ಲೋಕಸಭಾ ಚುನಾವಣೆ ಸಮೀಪಿಸಿದೆ. ಹಾಗಾಗಿ ಇಂದು ಕುಣಿಗಲ್ ನಲ್ಲಿ ಸಭೆಮಾಡಿ ಈಗ ಚನ್ನಪಟ್ಟಣ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ. ಕಾರ್ಯಕರ್ತರನ್ನು ಸಜ್ಜುಗೊಳಿಸಿ ಮೈತ್ರಿ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಚನ್ನಪಟ್ಟಣ (ಮಾ.22): ಲೋಕಸಭಾ ಚುನಾವಣೆ ಸಮೀಪಿಸಿದೆ. ಹಾಗಾಗಿ ಇಂದು ಕುಣಿಗಲ್ ನಲ್ಲಿ ಸಭೆಮಾಡಿ ಈಗ ಚನ್ನಪಟ್ಟಣ ಕಾರ್ಯಕರ್ತರ ಸಭೆ ಮಾಡುತ್ತಿದ್ದೇನೆ. ಕಾರ್ಯಕರ್ತರನ್ನು ಸಜ್ಜುಗೊಳಿಸಿ ಮೈತ್ರಿ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಇಂದು ಚನ್ನಪಟ್ಟಣ ತಾಲೂಕು ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಡಾ.ಮಂಜುನಾಥ್ ಸರಳ, ಸಜ್ಜನಿಕೆಯ ವ್ಯಕ್ತಿ. ಸುಮಾರು 8 ಲಕ್ಷ ಜನಕ್ಕೆ ಹೃದಯ ಆಪರೇಷನ್ ಮಾಡಿದ್ದಾರೆ. ಅವರ ಸೇವೆ ಬಗ್ಗೆ ಜನ ಮಾತನಾಡ್ತಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಅವರು ಗೆಲುವು ನಿಶ್ಚಿತ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ; ಸಂತಸ ಹಂಚಿಕೊಂಡ ಪುತ್ರ ನಿಖಿಲ್ ಕುಮಾರಸ್ವಾಮಿ
ಎಚ್‌ಡಿಕೆ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿ:
ಕುಮಾರಣ್ಣ ಅವರ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸ್ವತಃ ಡಾ.ಮಂಜುನಾಥ್ ಹಾಗೂ ಹಿರಿಯ ವೈದ್ಯ ಸಾಯಿ ಸತೀಶ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಆಗಿದೆ. ಮೂರುವರೆ ಗಂಟೆಗಳ ಕಾಲ ಆಪರೇಷನ್ ನಡೆದಿದೆ. ರಾಜ್ಯದ ಜನರ ಆಶೀರ್ವಾದದಿಂದ ಗುಣಮುಖರಾಗಿದ್ದಾರೆ. ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಲಿದ್ದಾರೆ. ಮುಂದಿನ ತಿಂಗಳು 1 ತಾರೀಖಿನ ಒಳಗೆ ಚುನಾವಣಾ ಕಾರ್ಯಕ್ರಮಗಳಲ್ಲಿ ಕುಮಾರಣ್ಣ ಭಾಗಿಯಾಗ್ತಾರೆ ಎಂದು ತಿಳಿಸಿದರು. ಇದೇ ವೇಳೆ ಡಾ. ಮಂಜುನಾಥ ಅವರ ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ ವಿಚಾರಕ್ಕೆ ಸಂಬಂಧ ಮಾತನಾಡಿದ ನಿಖಿಲ್, ಕುಮಾರಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸಭೆ ಮಾಡಿ ನಿರ್ಧರಿಸಲಾಗುವುದು ಎಂದರು.
