ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಬರಲಿ : ಪ್ರಕಾಶ್ ರೈ

Published : Oct 05, 2018, 03:22 PM ISTUpdated : Oct 05, 2018, 03:36 PM IST
ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಬರಲಿ : ಪ್ರಕಾಶ್ ರೈ

ಸಾರಾಂಶ

ತಾವು ಬರೆದಿರುವ ಪುಸ್ತಕವನ್ನು ಮೈಸೂರಿನಲ್ಲಿ  ಬಿಡುಗಡೆಗೆ ಮಾಡುತ್ತಿದ್ದೇನೆ. ಮನಸ್ಸಿನ ಭಾವನೆ ಅಂಕಣವಾಗಿ, ಜನರಿಗೆ ತಲುಪಿಸೋ ಪ್ರಯತ್ನ ಮಾಡುತ್ತಿದ್ದೇನೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ. 

ಬೆಂಗಳೂರು : ನಟ ಪ್ರಕಾಶ್ ರೈ ಅವರು ಬರೆದಿರುವ  "ಅವರವರ ಭಾವಕ್ಕೆ" ಪುಸ್ತಕ ಅಕ್ಟೋಬರ್ 7 ಕ್ಕೆ ಬಿಡುಗಡೆಯಾಗಲಿದೆ.  ಪುಸ್ತಕ ಬಿಡುಗಡೆ ಸಂಬಂಧ ಮೈಸೂರಿನ ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಟಿ ನಡೆಸಿ ಈ ವಿಚಾರ ತಿಳಿಸಿದ್ದಾರೆ. 

ಮೈಸೂರು ಎಂದರೆ ತಮಗೆ ಹೆಚ್ಚಿನ ಪ್ರೀತಿ ಇದ್ದು,  ಹೀಗಾಗಿ ಮೈಸೂರಿನಲ್ಲಿ ಪುಸ್ತಕ ಬಿಡುಗಡೆಗೆ ಮಾಡುತ್ತಿದ್ದೇನೆ. ಮನಸ್ಸಿನ ಭಾವನೆ ಅಂಕಣವಾಗಿ, ಜನರಿಗೆ ತಲುಪಿಸೋ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.  ಬರವಣಿಗೆಯಲ್ಲಿ ನನಗೆ ಸಂತೋಷ, ಆತ್ಮತೃಪ್ತಿ ಸಿಕ್ಕಿದೆ. ಎರಡನೇ ಪುಸ್ತಕ ಜನರ ಮುಂದೆ ಇದೆ ಅನ್ನೋದೇ ಅಚ್ಚರಿಯ ಸಂಗತಿಯಾಗಿದ್ದು, ಮೊದಲ ಪ್ರತಿಯನ್ನು ಕವಿ ದೇವನೂರು ಮಹದೇವ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಿದ್ದಾರೆ. 

ಇನ್ನು ಇದೇ ವೇಳೆ ಮತ್ತೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎನ್ನುವ ಸಮೀಕ್ಷೆ ವಿಚಾರವಾಗಿ ಮಾತನಾಡಿದ ಅವರು, ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬರಲಿ.  ಸಾಕಷ್ಟು ಸಮೀಕ್ಷೆ, ಊಹಾಪೋಹ ನೋಡುತ್ತಿದ್ದೇವೆ. ಎಲ್ಲವನ್ನೂ ಈಗಲೇ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದರು.

ಇನ್ನು ನಟ ದುನಿಯಾ ವಿಜಯ್ ಪ್ರಕರಣ ಸಂಬಂಧಿಸಿದಂತೆಯೂ ಪ್ರತಿಕ್ರಿಯಿಸಿದ ಅವರು ನಟರಿಗೆ ರಾಜ್ ಕುಮಾರ್ ಮಾದರಿಯಾಗಿದ್ದು ಅವರಂತೆ ಬದುಕು ನಡೆಸಬೇಕು ಎಂದು ಹೇಳಿದರು.  ಇನ್ನು ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ನಟರು ಕಲಿಯಬೇಕಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
Karnataka News Live: ಪುರುಷರಿಗಿಲ್ಲದ ಕಟ್ಟುಪಾಡು ನಮಗೇಕೆ? - ಮಲೈಕಾ