ವೀರಶೈವ ಲಿಂಗಾಯತ ಸಮಾಜದಲ್ಲಿ ಎಲ್ಲ ಒಳ ಪಂಗಡಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಿದೆ. ನಮ್ಮನ್ನು ಒಡೆದು ಆಳುವ ಪ್ರಯತ್ನಗಳು ನಡೆಯುತ್ತಿದ್ದು, ಭವಿಷ್ಯದ ದಿನಗಳಲ್ಲಿ ಸಮಾಜದ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿ (ಜೂ.25) ವೀರಶೈವ ಲಿಂಗಾಯತ ಸಮಾಜದಲ್ಲಿ ಎಲ್ಲ ಒಳ ಪಂಗಡಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಿದೆ. ನಮ್ಮನ್ನು ಒಡೆದು ಆಳುವ ಪ್ರಯತ್ನಗಳು ನಡೆಯುತ್ತಿದ್ದು, ಭವಿಷ್ಯದ ದಿನಗಳಲ್ಲಿ ಸಮಾಜದ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿ ನಗರದ ವೀರಶೈವ ಲಿಂಗಾಯತ ಮಹಿಳಾ ಉಚಿತ ವಸತಿಗೃಹ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡದ ಆವರಣದಲ್ಲಿ ಶನಿವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ ವಿಧಾನಸಭೆ ಆಯ್ಕೆಯಾದ ಶಾಸಕ, ಸಚಿವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿದ ಬಳಿಕ ಮಾತನಾಡಿದರು. ಸಮಾಜದಲ್ಲಿನ ಒಗ್ಗಟ್ಟಿನಿಂದಲೇ ಹೆಚ್ಚಿನ ಶಾಸಕರು ಆಯ್ಕೆಯಾಗುತ್ತಿದ್ದೇವೆ. ಆದರೆ, ಸದ್ಯ ಪರಿಸ್ಥಿತಿ ಬದಲಾಗಿದ್ದು,ಭವಿಷ್ಯದಲ್ಲಿ ನಾವು ಇಷ್ಟುಜನರು ಆಯ್ಕೆಯಾಗುವುದು ಕಷ್ಟವಾಗಲಿದೆ ಎಂದರು. ವೀರಶೈವ ಲಿಂಗಾಯತ ಸಮಾಜದ ಎಲ್ಲ ನಾಯಕರು ವೇದಿಕೆಗಳ ಮೇಲೆ ಮಾತ್ರ ಒಗ್ಗಟ್ಟು ಪ್ರದರ್ಶಿಸುತ್ತಾರೆ. ವೇದಿಕೆಯಿಂದ ಕೆಳಗಿಳಿದ ಬಳಿಕ ಬೇರೆ ಬೇರೆ ರೀತಿಯ ರೂಪರೇಷನಗಳನ್ನು ಪಡೆಯುತ್ತೇವೆ. ಸಮಾಜದಲ್ಲಿ ಒಳ ಪಂಗಡಗಳು ಮೀಸಲಾತಿ ಇನ್ನಿತರ ಕಾರಣಕ್ಕಾಗಿ ಬೇರೆ ಬೇರೆ ಕಡೆ ಮುಖ ಮಾಡಲು ಆರಂಭಿಸಿದ್ದು, ಭವಿಷ್ಯದ ದಿನಗಳಲ್ಲಿ ಸಮಾಜವು ಬಹಳ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಈಗಿನಿಂದಲೇ ಎಲ್ಲ ಒಳ ಪಂಗಡಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕು. ಇದರ ಜವಾಬ್ದಾರಿಯನ್ನು ಸಮಾಜದ ಸ್ವಾಮೀಜಿಗಳು ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಧಾನ, ಧರ್ಮ ಮಾಡಿ ಸತ್ಕಾರ್ಯಗಳಲ್ಲಿ ತೊಡಗಬೇಕು: ಶಾಸಕ ಲಕ್ಷ್ಮಣ ಸವದಿ
ಸಮಾಜದ ಮಕ್ಕಳಿಗೆ ಹಾಸ್ಟೆಲ್… ನಿರ್ಮಾಣ ಆಗುವ ಕೆಲಸಕ್ಕೆ ಕೈ ಹಾಕಿದ್ದಿರಿ, ನನ್ನ ಕೈಲಾದಷ್ಟುನಾನೂ ಸಹ ಹಾಸ್ಟೆಲ… ನಿರ್ಮಾಣಕ್ಕೆ ಸಹಕಾರ ಕೊಡುತ್ತೇನೆ ಎಂದು ಭರಸವೆ ನೀಡಿದರು. ನಾವೆಲ್ಲರೂ ವೇದಿಕೆಯಲ್ಲಿದ್ದಾಗ ಮಾತ್ರ ನಮ್ಮಲ್ಲಿ ಒಕ್ಕಟ್ಟು ಪ್ರದರ್ಶನ ಆಗುತ್ತದೆ. ಕೆಳಗೆ ಇಳಿದ ಮೇಲೆ ಒಕ್ಕಟ್ಟು ಮುರಿದು ಹೋಗುತ್ತದೆ. ಪ್ರಭಾಕರ ಕೋರೆಯವರೆ ಇದು ನಿಮ್ಮ ನೇತೃತ್ವದಲ್ಲಿ ಸರಿಯಾಗಬೇಕು, ಒಳಪಂಗಡಗಳ ಮೂಲಕ ನಾವು ಹೋರಾಟ ಮಾಡುತ್ತ ಹೋದರೆ ಸಮಾಜಕ್ಕೆ ತೊಂದರೆ ಆಗುತ್ತದೆ. ಇದು ಹೀಗೆ ಮುಂದುವರೆದರೆ ಈಗ ಸೇರಿರುವ 10 ಪರ್ಸಂಟ್ ಜನ ಮಾತ್ರ ಸೇರುತ್ತಾರೆ. ಇದೆ ರೀತಿ ಮುಂದುವರೆದರೆ ನಮ್ಮನ್ನು ಒಡೆದು ಆಳುವ ನೀತಿ ಆಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಪ್ರಸ್ತುತ ವೀರಶೈವ ಲಿಂಗಾಯತ ಸಮಾಜದಲ್ಲಿ ಒಳಪಂಗಡಗಳನ್ನು ಬೇರೆ ಬೇರೆ ಮಾಡುವ ಕೆಲಸ ನಡೆಯುತ್ತಿದೆ. ನಾವೆಲ್ಲಾ ಒಗ್ಗಟ್ಟಿನಿಂದ ಸಮಾಜದ ಕೆಲಸ ಮಾಡಬೇಕಿದೆ. ಡಾ.ಪ್ರಭಾಕರ ಕೋರೆ ಅವರ ನೇತೃತ್ವ ವಹಿಸಿಕೊಳ್ಳಬೇಕು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೋಲ್ಲೆ ಮಾತನಾಡಿ, ಸಮಾಜದ ಅಭಿವೃದ್ಧಿಯಲ್ಲಿ ವೀರಶೈವ ಲಿಂಗಾಯತ ಕೊಡುಗೆ ಅಪಾರ ಇದೆ. 12 ಶತಮಾನದಿಂದಲೇ ಲಿಂಗಾಯತ ಸಮಾಜ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದೆ. ನಾವೆಲ್ಲಾ ಪಕ್ಷಾತೀತವಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಸಮಾಜದಲ್ಲಿ ನೊಂದವರ ಕಣ್ಣೀರು ಒರೆಸುವ ಕೆಲಸ ಆಗಬೇಕಿದೆ, ನಮ್ಮ ಸಮಾಜದ ಲಕ್ಷಾಂತರ ಮಠದ ಪೀಠಾಧಿಪತಿಗಳು ಅನ್ನದಾನ, ವಿದ್ಯಾದಾನ ಮಾಡುತ್ತಿದ್ದಾರೆ. ನಮ್ಮ ವೀರಶೈವ ಲಿಂಗಾಯತ ಸಮಾಜದಲ್ಲಿನ ಹೆಣ್ಣು ಮಕ್ಕಳಿಗೆ ಉಚಿತ ವಸತಿ ನಿಲಯ ನಿರ್ಮಾಣಕ್ಕೆ ಕೈಲಾದಷ್ಟುಆರ್ಥಿಕ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಡಾ. ಪ್ರಭಾಕರ ಕೋರೆ ಮಾತನಾಡಿ, ಮುಂದಿನ ಜನಗಣತಿಯಲ್ಲಿ ಲಿಂಗಾಯತ ಸಮುದಾಯದವರು ವೀರಶೈವ ಲಿಂಗಾಯತ ಎಂದು ನಮೂದು ಮಾಡಬೇಕು. ವೀರಶೈವ ಲಿಂಗಾಯತ ಅಂತ ಬರೆಯದಿದ್ದರೆ ಲಿಂಗಾಯತರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಸಭೆಯಲ್ಲಿ ಭಾಷಣದ ವೇಳೆ ನೆರೆದ ಜನರಿಗೆ ಮನವಿ ಮಾಡಿದರು. ನಮ್ಮ ಸಮಾಜದ ವಿದ್ಯಾರ್ಥಿಗಳು ಎಸ್, ಎಸ್ಟಿಹಾಸ್ಟೇಲ… ನಲ್ಲಿ ಇರಬೇಕಾದ ಪರಿಸ್ಥಿತಿ ಇದೆ. ಅದನ್ನು ನೋಡಿ ನಮಗೆ ಬಹಳ ಕೆಟ್ಟಅನಿಸುತ್ತದೆ. ಪ್ರತಿ ಜಿಲ್ಲೆಯಲ್ಲಿ ಬಡ ಹೆಣ್ಣು ಮಕ್ಕಳ ಸಲುವಾಗಿ ಉಚಿತ ಹಾಸ್ಟೆಲ… ಕಟ್ಟುವ ನಿರ್ಣಯ ಮಾಡಿದ್ದು, ಬೆಂಗಳೂರಿನಲ್ಲಿ ಮೊದಲನೇ ಹಾಸ್ಟೇಲ… ನಿರ್ಮಾಣ ಆಗಿದೆ. ಅದಾದ ಬಳಿಕ ಎರಡನೇ ಹಾಸ್ಟೆಲ… ಬೆಳಗಾವಿಯಲ್ಲಿ ನಿರ್ಮಾಣವಾಗುತ್ತಿದೆ. ವಾಡಿಕೆಯ ಪ್ರಕಾರ ನಮ್ಮವರನ್ನು ಕರೆದು ಅವರಿಗೆ ಸತ್ಕಾರ ಮಾಡುತ್ತೇವೆ, ಸಮಾಜದ ಜವಾಬ್ದಾರಿ ಅವರ ಮೇಲಿದೆ ಎನ್ನುವುದನ್ನು ಅರಿವು ಮೂಡಿಸಲಿಕ್ಕೆ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಯಾವ ಪಕ್ಷದಿಂದಾದರೂ ಬನ್ನಿ, ಎಲ್ಲಿಂದಾದರೂ ಬನ್ನಿ ನೀವು ಆಯ್ಕೆ ಆಗುವಲ್ಲಿ ಸಮಾಜ ನಿಮ್ಮ ಹಿಂದೆ ನಿಂತಿದೆ. ನಮಗಿಂತ ಹಣಕಾಸಿನ ವ್ಯವಸ್ಥೆಯಲ್ಲಿ ಮುಂದುವರೆದ ಸಮಾಜಕ್ಕೆ ಈಗ ಮೀಸಲಾತಿ ಸಿಕ್ಕಿದೆ. ನಮ್ಮ ಸಮಾಜದಲ್ಲಿ ಬಡತನ ಇನ್ನೂ ಇದೆ, ಸಾಂಖ್ಯಿಕವಾಗಿ ಎಲ್ಲಾ ದಾಖಲಾತಿಗಳನ್ನು ನೀಡಿದ್ದೇವೆ. ವೀರಶೈವ ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಹಾಕಿ ಎಂದು ಮನವಿ ಮಾಡಿದರು.