ಮಂಡ್ಯದಿಂದ ಹೆಚ್ಡಿಕೆ ಸ್ಪರ್ಧೆ ಎಂಬ ಮಾಜಿ ಸಚಿವ ಪುಟ್ಟರಾಜು ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್, ನಿನ್ನೆ ಮೇಲುಕೋಟೆ ವೈರಮುಡಿ ಉತ್ಸವದಲ್ಲಿ ಪುಟ್ಟರಾಜಣ್ಣ ಹೇಳಿದ್ದನ್ನ ಗಮನಿಸಿದ್ದೇನೆ. ಅವರ ಮನಸ್ಸಿನ ಭಾವನೆಯನ್ನ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ದೇವೇಗೌಡರು, ಕುಮಾರಣ್ಣ ಹಾಗೂ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ತೀರ್ಮಾನ ಮಾಡಿಲ್ಲ. ಹಲವು ವರ್ಷಗಳಿಂದ ಚನ್ನಪಟ್ಟಣದಲ್ಲಿ ನಮ್ಮ ಕಾರ್ಯಕರ್ತರು ನೋವನ್ನ ಅನುಭವಿಸಿದ್ರು. ಹಾಗಾಗಿ ನಾಲ್ಕು ಬಾರಿ ರಾಮನಗರದಲ್ಲಿ ಸ್ಪರ್ಧಿಸಿದ್ರೂ ಕೂಡಾ ಚನ್ನಪಟ್ಟಣಕ್ಕೆ ಬಂದ್ರು. ಇಲ್ಲಿನ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆಯಬೇಕು. ಎಲ್ಲರ ಜೊತೆ ಕೂತು ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡ್ತೇವೆ. ಯಾರೇ ನಿಂತ್ರೂ ಕುಮಾರಣ್ಣನೇ ಅಭ್ಯರ್ಥಿ ಅನ್ನೋದು ನಮ್ಮ ಭಾವನೆ. ಮಂಡ್ಯ ಜಿಲ್ಲೆ ಜನತೆ ಅವರ ಮೇಲೆ ಪ್ರೀತಿ, ಭರವಸೆ ಇಟ್ಟಿದ್ದಾರೆ. ಹಾಗಾಗಿ ಇದು ಸೂಕ್ಷ್ಮವಾದ ವಿಷಯ. ಚನ್ನಪಟ್ಟಣ, ರಾಮನಗರ ಜನರ ಅಭಿಪ್ರಾಯ ಪಡೆದ ಬಳಿಕ ಪಕ್ಷ ತೀರ್ಮಾನ ಮಾಡಲಾಗುತ್ತೆ ಎಂದರು.
ಕಾಂಗ್ರೆಸ್ ಕುಕ್ಕರ್ ಬಾಂಬ್ ಸಿಡಿಸಿದ ನಿಖಿಲ್:
ಕಾಂಗ್ರೆಸ್ ಕಳೆದ 20 ದಿನಗಳಿಂದ ಸುಮಾರು 10 ಲಕ್ಷ ಕುಕ್ಕರ್ ಅರ್ಡರ್ ಮಾಡಿದ್ದಾರೆ. ಈಗಾಗಲೇ 4ರಿಂದ 5ಲಕ್ಷ ಕುಕ್ಕರ್ ಯಶಸ್ವಿಯಾಗಿ ಹಂಚಿದ್ದಾರೆ. ಮೊನ್ನೆ ಸೀರೆ, ತವಾಗಳನ್ನು ಕೂಡಾ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕಾಂಗ್ರೆಸ್ ಮತದಾರರಿಗೆ ಆಮಿಷಗಳನ್ನ ಒಡ್ಡಿ ಚುನಾವಣೆ ನಡೆಸ್ತಿದೆ. ಪ್ರಜ್ಞಾವಂತ ಮತದಾರರು ಈ ಬಗ್ಗೆ ಯೋಚನೆ ಮಾಡಿ ಮತಹಾಕಲಿದ್ದಾರೆ. ಕಾಂಗ್ರೆಸ್ ಗಿಫ್ಟ್ ಪಾಲಿಟಿಕ್ಸ್ ಗೆ ನಿಖಿಲ್ ಕುಮಾರಸ್ವಾಮಿ ಟಕ್ಕರ್ ನೀಡಿದರು.
