Karnataka Rains: ಕರ್ನಾಟಕದಲ್ಲಿ ವರುಣನ ಆರ್ಭಟಕ್ಕೆ ಅಪಾರ ಬೆಳೆ ಹಾನಿ: ಇನ್ನೂ 4 ದಿನ ಭಾರೀ ಮಳೆ

Published : May 03, 2022, 06:43 AM IST
Karnataka Rains: ಕರ್ನಾಟಕದಲ್ಲಿ ವರುಣನ ಆರ್ಭಟಕ್ಕೆ ಅಪಾರ ಬೆಳೆ ಹಾನಿ: ಇನ್ನೂ 4 ದಿನ ಭಾರೀ ಮಳೆ

ಸಾರಾಂಶ

*   ದಕ್ಷಿಣದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ *  ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯಿಂದ ಮಳೆ *  ಸಿಡಿಲಿಗೆ ಮನೆಗೋಡೆ ಕುಸಿದು ಒಬ್ಬ ಸಾವು  

ಬೆಂಗಳೂರು(ಮೇ.03): ಬಂಗಾಳ ಕೊಲ್ಲಿಯಲ್ಲಿ(Bay of Bengal) ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮೇ 6ರವರೆಗೆ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌(Yellow Alert) ಘೋಷಿಸಲಾಗಿದೆ. ಸೋಮವಾರ ಮಂಡ್ಯದ ಮಳವಳ್ಳಿಯಲ್ಲಿ 31 ಮಿಮೀ, ಕೊಡಗಿನ ಗೋಣಿಕೊಪ್ಪದಲ್ಲಿ 34 ಮಿಮೀ, ಕೆ.ಆರ್‌.ಪೇಟೆಯಲ್ಲಿ 26 ಮಿಮೀ ಹಾಗೂ ಬೆಂಗಳೂರು ನಗರದಲ್ಲಿ 21 ಮಿಮೀ ಮಳೆ ಸುರಿದಿದೆ.

ರಾಜ್ಯದ(Karnataka) ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮೇ 4ರಿಂದ 6ರವರೆಗೆ ಗುಡುಗು ಮಿಂಚಿನಿಂದ ಕೂಡಿದ ಜೋರು ಮಳೆಯಾಗುವ(Rain) ಸಾಧ್ಯತೆ ಇದೆ.

ಬೆಂಗ್ಳೂರಲ್ಲಿ ವರುಣನ ಅಬ್ಬರ: 200 ಮನೆಗಳಿಗೆ ನುಗ್ಗಿದ ನೀರು, ಬಿಬಿಎಂಪಿಗೆ ಸಾರ್ವಜನಿಕರ ಹಿಡಿಶಾಪ

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಧಾರವಾಡ, ರಾಯಚೂರು, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಬೀದರ್‌, ವಿಜಯಪುರ, ಯಾದಗಿರಿ, ಗದಗ ಜಿಲ್ಲೆಗಳ ಕೆಲವೆಡೆ ತುಂತುರು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ(Department of Meteorology) ಮಾಹಿತಿ ನೀಡಿದೆ.

7 ಜಿಲ್ಲೆಗಳಲ್ಲಿ ತಾಪಮಾನ ಏರಿಕೆ: 

ದಕ್ಷಿಣ ಒಳನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೋಲಾರ ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ(Temperature) ತುಸು ಇಳಿಕೆಯಾಗಿದೆ. ಆದರೆ, ಉತ್ತರ ಕರ್ನಾಟಕ(North Karnataka) ಜಿಲ್ಲೆಗಳಲ್ಲಿ ಉಷ್ಣಾಂಶ ಯಥಾಸ್ಥಿತಿ ಮುಂದುವರಿದಿದೆ.

ಗರಿಷ್ಠ ತಾಪಮಾನದಲ್ಲಿ ಕಲಬುರಗಿಯಲ್ಲಿ 42.4 ಡಿಗ್ರಿ ಸೆಲ್ಸಿಯಸ್‌, ಕೋಲಾರದ ಕೆಜಿಎಫ್‌ನಲ್ಲಿ 42.4, ರಾಯಚೂರಿನಲ್ಲಿ 42 ಯಾದಗಿರಿಯಲ್ಲಿ 41.8, ವಿಜಯಪುರದಲ್ಲಿ 40.1, ಬೀದರ್‌ 41, ಕೊಪ್ಪಳದಲ್ಲಿ 40, ಬಾಗಲಕೋಟೆಯಲ್ಲಿ 39, ಬಳ್ಳಾರಿಯಲ್ಲಿ 39.6 ಮತ್ತು ಬೆಂಗಳೂರಿನಲ್ಲಿ 33.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಆದರೆ ಕೊಡಗಿನಲ್ಲಿ 26 ಡ್ರಿಗಿ ಸೆಲ್ಸಿಯಸ್‌( ಕಡಿಮೆ) ಉಷ್ಣಾಂಶ ದಾಖಲಾಗಿದೆ.

