಕಲಬುರಗಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಬಳಿ ಪೊಲೀಸರು ಕಟ್ಟೆಚ್ಚರ. ಅಲ್ಲದೇ ಪ್ರಧಾನಿ ಭಾಗವಹಿಸುವ ಸಮಾವೇಶ, ರೋಡ್ ಶೋ ನಡೆಯಲಿ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

ಮೋದಿ ಸರ್ಕಾರ ಕಾರ್ಮಿಕ ಯೋಜನೆಗಳನ್ನು ದುರ್ಬಲಗೊಳಿಸಿದೆ, ನರೇಗಾ ಹಣವೂ ಪಾವತಿಯಾಗ್ತಿಲ್ಲ: ಖರ್ಗೆ ಆರೋಪ

ಸಮಾವೇಶದಲ್ಲಿ ಭರ್ಜರಿ ಭೋಜನ:

ಮೋದಿ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಕಲಬುರಗಿ ನಗರದ ಆಳಂದ ರಸ್ತೆಯಲ್ಲಿ, ಅಫಜಲಪುರ ರಸ್ತೆ, ಸೇಡಂ ರೋಡ್, ಶಹಾಬಾದ್ ರೋಡ್‌ ಹೀಗೆ ಆರು ಕಡೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಊರುಗಳಿಂದ ಬರುವ ಕಾರ್ಯಕರ್ತರು ಕಲಬುರಗಿ ಪ್ರವೇಶಕ್ಕೂ ಮುನ್ನ ಊಟದ ವ್ಯವಸ್ಥೆ ಮಾಡಲಾಗಿದೆ. ಊಟ ಮಾಡಿಯೇ ಕಾರ್ಯಕ್ರಮದ ವೇದಿಕೆಯತ್ತ ತೆರಳುತ್ತಿರುವ ಕಾರ್ಯಕರ್ತರು. 

ನಾಳೆ ಕಲಬುರಗಿಗೆ ಪ್ರಧಾನಿ ಮೋದಿ, ಮಿಸ್ಟರ್ ಬಾಂಡ್‌ಗೆ 6 ಪ್ರಶ್ನೆ ಎಂದ ಪ್ರಿಯಾಂಕ್ ಖರ್ಗೆ!

click me!