ಇನ್ನು ಕಾಂಗ್ರೆಸ್ ನಿಂದ ಆಪರೇಷನ್ ಹಸ್ತ ವಿಚಾರಕ್ಕೆ ತಿರುಗೇಟು ನೀಡಿದ ನಿಖಿಲ್ ಕುಮಾರಸ್ವಾಮಿ, ನಮ್ಮ ಪಕ್ಷದ ಕಾರ್ಯಕರ್ತರು ಯಾರೂ ವೀಕ್ ಮೈಂಡೆಡ್ ಅಲ್ಲ.
ಒಂದಷ್ಟು ಜನ ನಮ್ಮ ಚುನಾವಣೆಯಲ್ಲಿ ಜೆಡಿಎಸ್ ಸವಲತ್ತು ಪಡೆದು ಅನ್ಯಾಯ ಮಾಡಿದ್ರು. ಆದರೆ ಇದು ಚುನಾವಣೆಗಳಲ್ಲಿ ಸಹಜ. ಒಂದು ಐದತ್ತು ಪರ್ಸೆಂಟ್ ಜೊತೆಯಲ್ಲೇ ಇದ್ದು ಮೋಸ ಮಾಡ್ತಾರೆ, ಇವರು ನನ್ನ ಚುನಾವಣೆಯಲ್ಲೇ ಕಾಂಗ್ರೆಸ್ ಗೆ ಒಂದು ಹೆಜ್ಜೆ ಇಟ್ಟಿದ್ರು. ಇದೀಗ ಎರಡೂ ಕಾಲುಗಳನ್ನು ಕಾಂಗ್ರೆಸ್ ಗೆ ಇಟ್ಟಿದ್ದಾರೆ. ಆದರೆ ಪಕ್ಷ ಕಟ್ಟಿ ಬೆಳೆಸಿರೋ ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಜೊತೆಯಲ್ಲೇ ಇದ್ದಾರೆ. ಅಂಥವರು ಕಾಂಗ್ರೆಸ್ ಲಕ್ಷ ಲಕ್ಷ ಕೊಟ್ರೂ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ ಎಂದರು.
ಕರ್ನಾಟಕದಿಂದ ಹೆಚ್ಚು ಸ್ಥಾನ ಗೆದ್ದು ಮೋದಿಗೆ ಗಿಫ್ಟ್ ಕೊಡುತ್ತೇವೆ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡದಂತೆ ಪಟ್ಟು!
ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಸ್ಪರ್ಧೆ ಮಾಡದಂತೆ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕಾರ್ಯಕರ್ತರು ಆಗ್ರಹಿಸಿದರು. ನೀವೇ ಮಂಡ್ಯದಿಂದ ಸ್ಪರ್ಧೆ ಮಾಡಿ. ಕುಮಾರಣ್ಣ ಚನ್ನಪಟ್ಟಣದ ರಾಜಕಾರಣದಲ್ಲೇ ಇರಬೇಕು. ಯಾವುದೇ ಕಾರಣಕ್ಕೂ ಕುಮಾರಣ್ಣ ಚನ್ನಪಟ್ಟಣ ಬಿಡಕೂಡದೆಂದು ಪಟ್ಟು ಹಿಡಿದ ಕಾರ್ಯಕರ್ತರು. ನಾವು ಹೋರಾಟ ಮಾಡಿ ಕುಮಾರಣ್ಣನನ್ನ ಚನ್ನಪಟ್ಟಣದಲ್ಲಿ ಗೆಲ್ಲಿಸಿದ್ದೇವೆ. ಇದೀಗ ಕುಮಾರಣ್ಣ ಮಂಡ್ಯದಿಂದ ಸ್ಪರ್ಧೆ ಮಾಡಿ ಕ್ಷೇತ್ರ ಬಿಡೋದನ್ನ ನಾವು ಒಪ್ಪುವುದಿಲ್ಲ. ಕುಮಾರಸ್ವಾಮಿ ರಾಜ್ಯ ರಾಜಕರಾಣದಲ್ಲೆ ಇರಲಿ ಎಂದು ಪಟ್ಟು ಹಿಡಿದಿರುವ ಕಾರ್ಯಕರ್ತರು.