ನಾಡಿನ ಹಿರಿಯ ಪತ್ರಕರ್ತ ಬಾಗಲಕೋಟೆ ರಾಮಚಂದ್ರ ಮನಗೂಳಿ(62) ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಕಳೆದೆರಡು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತರು. ಇಂದು ಬೆಳಗ್ಗೆ 10.15ಕ್ಕೆ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಬಾಗಲಕೋಟೆ (ಮಾ.1): ನಾಡಿನ ಹಿರಿಯ ಪತ್ರಕರ್ತ ಬಾಗಲಕೋಟೆ ರಾಮಚಂದ್ರ ಮನಗೂಳಿ(62) ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ. ಕಳೆದೆರಡು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತರು. ಹಲವೆಡೆ ಚಿಕತ್ಸೆ ಪಡೆದಿದ್ದರು ಆರೋಗ್ಯ ಸುಧಾರಿಸಿರಲಿಲ್ಲ. ಇಂದು ಬೆಳಗ್ಗೆ 10.15ಕ್ಕೆ ನಿಧನರಾಗಿದ್ದಾರೆ.
ಕಳೆದ 45 ವರ್ಷಗಳಿಂದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರರಾಗಿ, ಸ್ಥಾನಿಕಕ ಸಂಪಾದಕರಾಗಿದ್ದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರು, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಅಪಾರ ಸೇವೆಯಿಂದ ಎಲ್ಲರಿಗೂ 'ರಾಮ್ ಮನಗೂಳಿ' ಎಂದೇ ಚಿರಪರಿಚಿತರಾಗಿದ್ದವರು.
undefined
ಚಾಮರಾಜನಗರ ಜಿಲ್ಲೆಗೆ ಎಂಪಿ ಆಗುವ ಕನಸು ಹೊಂದಿದ್ದ ಶಿವರಾಂ: ಸಂಸದನಾಗುವ ಕನಸು ನನಸಾಗಲಿಲ್ಲ!
ಅನೇಕ ವಿಡಂಬನಾತ್ಮಕ ಲೇಖನಗಳಿಂದ ಉತ್ತರ ಕರ್ನಾಟಕ ಭಾಗದ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ರಾಮ ಮನಗೂಳಿ. ಪತ್ರಿಕೋದ್ಯದಲ್ಲಷ್ಟೆ ಅಲ್ಲ ನಾಡು ನುಡಿ ಜಲ ವಿಚಾರದಲ್ಲಿ ಹೋರಾಟಕ್ಕೂ ಇಳಿದಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದ ಹೋರಾಟದಲ್ಲಿ ಮನಗೂಳಿ ಭಾಗಿಯಾಗಿದ್ದರು. ಆ ಮೂಲಕ ಪತ್ರಕರ್ತರೆಂದರೆ ವರದಿ ಮಾಡುವುದಷ್ಟೇ ಅಲ್ಲ, ಜನಪರ ಹೋರಾಟದಲ್ಲೂ ತೊಡಗಿಕೊಳ್ಳುವಂತಹ ಸಾಮಾಜಿಕ ಕಾಳಜಿಯನ್ನ ಬಿತ್ತಿದ್ದವರು ರಾಮ ಮನಗೂಳಿ.
ಹಿರಿಯ ಪತ್ರಕರ್ತ ರಾಮ ಮನಗೂಳಿ ಅಗಲಿಕೆ ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.