ದೇಶದಲ್ಲಿ ಆರ್ಥಿಕವಾಗಿ ಮುಂದುವರಿದಿರುವ ಸಮಾಜಕ್ಕೆ ಎಲ್ಲ ರೀತಿಯ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ವೀರಶೈವ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಇಲ್ಲಿಯವರೆಗೆ ಸಿಕ್ಕಿಲ್ಲ. ಪ್ರಸ್ತುತ ನಮ್ಮ ಸಮಾಜದ ಪರಿಸ್ಥಿತಿ ಬಹಳ ಕೆಟ್ಟಾಗಿದ್ದು, ಅದೆಷ್ಟುಕುಟುಂಬಗಳು ಬಡತನದಲ್ಲಿಯೇ ದಿನ ಕಳೆಯುತ್ತಿವೆ. ಯಾರು ಕೂಡ ನಮ್ಮ ಸಮಾಜದಲ್ಲಿನ ಸಮಾಜದಲ್ಲಿ ಒಳ ಪಂಗಡಗಳನ್ನು ಬೇರೆ ಬೇರೆ ಮಾಡಬೇಡಿ. ಬದಲಾಗಿ ಎಲ್ಲ ಒಳ ಪಂಗಡಗಳನ್ನು ಒಂದೂಗೂಡಿಸಿ ವೀರಶೈವ ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕೆಲಸ ಆಗಬೇಕಿದೆ. ಈ ವಿಷಯ ಕುರಿತು ಸಂಸತ್ತಿನಲ್ಲಿ ನಿರಂತರವಾಗಿ ಧ್ವನಿ ಎತ್ತಿಕೊಂಡು ಬಂದಿದ್ದೇನೆ. ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿಯಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯಮಹಾಂತೇಶ ಕವಟಗಿಮಠ, ವೀರಣ್ಣ ಮತ್ತಿಕಟ್ಟಿ, ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಪಾಲಿಕೆ ಸದಸ್ಯರು, ಸಮಾಜದ ಮುಖಂಡರು ಸೇರಿದಂತೆ ಮೊದಲಾದವರು ಇತರರಿದ್ದರು.
ನೀರಾವರಿ ಯೋಜನೆಗಳ ಲಾಭ ರೈತರಿಗೆ ಶೀಘ್ರ ದೊರಕಬೇಕು: ಶಾಸಕ ಲಕ್ಷ್ಮಣ ಸವದಿ
ಬೆಳಗಾವಿ ಜಿಲ್ಲೆಯ ನೂತನ ಲಿಂಗಾಯತ ಸಚಿವರು, ಶಾಸಕರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ಬೆಳಗಾವಿ ಘಟಕದಿಂದ ಆಯೋಜಿಸಲಾಗಿದ್ದ ಗೌರವ ಸನ್ಮಾನ ಕಾರ್ಯಕ್ರಮಕ್ಕೆ ಕೆಎಲ…ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಮಹಾಂತೇಶ ಕೌಜಲಗಿ, ನಿಖಿಲ… ಕತ್ತಿ, ಬಾಬಾಸಾಹೇಬ… ಪಾಟೀಲ ಸಂಸದೆ ಮಂಗಲ ಅಂಗಡಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಭಾಗಿಯಾಗಿದ್ದರು. ಆದರೆ ಸಚಿವೆ ಲಕ್ಷ್ಮೇ ಹೆಬ್ಬಾಳಕರ, ಗಣೇಶ ಹುಕ್ಕೇರಿ, ಅಶೋಕ ಪಟ್ಟಣ, ರಾಜು ಕಾಗೆ, ಪ್ರಕಾಶ ಹುಕ್ಕೇರಿ ಕಾರ್ಯಕ್ರಮಕ್ಕೆ ಗೈರಾಗಿದ್ದರು.