
ಬೆಂಗಳೂರು(ಮಾ.01): ಪತಿ ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿಲ್ಲ ಎಂಬ ಕಾರಣ ನೀಡಿ ನಿವೃತ್ತ ಮಹಿಳಾ ನೌಕರರೊಬ್ಬರಿಗೆ 90 ದಿನಗಳ ಹೆರಿಗೆ ರಜೆಯ ಭತ್ಯೆ ತಡೆ ಹಿಡಿದಿದ್ದ ರಾಜ್ಯ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಶೇ.8 ರಷ್ಟು ಬಡ್ಡಿದರಲ್ಲಿ ಭತ್ಯೆ ಪಾವತಿಸಲು ತಾಕೀತು ಮಾಡಿದೆ.
ಹೆರಿಗೆ ರಜೆಯ ಭತ್ಯೆಯನ್ನು ತಡೆ ಹಿಡಿದಿದ್ದ ನಿಗಮದ ಕ್ರಮ ಆಕ್ಷೇಪಿಸಿ ನಿವೃತ್ತ ಹಿರಿಯ ಸಹಾಯಕಿ ಎ.ಆಲಿಸ್ (71) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್‌ಮಗದಂ ಅವರ ಪೀಠ ಈ ಆದೇಶ ಮಾಡಿದೆ. ಅರ್ಜಿದಾರರು ಕೆಪಿಟಿಸಿಎಲ್ ಹಿರಿಯ ಸಹಾಯಕಿಯಾಗಿ 2013ರಲ್ಲಿ ನಿವೃತ್ತರಾಗಿದ್ದರು. 1983ರಲ್ಲಿ ಸೇವೆಯಲ್ಲಿದ್ದಾಗ ಅರ್ಜಿದಾರರಿಗೆ 90 ದಿನಗಳ ಕಾಲ ಹೆರಿಗೆ ರಜೆ ಮಂಜೂರು ಮಾಡಲಾಗಿತ್ತು. ನಿವೃತ್ತಿಯ ನಂತರವೂ ಅವರಿಗೆ ಹರಿಗೆ ರಜೆಯ ಭತ್ಯೆ ಪಾವತಿಸಿರಲಿಲ್ಲ. ಇದರಿಂದ ಅವರು ಭತ್ಯೆ ಮಂಜೂರಾತಿಗೆ ಕೋರಿದ್ದರು.
ಕುಡುಕ ಅಪ್ಪ ಮಾಡಿಸಿದ ಎನ್‌ಎ ರದ್ದತಿಗೆ ಹೈಕೋರ್ಟ್ ನಕಾರ..!
ಹೆರಿಗೆ ಭತ್ಯೆ ಪಾವತಿಸಬೇಕಾದರೆ ಮೂರಕ್ಕಿಂತ ಹೆಚ್ಚಿನ ಮಕ್ಕಳಿರುವವರು ಸರ್ಕಾರಿ ಉದ್ಯೋಗಿ (ಸಂಗಾತಿ) ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಕರ್ನಾಟಕ ಸಿವಿಲ್ ಸರ್ವೀಸ್ ಕಾಯ್ದೆ-1983ರ ನಿಯಮ 130 ಹೇಳುತ್ತದೆ. ಅರ್ಜಿದಾರೆಯ ಪತಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಕೊಂಡಿಲ್ಲ ಎಂದು ತಿಳಿಸಿ ಭತ್ಯೆ ಮಂಜೂರಾತಿಗೆ ನಿರಾಕರಿಸಿ 2014ರಲ್ಲಿ ನಿಗಮ ಹಿಂಬರಹ ನೀಡಿತ್ತು. ಇದರಿಂದ 2014ರಲ್ಲಿ ಅರ್ಜಿದಾರರು ಹೈಕೋಟ್ರ್ ಮೆಟ್ಟಿಲೇರಿ, ತಾನು ಸಂತಾಹರಣ ಚಿಕಿತ್ಸೆಗೆ ಒಳಾಗಿರುವುದಾಗಿ ತಿಳಿಸಿದ್ದೆ. ಹೀಗಿದ್ದರೂ ಪತಿಯ ಕಾರಣ ನೀಡಿ ಭತ್ಯೆ ಮಂಜೂರು ಮಾಡಿಲ್ಲ ಎಂದು ಆಕ್ಷೇಪಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