ಬಿಜೆಪಿ 5ನೇ ಪಟ್ಟಿ ಬಿಡುಗಡೆ: ಉತ್ತರ ಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕೆ, ಹೇಳಿದ್ದೇನು?

Published : Mar 24, 2024, 11:30 PM ISTUpdated : Mar 24, 2024, 11:37 PM IST
ಬಿಜೆಪಿ 5ನೇ ಪಟ್ಟಿ ಬಿಡುಗಡೆ: ಉತ್ತರ ಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಕಣಕ್ಕೆ, ಹೇಳಿದ್ದೇನು?

ಸಾರಾಂಶ

ನನ್ನ ಮೇಲೆ ವಿಶ್ವಾಸವಿಟ್ಟು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಕ ನನಗೆ ಅವಕಾಶ ನೀಡಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಹಾಗೂ ರಾಜ್ಯ ನಾಯಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕಾರವಾರ, ಉತ್ತರಕನ್ನಡ (ಮಾ.24): ನನ್ನ ಮೇಲೆ ವಿಶ್ವಾಸವಿಟ್ಟು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಕ ನನಗೆ ಅವಕಾಶ ನೀಡಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಹಾಗೂ ರಾಜ್ಯ ನಾಯಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಟಿಕೆಟ್ ಸಿಗುತ್ತಿದ್ದಂತೇ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡುಬಂತು. ತಾಯಿಯ ಆಶೀರ್ವಾದ ಪಡೆದ ಕಾಗೇರಿ, ಪತ್ನಿ, ತಾಯಿ, ಪುತ್ರನಿಗೆ ಸಿಹಿತಿನ್ನಿಸಿದರು ಬಳಿಕ ಏಷಿಯಾನೆಟ್ ಸುವರ್ಣನ್ಯೂಸ್‌ ಪ್ರತಿನಿಧಿಯೊಂದಿಗೆ ಮಾತನಾಡಿದ ಕಾಗೇರಿ, ಉತ್ತರಕನ್ನಡ ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಬಾರಿ ಮತ್ತೆ ಗೆಲುವು ನಿಶ್ಚಿತ. ಟಿಕೆಟ್ ಕೊಡುವ ವಿಚಾರವಾಗಿ ಬಹಳಷ್ಟು ಚರ್ಚೆ ಆಗಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಂದಲೂ ಅಭಿಪ್ರಾಯ ಪಡೆದು ಟಿಕೆಟ್ ನಿರ್ಧರಿಸಲಾಗಿದೆ. ಟಿಕೆಟ್ ಕೊಡ್ತೀವಿ ರೆಡಿ ಇರಿ ಅಂತಾ ನನಗೆ ಯಾರೂ ಹೇಳಿರಲಿಲ್ಲ. ಟಿವಿಯಲ್ಲಿ ನೋಡಿಯೇ ನನಗೆ ಗೊತ್ತಾಗಿದೆ. ಹಾಲಿ ಸಂಸದ ಅನಂತ ಕುಮಾರ ಹೆಗಡೆಯವರನ್ನು ನಾನು ಭೇಟಿ ಆಗುತ್ತೇನೆ. ಅವರ ಅನುಭವ, ಸಹಕಾರದ ಅವಶ್ಯಕತೆ ನನಗಿದೆ. ನಾನು ಮತ್ತು ಅನಂತ ಕುಮಾರ್ ಹೆಗಡೆ ಜೋಡೆತ್ತಿನಂತೆ ಕೆಲಸ ಮಾಡುತ್ತೇವೆ. ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡ್ತೇವೆ. ರಾಷ್ಟ್ರೀಯತೆ, ಹಿಂದುತ್ವ ಜೊತೆಗೆ ಅಭಿವೃದ್ದಿಯನ್ನು ಮಾಡುವ ಗುರಿ ನನ್ನದು ಎಂದರು.

ಬೆಳಗಾವಿಯಿಂದ ಜಗದೀಶ ಶೆಟ್ಟರ್ ಕಣಕ್ಕೆ; 'ಕ್ಷಮಿಸಿ ಮೋದೀಜಿ' ಎಂದ ಬಿಜೆಪಿ ಮುಖಂಡ!

ಕೇಂದ್ರದ ಮುಖಂಡರು ಕಳೆದ 10 ವರ್ಷದಲ್ಲಿ ದೇಶವನ್ನು ಹೇಗೆ ನಡೆಸಿದ್ದಾರೆಂದು ಜನರಿಗೆ ಗೊತ್ತಿದೆ. ಕೇಂದ್ರ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಾನೂ ಒಬ್ಬನಾಗಿರ್ತೇನೆ. ಶಾಸಕನಿದ್ದಾಗ ಅಭಿವೃದ್ಧಿಯನ್ನೇ ಗುರಿಯನ್ನಾಗಿಸಿದ್ದೆ, ಮುಂದೆಯೂ ಅಭಿವೃದ್ಧಿಯನ್ನೇ ಗುರಿಯನ್ನಾಗಿಸಿ ಕೆಲಸ ಮಾಡ್ತೇನೆ. ಪಕ್ಷದ ವಿಚಾರವನ್ನು ಜನರಿಗೆ ತಿಳಿಸಿ ಅವರ ವಿಶ್ವಾಸ ಗಳಿಸುವ ಪ್ರಯತ್ನ ಮಾಡ್ತೇನೆ ಎಂದರು.

ಬಿಜೆಪಿ 5ನೇ ಪಟ್ಟಿ ಬಿಡುಗಡೆ; ರಾಯಚೂರಿನಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಕಣಕ್ಕೆ!

ಕಾಂಗ್ರೆಸ್ ಗ್ಯಾರಂಟಿಯಿಂದ ಜನರು ವಿಶ್ವಾಸ ಕಳೆದುಕೊಂಡು, ಮೋದಿಯವರ ಗ್ಯಾರಂಟಿಯನ್ನು ಜನರು ಒಪ್ಪುತ್ತಿದ್ದಾರೆ. ಜಿಲ್ಲೆಯ ಜನ ಜೀವನದ ಜತೆ ಕೆಲಸ ಮಾಡಿದ್ದು, ಜಿಲ್ಲೆಯ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದೆ. ಸಂಸದ ಅನಂತ ಕುಮಾರ್ ಹೆಗಡೆಯವರು ಕ್ಷೇತ್ರವನ್ನು ಸುದೀರ್ಘವಾಗಿ ಪ್ರತಿನಿಧಿಸಿದವರು. ಅವರಿಗೆ ಅಪಾರ ಅನುಭವವಿದೆ, ಕೇಂದ್ರ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಒಂದೇ ಪಕ್ಷದಲ್ಲಿರುವವರು ಒಟ್ಟಿಗೆ ಇದ್ದು ಕೆಲಸ ಮಾಡಿರುವವರು.  ನಾವು ಜತೆ ಜತೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ವಿಚಾರವನ್ನು ಜನರಿಗೆ ತಲುಪಿಸುತ್ತೇವೆ. ಪಕ್ಷದ ಹಾಗೂ ಚುನಾವಣಾ ಕಾರ್ಯಗಳನ್ನು ಜೋಡೆತ್ತುಗಳಂತೆ ಮಾಡ್ತೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