ಜಾತಿ ಗಣತಿಗೆ ಶಾಮನೂರು ಶಿವಶಂಕರಪ್ಪ ತೀವ್ರ ವಿರೋಧ, ನಾವು ಸುಮ್ಮನೆ ಕೂರಲ್ಲ ಎಂದ ಕೈ ನಾಯಕ

By Suvarna NewsFirst Published Mar 1, 2024, 1:25 PM IST
Highlights

ಜಾತಿ ಗಣತಿ ವರದಿ ಬಗ್ಗೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಫೆ.1): ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆಯಾಗುತ್ತಿದ್ದಂತೆಯೇ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದು, ಆಡಳಿತ ಪಕ್ಷ ಕಾಂಗ್ರೆಸ್‌ ನಾಯಕರಿಂದಲೇ ಈ ವರದಿ ಬಗ್ಗೆ ಭಿನ್ನ ಅಭಿಪ್ರಾಯಗಳು ಕೇಳಿಬಂದಿವೆ. 

ಈ ಬಗ್ಗೆ  ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ವರದಿ ಏನು ಮಾಡುತ್ತೆ ಅಂತ ನೋಡುತ್ತೇವೆ. ನಾವು ಸುಮ್ಮನೆ ಕೂರಲ್ಲ.   ಅಹಿಂದ ಜನರು ಜಾಸ್ತಿ ಇದ್ದಾರೆ ಅಂತ ಇವತ್ತಿನ ಪತ್ರಿಕೆ ನೋಡಿದೆ. ಎಲ್ಲರಗಿಂತ ವೀರಶೈವರು ಹೆಚ್ಚಾಗಿದ್ದಾರೆ. ವೈಜ್ಞಾನಿಕವಾಗಿ ವರದಿ ಮಾಡಿಸಲಿ. 9 ವರ್ಷಗಳ ಹಿಂದಿನ ವರದಿ ಇದು ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ.

ಚಿರತೆ ಗಣತಿ ವರದಿ: ರಾಜ್ಯದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ: ದೇಶದಲ್ಲೇ 3ನೇ ಸ್ಥಾನ

ಉದ್ದೇಶಪೂರ್ವಕವಾಗಿ ವೀರಶೈವರನ್ನು ಕಡಿಮೆ ತೋರಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದ್ರೆ ಹಾಗೆ ಅನಿಸುತ್ತಿದೆ. ಅವಶ್ಯಕತೆ ಬಿದ್ರೆ ವೀರಶೈವ ಮಹಾಸಭಾದಿಂದ ಜನಗಣತಿ ಮಾಡಿಸುತ್ತೇವೆ. ಈ ವರದಿಯಿಂದ ಜಾತಿಗಳ ನಡುವೆ ಸಂಘರ್ಷ ಆಗುತ್ತೆ. ಬೇಕು ಅಂತೆಲೇ ಚೂ ಬಿಡುತ್ತಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. 

ಕಾಂತರಾಜು ಮನೆಯಲ್ಲಿ ಕೂತು ವರದಿ ಬರೆದಿದ್ದು. ಸರ್ವೆ ಮಾಡಲು ಸರಿಯಾಗಿ ಮನೆಗಳಿಗೆ ಭೇಟಿ ನೀಡಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನೆಡೆ ಬಗ್ಗೆ ಈಗ ಹೇಳಲ್ಲ. ಈ ಹಿಂದೆ ಲಿಂಗಾಯತ ವಿಚಾರದಲ್ಲಿ ಹಿನ್ನೆಡೆಯಾಗಿತ್ತು. ವರದಿ ಸ್ವೀಕಾರ ಮಾಡಿದ್ದು ತಪ್ಪಲ್ಲ. ಆದ್ರೆ ಅಂಗೀಕಾರ ‌ಮಾಡಬಾರದು ಎಂದಿದ್ದಾರೆ.

ರೈತರಿಗಿಲ್ಲದ ನೀರು ಫಾರ್ಮ್ ಹೌಸ್‌ಗೆ, ಪಂಪ್‌ ಸೆಟ್‌ ಮೂಲಕ ಕಾವೇರಿ ನೀರು ಕದಿಯುತ್ತಿರುವ ಪ್ರಭಾವಿಗಳು!

ಮುಂದುವರೆದು ಮಾತನಾಡಿ ಈಗಲೂ ಹೇಳ್ತೇನೆ. ಈ ವರದಿ ಮನೆಯಲ್ಲೇ ಕೂತು ಮಾಡಿದ್ದಾರೆ ಎಂದರು. ಕಾಂಗ್ರೆಸ್ ಗೆ ಸಮಸ್ಯೆ ಆಗುತ್ತದೆಯಾ ಎಂಬ ಪ್ರಶ್ನೆಗೆ ನಾನು ಈಗ ಕೂಲಂಕುಷವಾಗಿ ಹೇಳೋದಕ್ಕೆ ಹೋಗಲ್ಲ ಎಂದರು. ನಿಮ್ಮ ಮಾತಿಗೆ ಸಿಎಂ ಮನ್ನಣೆ ಕೊಡಬೇಕಿತ್ತಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ನಮ್ಮ ಅಭಿಪ್ರಾಯಗಳಿಗೆ ಎಲ್ಲಪ್ಪ ಮನ್ನಣೆ ಕೊಡ್ತಾರೆ ಎಂದು ಶಾಮನೂರು  ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಜಾತಿ ಜಾತಿಗಳ ನಡುವೆ ಸಂಘರ್ಷ ಆಗುತ್ತದೆ. ಜಾತಿ ಜಾತಿಗಳ ನಡುವೆ ಅವರು ಛೂ ಬಿಡ್ತಿದ್ದಾರೆ. ನಾವು ಎಸ್.ಸಿ ಎಸ್.ಟಿ ವಿರುದ್ದವಿಲ್ಲ. ಆದರೆ ನಮ್ಮ ಸಂಖ್ಯೆ ಡಬಲ್ ಇದೆ. ಅಗತ್ಯ ಬಿದ್ದರೆ ನಾವೂ ಖಾಸಗಿಯಾಗಿ ಸರ್ವೆ ಮಾಡಿಸುತ್ತೇವೆ. ಉಪ ಪಂಗಡ ಎಲ್ಲ ಸೇರಿ 2 ಕೋಟಿಗೂ ಹೆಚ್ಚಿದ್ದೇವೆ ಎಂದರು. ಲೋಕಸಭೆ ಚುನಾವಣೆ ಮೇಲೆ‌ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ನಗುತ್ತಲೇ ಅದನ್ನೆಲ್ಲಾ ಹೇಳೋಕಾಗಲ್ಲ ಎಂದರು.

click me!