ರಾಜ್ಯದಲ್ಲಿ ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ

ದಕ್ಷಿಣ ಕರ್ನಾಟಕದ(South Karnataka) ಅಲ್ಲಲ್ಲಿ ಅಕಾಲಿಕ ಮಳೆ ಮುಂದುವರಿದಿದ್ದು ಮಾವು, ತೆಂಗು, ದ್ರಾಕ್ಷಿ ಸೇರಿದಂತೆ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಜೊತೆಗೆ ಭಾರೀ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮನೆಗೋಡೆ ಕುಸಿದು ವ್ಯಕ್ತಿ ಮೃತಪಟ್ಟಘಟನೆ ಚಾಮರಾಜನಗರ ಜಿಲ್ಲೆಯಿಂದ ವರದಿಯಾಗಿದೆ. ಹಳೇ ಮೈಸೂರು ಭಾಗದ ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಕೆಲಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ.

ಚಾಮರಾಜನಗರ ಕಾಡಂಚಿನ ಗ್ರಾಮವಾದ ಕುಳ್ಳೂರಿನಲ್ಲಿ ಸೋಮವಾರ ಮುಂಜಾನೆ ಮಣ್ಣಿನ ಗೋಡೆಗೆ ಸಿಡಿಲು ಬಡಿದ ಪರಿಣಾಮ ಗೋಡೆ ಕುಸಿದು ಮಹಾದೇವ(53) ಎಂಬವರು ಮಲಗಿದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯ ಕುರುಬರಹಳ್ಳಿಯಲ್ಲಿ ಕೊಟ್ಟಿಗೆ ಕುಸಿದು ಇಬ್ಬರು ವೃದ್ಧೆಯರು ಗಾಯಗೊಂಡಿದ್ದಾರೆ. ತೇಗದ ಮರಕ್ಕೆ ಕಟ್ಟಿಹಾಕಿದ್ದ ಎಮ್ಮೆಯೊಂದು ಮರ ಬಿದ್ದ ಕಾರಣ ಅದರಡಿಯೇ ಮೃತಪಟ್ಟಪ್ರಸಂಗ ಕೆ.ಆರ್‌.ಪೇಟೆಯ ಐಚನಹಳ್ಳಿಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರಿನ ಆಲಂಬಾಡಿ ಗ್ರಾಮದಲ್ಲಿ ಸಿಡಿಲಿಗೆ 5 ಕುರಿಗಳು ಮೃತಪಟ್ಟಿವೆ.

ಕರ್ನಾಟಕದಲ್ಲಿ ಬೇಸಿಗೆ ಮಳೆ ಆರ್ಭಟ: 9 ಮನೆ ಕುಸಿತ, ಕೊಪ್ಪಳ, ವಿಜಯನಗರದಲ್ಲಿ ಬೆಳೆ ನಾಶ

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ, ನಾಗಮಂಗಲ, ಮಳವಳ್ಳಿಗಳಲ್ಲಿ ಬಿರುಗಾಳಿಯಿಂದ ಕೂಡಿದ ಮಳೆಯಾಗಿದ್ದು 1 ಮನೆಗೆ ಸಂಪೂರ್ಣ ಹಾನಿಯಾಗಿದೆ. ಹತ್ತಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿಗಳು ಹಾರಿ ಹೋಗಿವೆ. 20ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಗಾಳಿಯ ರಭಸಕ್ಕೆ ಮುರಿದು ಬಿದ್ದಿದ್ದು 100ಕ್ಕೂ ಹೆಚ್ಚು ತೆಂಗಿನಮರಗಳು ಧರಾಶಾಹಿಯಾಗಿವೆ.

ಮಾವು, ಬೀನ್ಸ್‌, ದ್ರಾಕ್ಷಿಗೆ ಹಾನಿ: 

ಕೋಲಾರ ಜಿಲ್ಲೆಯ ಹಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ಶ್ರೀನಿವಾಸಪುರ ತಾಲೂಕು ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಅಲ್ಲಲ್ಲಿ ಬೀಸಿದ ಬಿರುಗಾಳಿಗೆ ಮಾವು ಬೆಳೆಗೆ ಹಾನಿಯಾಗಿದ್ದರೆ(Crop Damage), ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲವು ಕಡೆ ಆಲಿಕಲ್ಲು ಸಹಿತ ಮಳೆಗೆ ಅಪಾರ ಪ್ರಮಾಣದಲ್ಲಿ ಮಾವು, ಬೀನ್ಸ್‌ ಹಾಗೂ ದ್ರಾಕ್ಷಿ ನೆಲಕಚ್ಚಿರುವ ಪರಿಣಾಮ ರೈತರು ಕಣ್ಣೀರು ಸುರಿಸುವಂತಾಗಿದೆ. ರೈತರ ರೇಷ್ಮೆ ಕೃಷಿಗೆ ನಿರ್ಮಿಸಿದ್ದ ತಾತ್ಕಲಿಕ ಶೆಡ್‌ಗಳಿಗೂ ಹಾನಿ ಆಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 15 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!